ಕುಂಟಿಕಾನ ಮಠದಲ್ಲಿ ಬಲಿವಾಡು ಕೂಟ

New Project (28)
Published on

ಬದಿಯಡ್ಕ: ಮಕರ ಸಂಕ್ರಾಂತಿಯ ಬಲಿವಾಡು ಕೂಟ ಮಂಗಳವಾರ ಕುಂಟಿಕಾನ ಮಠದಲ್ಲಿ ನಡೆಯಿತು. ಬೆಳಗ್ಗೆ ರೋಹಿಣಿ ಎಡನಾಡು ಮತ್ತು ಸ್ಕಂದ ದಿವಾಣ ಅವರ ಮೃದಂಗ ವಾದನದೊಂದಿಗೆ ಭಕ್ತಿ ಸಂಗೀತ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಾಧಕರಾದ ನಿತ್ಯಾನಂದ ಶೆಣೈ ಬದಿಯಡ್ಕ ಹಾಗೂ ತರಕಾರಿ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ಬಾಲಸುಬ್ರಹ್ಮಣ್ಯ ಭಟ್ ಅವರನ್ನು ಗೌರವಿಸಲಾಯಿತು. ಡಾ.ನಾಗರಾಜ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಡಾ.ವೇಣುಗೋಪಾಲ ಕಳೆಯತ್ತೂಡಿ ಹಾಗೂ ಪೆರ್ವ ಸತ್ಯಶಂಕರ ಭಟ್ ಅಭಿನಂದನಾ ಭಾಷಣಗೈದರು. ಶ್ಯಾಮಪ್ರಸಾದ ಕುಳಮರ್ವ ವಂದಿಸಿದರು. ಬಳಿಕ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net