50 ಸಾವಿರ ಕೋಟಿ ರೂ. ದಾಟಿದ ಬಜಾಜ್ ೈನಾನ್ಸ್‌ನ ನಿಶ್ಚಿತ ಠೇವಣಿ

Bajaj
Published on

ಹೈದರಾಬಾದ್: ಭಾರತದ ಪ್ರಮುಖ ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿ ಒಂದಾದ ಮತ್ತು ಬಜಾಜ್ ಫಿನ್‌ಸರ್ವನ ಭಾಗವಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್‌ನ ನಿಶ್ಚಿತ ಠೇವಣಿ 50 ಸಾವಿರ ಕೋಟಿ ರೂ. ಮೀರಿದೆ.

ಬಜಾಜ್ ಫೈನಾನ್ಸ್ 5 ಲಕ್ಷ ಅಧಿಕ ಠೇವಣಿದಾರರನ್ನು ಹೊಂದಿದ್ದು, ಪ್ರತಿ ಠೇವಣಿದಾರರು 2.87 ಠೇವಣಿಗಳನ್ನು ಇರಿಸಿದ್ದಾರೆ. ಇದರೊಂದಿಗೆ ಒಟ್ಟು ಠೇವಣಿಯ ಮೊತ್ತ 1.4 ದಶಲಕ್ಷ ತಲುಪಿದೆ. ಬಜಾಜ್ ಫೈನಾನ್ಸ್ ತನ್ನ ದೀರ್ಘಾವಧಿ ಸಾಲ ಕಾರ್ಯಕ್ರಮಕ್ಕಾಗಿ ಕ್ರಿಸಿಲ್, ಐಸಿಆರ್‌ಎ, ಕೇರ್ ಮತ್ತು ಇಂಡಿಯಾ ಕ್ರಮಾಂಕದಲ್ಲಿ ಸ್ಟೇಬಲ್ ಅತ್ಯಧಿಕ ಕ್ರೆಡಿಟ್ ರೇಟಿಂಗ್ ನಲ್ಲಿ ‘ ಅಅಅ’ ಶ್ರೇಣಿ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.

ಬಜಾಜ್ ಫೈನಾನ್ಸ್ 44 ತಿಂಗಳ ಅವಧಿಗೆ ನಿಶ್ಚಿತ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಶೇ. 8.60 ಮತ್ತು ಇತರರಿಗೆ ಶೇ. 8.35 ಬಡ್ಡಿ ದರ ನೀಡುತ್ತಿದೆ, ಕಳೆದ 10 ವರ್ಷಗಳಲ್ಲಿ, ಕಂಪನಿಯು ತನ್ನ ಠೇವಣಿ ಪುಸ್ತಕವನ್ನು ಶೇ. 60 ಸಿಎಜಿಆರ್ ಮತ್ತು ಠೇವಣಿದಾರರ ಸಂಖ್ಯೆಯನ್ನು ಶೇ. 49 ಹೆಚ್ಚಿಸಿಕೊಂಡಿದೆ.

ಹೆಚ್ಚುವರಿ ಬಡ್ಡಿ: ಪನಿಯು ನಿಶ್ಚಿತ ಠೇವಣಿಗಳ ಮೇಲೆ 12 ತಿಂಗಳ ಅವಧಿಗೆ ಶೇ. 7.40 ಮತ್ತು 24 ತಿಂಗಳ ಅವಧಿಗೆ ಶೇ. 7.55 ಬಡ್ಡಿ ದರಗಳನ್ನು ನೀಡುತ್ತದೆ. 36 ರಿಂದ 60 ತಿಂಗಳವರೆಗೆ ಬಡ್ಡಿ ದರಗಳು ಶೇ. 8.05 ಇದೆ. ಹಿರಿಯ ನಾಗರಿಕರಿಗೆ ಈ ದರಗಳಲ್ಲಿ ಹೆಚ್ಚುವರಿ ಶೇ. 0.25 ನೀಡಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

ಆಕರ್ಷಕ ಬಡ್ಡಿದರ: ಬಜಾಜ್ ಫೈನಾನ್ಸ್ ನ ಫಿಕ್ಸೆಡ್ ಡೆಪಾಸಿಟ್ ಮತ್ತು ಇನ್ವೆಸ್ಟ್ ಮೆಂಟ್ಸ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಚಿನ್ ಸಿಕ್ಕಾ ಮಾತನಾಡಿ, ನಮ್ಮ ಗ್ರಾಹಕರಿಗೆ ಆಕರ್ಷಕ ಬಡ್ಡಿ ದರಗಳಲ್ಲಿ ದೀರ್ಘಾವಧಿಯ ಉಳಿತಾಯ ಪರಿಹಾರಗಳನ್ನು ನೀಡುವತ್ತ ನಾವು ಗಮನ ಹರಿಸಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ನಿಶ್ಚಿತ ಠೇವಣಿ ಎರಡು ಪಟ್ಟು ಹೆಚ್ಚಿದೆ. ಈ ತ್ವರಿತ ಬೆಳವಣಿಗೆಯು ಬಜಾಜ್ ಫಿನ್‌ಸರ್ವ ಬ್ರಾಂಡ್‌ನಲ್ಲಿ ಗ್ರಾಹಕರ ನಂಬಿಕೆ, ನಿಶ್ಚಿತ ಠೇವಣಿಯನ್ನು ಡಿಜಿಟಲ್ ಆಗಿ ಕಾಯ್ದಿರಿಸುವ ಸುಲಭತೆ ಮತ್ತು ನಮ್ಮ ದೇಶವ್ಯಾಪಿ ಉಪಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net