ಸಂತಸ ದಾಂಪತ್ಯಕ್ಕೆ ಸಂವಾದವೇ ಬುನಾದಿ

ವಿಸ್ತಾರ ಜಿಂದಗಿಯ ಮಹೇಶ ಮಾಶ್ಯಾಳ ಅಭಿಮತ * ‘ನಾ ಹಿಂಗೆ, ನೀ ಹಂಗೆ’ ವಿನೂತನ ಕಾರ್ಯಕ್ರಮ
ಬಾಗಲಕೋಟೆ : ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವುದು, ಮುಕ್ತವಾಗಿ ಸಂವಹನ ನಡೆಸುವುದು ಹಾಗೂ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸುವುದರಿಂದ ಕುಟುಂಬದಲ್ಲಿ ಸಂತಸ ಮತ್ತು ನೆಮ್ಮದಿ ನೆಲೆಸಲು ಸಾಧ್ಯ. ದಾಂಪತ್ಯ ಜೀವನದ ಸಂತಸಕ್ಕೆ ಸಂವಾದವೇ ಬುನಾದಿ ಎಂದು ವಿಸ್ತಾರ ಜಿಂದಗಿಯ ಮಹೇಶ ಮಾಶ್ಯಾಳ ಹೇಳಿದರು.

 ಬಿವಿವಿ ಸಂಘದ ಬಿಪ್ಸ್ ಶಾಲೆ ಹಾಗೂ ವಿಸ್ತಾರ ಜಿಂದಗಿ ವತಿಯಿಂದ ಈಚೆಗೆ ಬಿಇಸಿ ಸಭಾಂಗಣದಲ್ಲಿ ದಂಪತಿಗಾಗಿ ಪ್ರಥಮ ಬಾರಿಗೆ ಆಯೋಜಿಸಿದ್ದ ‘ನಾ ಹಿಂಗೆ, ನೀ ಹಂಗೆ’ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಸಮಯ ಪಾಲನೆ, ಪರಸ್ಪರ ಗೌರವ ಹಾಗೂ ನಿರಂತರ ಸಂವಾದದ ಮೂಲಕ ಕೌಟುಂಬಿಕ ಕರ್ತವ್ಯಗಳನ್ನು ಅರಿತು ಸಮೃದ್ಧ ಜೀವನ ನಡೆಸಬೇಕು. ತಂದೆ-ತಾಯಿ, ಮಕ್ಕಳು ಹಾಗೂ ಹಿರಿಯರ ನಡುವಿನ ಕುಟುಂಬ ಸಂಬಂಧಗಳ ಗಟ್ಟಿತನವನ್ನು ಕಾಪಾಡಿಕೊಳ್ಳುವುದು ಅಗತ್ಯ. ಹಿಂದಿನ ಪೀಳಿಗೆ ಹಾಗೂ ಮುಂದಿನ ಪೀಳಿಗೆಯ ನಡುವೆ ಪರಸ್ಪರ ಅರಿವು ಮತ್ತು ಉತ್ತಮ ಸಂವಹನ ಇರಬೇಕು ಎಂದು ಹೇಳಿದರು.

 ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಅವಿಭಕ್ತ ಕುಟುಂಬ ಭಾರತೀಯ ಪರಂಪರೆಯ ಪ್ರಮುಖ ಭಾಗವಾಗಿದೆ. ಪರಸ್ಪರರನ್ನು ಅರ್ಥೈಸಿಕೊಂಡು ಹೊಂದಾಣಿಕೆಯಿಂದ ಬದುಕುವ ಮೂಲಕ ಕುಟುಂಬ ವ್ಯವಸ್ಥೆಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

 ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಬಿಪ್ಸ್ ಶಾಲೆಯ ನಿರ್ದೇಶಕ ಸುರೇಶ ಹೆಗಡೆ, ಪ್ರಾಚಾರ್ಯ ಮಂಗಳಾದೇವಿ ಹೆಗಡೆ ಇತರರಿದ್ದರು.
ಬಾಗಲಕೋಟೆ ಬಿಪ್ಸ್ ಶಾಲೆಯಲ್ಲಿ ಈಚೆಗೆ ದಂಪತಿಗಾಗಿ ಏರ್ಪಡಿಸಿದ್ದ ನಾ ಹಿಂಗೆ, ನೀ ಹಂಗೆ ಕಾರ್ಯಕ್ರಮವನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಉದ್ಘಾಟಿಸಿದರು. ವಿಸ್ತಾರ ಜಿಂದಗಿಯ ಮಹೇಶ ಮಾಶ್ಯಾಳ, ಮಹಾಂತೇಶ ಶೆಟ್ಟರ, ಸುರೇಶ ಹೆಗಡೆ ಇದ್ದರು.
Published on: 

ಬಾಗಲಕೋಟೆ : ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವುದು, ಮುಕ್ತವಾಗಿ ಸಂವಹನ ನಡೆಸುವುದು ಹಾಗೂ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸುವುದರಿಂದ ಕುಟುಂಬದಲ್ಲಿ ಸಂತಸ ಮತ್ತು ನೆಮ್ಮದಿ ನೆಲೆಸಲು ಸಾಧ್ಯ. ದಾಂಪತ್ಯ ಜೀವನದ ಸಂತಸಕ್ಕೆ ಸಂವಾದವೇ ಬುನಾದಿ ಎಂದು ವಿಸ್ತಾರ ಜಿಂದಗಿಯ ಮಹೇಶ ಮಾಶ್ಯಾಳ ಹೇಳಿದರು.

ಬಿವಿವಿ ಸಂಘದ ಬಿಪ್ಸ್ ಶಾಲೆ ಹಾಗೂ ವಿಸ್ತಾರ ಜಿಂದಗಿ ವತಿಯಿಂದ ಈಚೆಗೆ ಬಿಇಸಿ ಸಭಾಂಗಣದಲ್ಲಿ ದಂಪತಿಗಾಗಿ ಪ್ರಥಮ ಬಾರಿಗೆ ಆಯೋಜಿಸಿದ್ದ ‘ನಾ ಹಿಂಗೆ, ನೀ ಹಂಗೆ’ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಯ ಪಾಲನೆ, ಪರಸ್ಪರ ಗೌರವ ಹಾಗೂ ನಿರಂತರ ಸಂವಾದದ ಮೂಲಕ ಕೌಟುಂಬಿಕ ಕರ್ತವ್ಯಗಳನ್ನು ಅರಿತು ಸಮೃದ್ಧ ಜೀವನ ನಡೆಸಬೇಕು. ತಂದೆ-ತಾಯಿ, ಮಕ್ಕಳು ಹಾಗೂ ಹಿರಿಯರ ನಡುವಿನ ಕುಟುಂಬ ಸಂಬಂಧಗಳ ಗಟ್ಟಿತನವನ್ನು ಕಾಪಾಡಿಕೊಳ್ಳುವುದು ಅಗತ್ಯ. ಹಿಂದಿನ ಪೀಳಿಗೆ ಹಾಗೂ ಮುಂದಿನ ಪೀಳಿಗೆಯ ನಡುವೆ ಪರಸ್ಪರ ಅರಿವು ಮತ್ತು ಉತ್ತಮ ಸಂವಹನ ಇರಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಅವಿಭಕ್ತ ಕುಟುಂಬ ಭಾರತೀಯ ಪರಂಪರೆಯ ಪ್ರಮುಖ ಭಾಗವಾಗಿದೆ. ಪರಸ್ಪರರನ್ನು ಅರ್ಥೈಸಿಕೊಂಡು ಹೊಂದಾಣಿಕೆಯಿಂದ ಬದುಕುವ ಮೂಲಕ ಕುಟುಂಬ ವ್ಯವಸ್ಥೆಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಬಿಪ್ಸ್ ಶಾಲೆಯ ನಿರ್ದೇಶಕ ಸುರೇಶ ಹೆಗಡೆ, ಪ್ರಾಚಾರ್ಯ ಮಂಗಳಾದೇವಿ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net