ವಿಜಯವಾಣಿ ವಿಜಯೋತ್ಸವ ವಿಜೇತ ಓದುಗರಿಗೆ ಬೈಕ್ ವಿತರಿಸಿದ ಡಿವೈಎಸ್ಪಿ ಶಂಕರಗೌಡ ಪಾಟೀಲ್

IMG-20240411-WA0051
Published on

ಜನರ ಆಶಾಭಾವನೆಗೆ ಸ್ಪಂದಿಸುವ ವಿಜಯವಾಣಿ ಡಿವೈಎಸ್ಪಿ ಶಂಕರಗೌಡ ಅಭಿಮತ | ವಿಜಯವಾಣಿ ವಿಜಯೋತ್ಸವ ವಿಜೇತ ರವೀಂದ್ರರಡ್ಡಿಗೆ ಬೈಕ್ ವಿತರಣೆ | ವೈಷ್ಣವಿ ಮಾರ್ಟ್ ೧೨ ಗ್ರಾಹಕರಿಗೆ ಒಲಿದ ಅದೃಷ್ಟ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರ
ದಸರಾ-ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಾಡಿನ ನಂಬರ್ ಒನ್ ದಿನಪತ್ರಿಕೆಯಾಗಿರುವ ವಿಜಯವಾಣಿ ತನ್ನ ಓದುಗರಿಗಾಗಿ ಶಾಪಿಂಗ್ ಅದೃಷ್ಟ ನಿಮ್ಮದು ಕೊಡುಗೆ ನಮ್ಮದು ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ `ವಿಜಯವಾಣಿ ವಿಜಯೋತ್ಸವ' ಲಕ್ಕಿ ಡ್ರಾದಲ್ಲಿ ವಿಜೇತರಿಗೆ ಚಿತ್ತಾಪುರ ಪಟ್ಟಣದ ವೈಷ್ಣವಿ ಮಾರ್ಟ್ ಮತ್ತು ಡ್ರೆಸೆಸ್ಸ್ ಆವರಣದಲ್ಲಿ ಬುಧವಾರ ಜರುಗಿದ ಸಮಾರಂಭದಲ್ಲಿ ವಿಜೇತರಿಗೆ ಶಹಾಬಾದ ಉಪ ವಿಭಾಗ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹಾಗೂ ಒರಿಯಂಟ್ ಸಿಮೆಂಟ್ ಕಂಪನಿ ಪ್ರಧಾನ ವ್ಯವಸ್ಥಾಪಕ ಶಿವಾನಂದ ಪಾಟೀಲ್ ಬೈಕ್ ವಿತರಿಸಿದರು.
ವೈಷ್ಣವಿ ಮಾರ್ಟ್ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಬೈಕ್ ವಿಜೇತರಾಗಿರುವ ರವೀಂದ್ರರಡ್ಡಿ ಬುಸರಡ್ಡಿ ಅವರಿಗೆ ಬೈಕ್ ಕಿಯನ್ನು ವೈಷ್ಣವಿ ಮಾರ್ಟ್ ಮಾಲೀಕರಾದ ಶಾಂತಕುಮಾರ ಹತ್ತಿ ಮತ್ತು ಹೀರಾಬಾಯಿ ಹತ್ತಿ ಅವರ ಹಾಗೂ ಓದುಗರ ಸಮ್ಮುಖದಲ್ಲಿ ಪಾಟೀಲ್‌ದ್ವಯರು ಹಸ್ತಾಂತರಿಸಿದರು. ವೈಷ್ಣವಿ ಮಾರ್ಟ್ನ ೧೨ ಗ್ರಾಹಕರಿಗೆ ವಿವಿಧ ಬಹುಮಾನಗಳು ಲಭಿಸಿವೆ.
ಡಿವೈಎಸ್ಪಿ ಶಂಕರಗೌಡರು ಮಾತನಾಡಿ, ವಿಜಯವಾಣಿ ಪತ್ರಿಕೆಯು ಸಮಾಜಮುಖಿ ಚಿಂತನೆ, ಜನಪರ ಕಾಳಜಿ, ಅಭಿವೃದ್ಧಿಪರವಾಗಿ ಜನರ ಮತ್ತು ಓದುಗರ ಆಶಾಭಾವನೆಗಳಿಗೆ ಸ್ಪಂದಿಸುವAತ ಪತ್ರಿಕೆಯಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವಂತ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ವಿಜಯವಾಣಿ ಎಂದರೆ ಜನರ ನಂಬಿಕೆ, ವಿಶ್ವಾಸದ ಪ್ರತೀಕವಾಗಿದೆ. ಜನರ ಭಾವನೆಗಳನ್ನು ತನ್ನೊಳಗೆ ಹುದುಗಿಸಿಕೊಂಡು ನಿತ್ಯ ವಿಜಯವಾಣಿ ಹೊರ ಬರುತ್ತಿದೆ. ಪತ್ರಿಕೆ ಓದದಿದ್ದರೆ ದಿನಪೂರ್ತಿಯಾಗಲ್ಲ. ಹೀಗಾಗಿ ಪ್ರತಿಯೊಬ್ಬರು ಪತ್ರಿಕೆ ಓದಬೇಕು ಎಂದು ಪಾಟೀಲ್ ಕರೆ ನೀಡಿದರು. ಕೇವಲ ಉದ್ಯಮವಾಗಿದರೆ ಸಮಾಜಕ್ಕಾಗಿ ಏನಾದರೂ ಸದಾ ಒಂದಿಲ್ಲ ಒಂದು ಕೊಡುಗೆ ನೀಡುತ್ತಲೇ ಬಂದಿದೆ. ತನ್ನ ಓದುಗರಿಗೆ ಮತ್ತು ವಿಜಯವಾಣಿ ಜತೆಗೆ ಒಡಂಬಡಿಕೆ ಮಾಡಿಕೊಂಡ ಮಳಿಗೆಗಳ ಗ್ರಾಹಕರಿಗೆ ಇಷ್ಟೊಂದು ಪ್ರಮಾಣದಲ್ಲಿ ಬಹುಮಾನ ನೀಡುತ್ತಿರುವುದು ಮಾದರಿಯಾಗಿದೆ ಎಂದರು.
ಒರಿಯAಟ್ ಸಿಮೆಂಟ್ ಕಂಪನಿ ಪ್ರಧಾನ ವ್ಯವಸ್ಥಾಪಕ ಶಿವಾನಂದ ಪಾಟೀಲ್ ಮಾತನಾಡಿ, ಓದುಗರು ಮತ್ತು ಗ್ರಾಹಕರೇ ದೇವರು ಎಂಬುದನ್ನು ವೈಷ್ಣವಿ ಮಾರ್ಟ್ ಮತ್ತು ವಿಜಯವಾಣಿ ಮತ್ತೊಮ್ಮೆ ಸಾಬೀತಪಡಿಸಿದೆ. ಜನರ ಪ್ರತಿಧ್ವನಿಯಾಗಿ ಕೆಲಸ ಮಾಡುತ್ತಿರುವ ವಿಜಯವಾಣಿ ಕಾರ್ಯ ಮಾದರಿಯಗಿದೆ ಎಂದು ಬಣ್ಣಿಸಿದರು.
ವೈಷ್ಣವಿ ಮಾರ್ಟ್ ಹಾಗೂ ಡ್ರೆಸ್ಸೆಸ್ ಮಾಲೀಕ ಶಾಂತಕುಮಾರ ಹತ್ತಿ ಅಧ್ಯP್ಷÀತೆ ವಹಿಸಿದ್ದರು. ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ, ಜಾಹೀರಾತು ವಿಭಾಗದ ಹಿರಿಯ ಅಧಿಕಾರಿ ಅರುಣ ಗಡ್ಡದ, ವೈಷ್ಣವಿ ಡ್ರೆಸೆಸ್ ಮಾಲಕಿ ಹೀರಾಬಾಯಿ ಹತ್ತಿ, ಪ್ರಮುಖರಾದ ಮಲ್ಲಿಕಾರ್ಜುನ ಪೂಜಾರಿ, ರಮೇಶ ಬೊಮ್ಮನಳ್ಳಿ, ಸಂಗಣ್ಣ ಬೊಮ್ಮನಹಳ್ಳಿ, ಶರಣಬಸಪ್ಪ, ರಫೀಕ್ ಪಟೇಲï, ಚಂದ್ರಶೇಖರ ಊಟಗೂರ, ಸಂತೋಷ ಗೋಧಿ, ಲಕ್ಷಿö್ಮÃಬಾಯಿ ಹತ್ತಿ, ಸುಪ್ರಿಯಾ ಹತ್ತಿ,ವೈಷ್ಣವಿ ಹತ್ತಿ, ಶರಣು ಹತ್ತಿ, ನಾಗಯ್ಯಸ್ವಾಮಿ ಅಲ್ಲೂರ, ಮಾಳಪ್ಪ ಪೂಜಾರಿ, ಬಸವರಾಜ ಹತ್ತಿ, ಗುರುನಾಥ ಗುದಗಲï,ಸೋಮಶೇಖರ ಸಂಕನೂರ ಮೊದಲಾದವರಿದ್ದರು.

ವಿಜಯವಾಣಿ ತಾಲೂಕು ವರದಿಗಾರ ವೀರೇಂದ್ರಕುಮಾರ ಕೊಲ್ಲೂರ ಸ್ವಾಗತಿಸಿದರು. ಸಮಾಜ ಸೇವಕ ವೀರಭದ್ರಪ್ಪ ಗುರುಮಠÀಕಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಉದ್ಯಮಿ ಅನೀಲ್ ವಡ್ಡಡಗಿ ವಂದಿಸಿದರು. ಸಮಾರಂಭದಲ್ಲಿ ಓದುಗರು ಮತ್ತು ಗ್ರಾಹಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net