ವಿದ್ಯಾ ಚೌಡೇಶ್ವರಿ ಮಠದ ಬಾಲ ಮಂಜುನಾಥ ಬಂಧನ; ದೂರು ಕೊಟ್ಟು ಸಿಕ್ಕಿಬಿದ್ದ ಸ್ವಾಮೀಜಿ

bala manjunatha
Published on

ಕುಣಿಗಲ್: ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರನಹಳ್ಳಿ ಶ್ರೀ ವಿದ್ಯಾಚೌಡೇಶ್ಚರಿ ಮಹಾ ಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿಗಳನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಚರ್ಮರೋಗ ಚಿಕಿತ್ಸೆ ನೀಡುವ ನೆಪದಲ್ಲಿ ಬೆತ್ತಲೆ ವಿಡಿಯೋ ಮಾಡಿ ತನ್ನನ್ನು ಬ್ಲಾಕ್​ಮೇಲ್ ಮಾಡುತ್ತಿರುವುದಾಗಿ 6 ಮಂದಿ ವಿರುದ್ಧ ದೂರು ದಾಖಲಿಸಿದ್ದ ಸ್ವಾಮೀಜಿಯೇ ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಚರ್ಮ ರೋಗಕ್ಕೆ ಚಿಕಿತ್ಸೆ ಪಡೆಯುವ ನೆಪದಲ್ಲಿ ಮಠದ ಬಾಲಮಂಜುನಾಥ ಸ್ವಾಮೀಜಿ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ, ಬ್ಲಾಕ್ ಮೇಲ್ ಮಾಡಿರುವುದಾಗಿ ಸ್ವಾಮೀಜಿ ಸೇವಕ ಅಭಿಷೇಕ್, ಆತನ ಸಂಬಂಧಿ ಯುವತಿ ಸೇರಿ 6 ಮಂದಿ ವಿರುದ್ಧ ಬ್ಲಾಕ್ ಮೇಲ್ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರಕರಣ ತನಿಖೆಗೆ ಮುಂದಾಗಿದ್ದ ಪೊಲೀಸರಿಗೆ ಅಸಲಿ ಸತ್ಯ ತಿಳಿದುಬಂದಿದೆ. ಪೋಕ್ಸೋ ಕಾಯ್ದೆಯಡಿ ಬಾಲ‌ಮಂಜುನಾಥರನ್ನ ಬಂಧಿಸಲಾಗಿದೆ.

ಮಠದ ಸುತ್ತಮುತ್ತ ಪೊಲೀಸ್ ದಂಡು: ಬ್ಲಾಕ್ ಮೇಲ್ ಪ್ರಕರಣ ತನಿಖೆ ಜಾಡು ಹಿಡಿದ ಪೊಲೀಸರು ಗುರುವಾರ ಸಂಜೆಯಿಂದಲೇ ಮಠದಲ್ಲಿ ತನಿಖೆ ಕೈಗೊಂಡಿದ್ದು ರಾತ್ರಿ 11.30 ರವರೆಗೆ ಮುಂದುವರೆಸಿದ್ದರು. ಈ ವೇಳೆ ಸೇವಕ ಅಭಿಷೇಕ್ ಕೊಟ್ಟ ಮಾಹಿತಿ ಆಧರಿಸಿ ಸ್ವಾಮೀಜಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಎಸ್ಪಿ ಕೆ.ವಿ‌.ಅಶೋಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದು ಸ್ವಾಮೀಜಿ ಬಂಧನ ಪ್ರಕ್ರಿಯೆಯನ್ನು ಪೊಲೀಸರು ಬಹಳ ಎಚ್ಚರಿಕೆಯಿಂದ ಪೂರ್ಣಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net