ಆರ್.ಕೆ ಪಾಟ್ಕರ್ ಶಾಲೆಯಲ್ಲಿ ಬೈಠಕ್

patka
Published on

ಹೆಬ್ರಿ: ವಿದ್ಯಾಭಾರತಿ ಕರ್ನಾಟಕದ ಉಡುಪಿ ಜಿಲ್ಲಾ ವಿಭಾಗದಿಂದ ಮುಂಡ್ಕಿನಜಡ್ಡು ಚೇರ್ಕಾಡಿ ಆರ್.ಕೆ.ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬೈಠಕ್ ಆಯೋಜಿಸಲಾಯಿತು.

ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶ ಎಂ . ಸರಸ್ವತಿ ಚಾಲನೆ ನೀಡಿದರು. ಉಡುಪಿ ಜಿಲ್ಲಾ ವಿಭಾಗದ ಅಧ್ಯಕ್ಷ ಪಾಂಡುರಂಗ ಪೈ.ಸಿದ್ದಾಪುರ ಅಧ್ಯಕ್ಷತೆ ವಹಿಸಿದ್ದರು. ಆರ್.ಕೆ ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಅಧ್ಯಕ್ಷ ಸತೀಶ್ ಪಾಟೀಲ್, ಸಂಚಾಲಕ ಮಹೇಶ ಠಾಕೂರ್, ಉಪಾಧ್ಯಕ್ಷರಾದ ರಾಧಾಕೃಷ್ಣ ಸಾಮಂತ, ದಿನೇಶ್ ಪ್ರಭು ವೆಂಕಟೇಶ ಪ್ರಭು, ಕಾರ್ಯದರ್ಶಿ ಅಶೋಕ ಸಾಮಂತ, ಆಡಳಿತ ಮಂಡಳಿ ಸದಸ್ಯರಾದ ಮಂಜುನಾಥ ಪಾಟೀಲ್, ಸಂಜಯ ಪ್ರಭು, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ ಹೈಕಾಡಿ ಚಾರ, ಮುಖ್ಯ ಶಿಕ್ಷಕ ಚಂದ್ರಶೇಖರಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net