ಪಡುಬಿದ್ರಿ ದೇವಸ್ಥಾನದಲ್ಲಿ ಬಾಲಾಲಯ ಶಿಲಾನ್ಯಾಸ

pdb
Published on

ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕ್ಷೇತ್ರ ತಂತ್ರಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ದೇಗುಲ ಈಶಾನ್ಯ ದಿಕ್ಕಿನಲ್ಲಿ ಎರಡು ಬಾಲಾಲಯಗಳಿಗೆ ವಿಧ್ಯುಕ್ತವಾಗಿ ಗುರುವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಸಾಮೂಹಿಕ ಪ್ರಾರ್ಥನೆ ಬಳಿಕ ತಂತ್ರಿ ರಾಧಾಕೃಷ್ಣ ಉಪಾಧ್ಯಾಯ ಅವರು ಶ್ರೀ ಮಹಾಗಣಪತಿ, ಶ್ರೀ ಮಹಾರುದ್ರ ದೇವರ ಬಾಲಾಲಯ ನಿರ್ಮಾಣಗಳಿಗೆ ದೇಗುಲ ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಹೆಜಮಾಡಿ ಪದ್ಮನಾಭ ಭಟ್, ಗಣಪತಿ ಭಟ್, ಗುರುರಾಜ ಭಟ್ ಎರ್ಮಾಳು, ಮತ್ತು ಶ್ರೀನಿವಾಸ ಉಪಾಧ್ಯಾಯ ಸಹಕಾರದಲ್ಲಿ ಅಡಿಗಲ್ಲನ್ನಿರಿಸಿದರು.

ದೇವಸ್ಥಾನ ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ನಡ್ಸಾಲುಗುತ್ತು, ಪ್ರಮುಖರಾದ ಪುಣೆ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಪಿ.ಕೆ.ಸದಾನಂದ, ನವೀನ್‌ಚಂದ್ರ ಜೆ.ಶೆಟ್ಟಿ, ಶೀನ ಪೂಜಾರಿ, ಗಣೇಶ್ ಪಡುಬಿದ್ರಿ, ಸಂಪತ್ ಕುಮಾರ್ ಆಚಾರ್ಯ, ವಿಜಯ ಹೆಗ್ಡೆ, ಅನಿಲ್ ಶೆಟ್ಟಿ, ಶ್ರೀಧರ ಆಚಾರ್, ವಿಶುಕುಮಾರ್ ಶೆಟ್ಟಿಬಾಲ್, ಮುರಳೀನಾಥ ಶೆಟ್ಟಿ, ಅಶೋಕ್ ಸಾಲ್ಯಾನ್, ಸುಕುಮಾರ್ ಶ್ರೀಯಾನ್, ಕಸ್ತೂರಿ ರಾಮಚಂದ್ರ, ರಮಾಕಾಂತ ರಾವ್, ಸುರೇಶ್ ಪಡುಬಿದ್ರಿ, ಹರಿಕೃಷ್ಣ ರಾವ್, ನಾರಾಯಣ ಕರ್ಕೇರ, ಪ್ರಕಾಶ್ ದೇವಾಡಿಗ, ಸತೀಶ್ ಆಚಾರ್ಯ, ಜಯ ಶೆಟ್ಟಿ ಪದ್ರ, ಧನಪಾಲ್ ಶೆಟ್ಟಿ, ರಾಜೇಶ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಧಾರ್ಮಿಕ ಕಾರ್ಯಕ್ರಮ

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಪೂರ್ವಭಾವಿಯಾಗಿ ಹಲವಾರು ವಿಧ್ಯುಕ್ತ ಕಾರ್ಯಕ್ರಮ ನಿರ್ದಿಷ್ಟ ದಿನಗಳಲ್ಲಿ ದೇವಳದ ತಂತ್ರಿ ಕಂಬಳ ಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಸಂಪನ್ನಗೊಳ್ಳಲಿವೆ. ಮಾ.30ರಂದು ಬೆಳಗ್ಗೆ 9 ಗಂಟೆಗೆ ದೇವತಾ ಪ್ರಾರ್ಥನೆ ಹಾಗೂ ವಿಜಯ ಗಣಪತಿಯಾಗ, 31ರಂದು ಬೆಳಗ್ಗೆ 9ಕ್ಕೆ ಅಯುತ ಸಂಖ್ಯಾ (10000) ಶಕ್ತಿ ಪಂಚಾಕ್ಷರೀ ಮಂತ್ರ ಯಾಗ, ಏ.1ರಂದು 9ಗಂಟೆಯಿಂದ ಅಯುತ ಸಂಖ್ಯಾ ಗಣಪತಿ ಮೂಲಮಂತ್ರ ಯಾಗ, 2ರಂದು ಬೆಳಗ್ಗೆ 7.30ರಿಂದ ಪೂರ್ಣಮೃತ್ಯುಂಜಯ ಯಾಗ, ಸಂಜೆ 5.30ರಿಂದ ಬಾಲಾಲಯಗಳಲ್ಲಿ ವಾಸ್ತು ಹಾಗೂ ರಾಕ್ಷೋಘ್ನಯಾಗಾದಿ ಪ್ರಕ್ರಿಯೆ, 3ರಂದು ಬೆಳಗ್ಗೆ 9.20ಕ್ಕೆ ಬಾಲಾಲಯಗಳಲ್ಲಿ ದೇವರ ಪ್ರತಿಷ್ಠಾಪನೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net