

ವಿಜಯವಾಣಿ ಸುದ್ದಿಜಾಲ ಉಡುಪಿ
ಆತಂಕಕಾರಿ ರೀತಿಯಲ್ಲಿ 286 ದಿನ ಆಕಾಶವಾಸದಲ್ಲಿದ್ದ ವಿಜ್ಞಾನಿಗಳಾದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ಆಗಮಿಸಿದ್ದು, ಪ್ರಪಂಚದಾದ್ಯಂತ ಜನ ಸಂಭ್ರಮಿಸುತ್ತಿದ್ದಾರೆ. ಜೀರೋ ಗ್ರ್ಯಾವಿಟಿಯಲ್ಲಿ ಬದುಕಿ ಬಂದಿರುವುದು ಸಾಮಾನ್ಯ ಬೆಳವಣಿಗೆಯಲ್ಲ. ಅವರಿಬ್ಬರೂ ವೈಜ್ಞಾನಿಕ ಲೋಕಕ್ಕೆ ಹಾಗೂ ಅಧ್ಯಯನಕ್ಕೆ ಹೊಸ ಆದರ್ಶರಾಗಿದ್ದಾರೆ ಎಂದು ಹಿರಿಯ ಭೌತಶಾಸ್ತ್ರಜ್ಞ ಪ್ರೊ. ಡಾ. ಎ.ಪಿ. ಭಟ್ ಶ್ಲಾಘಿಸಿದರು.
ಬಾಹ್ಯಾಕಾಶದಿಂದ ಇಬ್ಬರೂ ಗಗನಯಾತ್ರಿಗಳು ಸುರಕ್ಷಿತವಾಗಿ ಮರಳಿದ ಹಿನ್ನೆಲೆಯಲ್ಲಿ ಉಡುಪಿಯ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಉಡುಪಿಯ ನೇತ್ರ ಜ್ಯೋತಿ ಕಾಲೇಜ್ ಆಫ್ ಫಿಸಿಯೊಥೆರಪಿಯಲ್ಲಿ ಮಾ.20ರಂದು ಸಂಜೆ ಆಯೋಜಿಸಿದ್ದ ಸಂಭ್ರಮಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಮುಖ್ಯಸ್ಥ ಡಾ. ಕೃಷ್ಣಪ್ರಸಾದ, ಧಾರ್ಮಿಕ ಮುಖಂಡ ಕೃಷ್ಣ್ಣಮೂರ್ತಿ ಆಚಾರ್ಯ, ಡಾ. ಗೌರಿ ಪ್ರಭು, ಸಚಿನ ಶೇಟ್, ರಶ್ಮಿ ಕೃಷ್ಣಪ್ರಸಾದ, ತಾರಾಶ್ರೀಧರ, ದಯಾನಂದ ಇತರರಿದ್ದರು.