ನಾಳೆಯಿಂದ ಬಾಳಯ್ಯ ಅಜ್ಜನವರ ಜಾತ್ರೋತ್ಸವ

2Kolavi1
Published on

ಸಂಗಮೇಶ ಅಂಗಡಿ ಕೊಳವಿ

ಗೋಕಾಕ ತಾಲೂಕಿನ ಪಂಚ ಮಠಗಳಲ್ಲಿ ಒಂದಾದ ಶ್ರೀ ಪುಣ್ಯೇತ್ರ ತವಗ ಮಠದ ಶ್ರೀ ಸದ್ಗುರು ಬಾಳಯ್ಯ ಅಜ್ಜನವರ ಜಾತ್ರಾ ಮಹೋತ್ಸವ ಮಾ.4ರಿಂದ 6ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.

ಬಾಳಯ್ಯ ಅಜ್ಜನವರ ಹಿನ್ನೆಲೆ: ಬಾಳಯ್ಯ ಅಜ್ಜನವರು 13ನೇ ಶತಮಾನದಲ್ಲಿ ಅಂಕಲಗಿ ಶ್ರೀ ಅಡಿವಿಸಿದ್ದೇಶ್ವರ ಸ್ವಾಮೀಜಿ ಅವರ ಸೇವೆಗೆದು ಶ್ರೀಗಳ ಕಪೆಗೆ ಪಾತ್ರರಾದರು. ಬಾಳಯ್ಯನ ಸೇವೆಗೆ ಮೆಚ್ಚಿದ ಶ್ರೀಗಳು "ನೀನು ಸೂರ್ಯಾಸ್ತ ಆಗುವ ದಿಕ್ಕಿಗೆ ಹೋಗಿ ವಾಸ್ತವ್ಯ ಮಾಡು, ಅಲ್ಲಿ ನೀನು ಕೀರ್ತಿವಂತನಾಗುವೆ' ಎಂದು ಹೇಳಿ ಒಂದು ಮಗಿ ಅಂಬಲಿ, ಕಜ್ಜಾಯ (ರೊಟ್ಟಿ ) ಬೆತ್ತವನ್ನು ನೀಡಿ ಆಶೀರ್ವದಿಸಿ ಕಳುಹಿಸಿದರು.

ಆಗ ಬಾಳಯ್ಯನವರು ತಮ್ಮ ಕುಟುಂಬ ಪರಿವಾರದೊಂದಿಗೆ ತವಗ ಗ್ರಾಮಕ್ಕೆ ತಲುಪಿ ವಾಸ್ತವ್ಯ ಹೂಡಿದರು. ಭಕ್ತರನ್ನು ಉದ್ದರಿಸುತ್ತ ಅನೇಕ ಪವಾಡ, ಲೀಲೆಗಳನ್ನು ಮಾಡಿ ತವಗ ಮಠದ ಕೀರ್ತಿ ಹೆಚ್ಚಿಸಿ ರಾಜ್ಯ ಹಾಗೂ ಗೋವಾ, ಮಹಾರಾಷ್ಟ್ರಗಳಲ್ಲಿ ಅಪಾರ ಭಕ್ತರನ್ನು ಹೊಂದಿದ ಪುಣ್ಯೇತ್ರವಾಗಿದೆ. ಬಾಳಯ್ಯ ಅಜ್ಜನ ಅಂಬಲಿ ಎಂಬ ಭಕ್ತರ ದಿವ್ಯ ಮಹಾಪ್ರಸಾದವಾಗಿದೆ.

ಮಠದ ಪರಂಪರೆಯನ್ನು ಬ್ರಹ್ಮಶ್ರೀ ಸಿದ್ದಲಿಂಗಯ್ಯ ಸ್ವಾಮೀಜಿ ಅವರು ಮುನ್ನಡೆಸುತ್ತಿದ್ದಾರೆ. ಪ್ರತಿ ವರ್ಷವೂ ಮಹಾಶಿವರಾತ್ರಿ ನಂತರ ಜಾತ್ರಾ ಮಹೋತ್ಸವ ನೆರವೇರುವುದು.

ವಿವಿಧ ಕಾರ್ಯಕ್ರಮ: ಮಾ.4ರಂದು ಬೆಳಗ್ಗೆ 6 ಗಂಟೆಗೆ ದೇವರ ಗದ್ದುಗೆಗೆ ವಿಶೇಷ ಪೂಜಾಬಿಷೇಕ. ರಾತ್ರಿ 10 ಗಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಸುತ್ತಲಿನ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು. ಮಾ.5ರಂದು ಬೆಳಗ್ಗೆ 10 ಗಂಟೆಗೆ ಪ್ರಸಾದ ಪೂಜೆಯೊಂದಿಗೆ ಅನ್ನದಾಸೋಹ ಪ್ರಾರಂಭವಾಗಲಿದೆ. ಮಧ್ಯಾಹ್ನ 2 ಗಂಟೆಗೆ ಬ್ರಹ್ಮಶ್ರೀ ಸಿದ್ದಲಿಂಗಯ್ಯ ಸ್ವಾಮೀಜಿ ಅವರ 101ನೇ ತುಲಾಭಾರ ಕಾರ್ಯಕ್ರಮ ನೆರವೇರುವುದು.ಸಂಜೆ 5ಕ್ಕೆ ಶ್ರೀಗಳಿಂದ ಭವಿಷ್ಯವಾಣಿ ಇರಲಿದೆ. ರಾತ್ರಿ 10ಕ್ಕೆ ಬೆಲಾಟ ಹಮ್ಮಿಕೊಳ್ಳಲಾಗಿದೆ. ಮಾ.6ರಂದು ಬೆಳಗ್ಗೆ 8 ಗಂಟೆಗೆ ಶ್ರೀಗಳಿಂದ ಆಶೀರ್ವಾದ ನಂತರ ಎಲ್ಲ ದೇವರ ಬೀಳ್ಕೊಡುಗೆ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.

ಪುಣ್ಯೇತ್ರ ತವಗ ಗ್ರಾಮದ ಆರಾಧ್ಯದೆವ ಬಾಳಯ್ಯ ಅಜ್ಜನವರ ಮಹಿಮೆ ಅಪಾರ. ಅವರ ಅನುಗ್ರಹದಿಂದ ಮಳೆ ಬೆಳೆ ಸಂಪೂರ್ಣವಾಗಿ ರೈತರು ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದಾರೆ. ಲಾಂತರ ಭಕ್ತರ ಕಾಮಧೇನು ಬಾಳಯ್ಯ ಅಜ್ಜನವರ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಂಡು ಅವರ ಕೃಪೆಗೆ ಪಾತ್ರರಾಗಬೇಕು.

> ಮಹಾಲಿಂಗಪ್ಪ ನಿ. ಅಂಗಡಿ, ಅಜ್ಜನ ಭಕ್ತ, ಕೊಳವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net