ಬಿಲ್ ಪಾವತಿಗಾಗಿ ಗುತ್ತಿಗೆದಾರರ ಧರಣಿ

ಪ್ರತಿಭಟನೆ ವಾಪಸ್ ಪಡೆದ ಗುತ್ತಿಗೆದಾರ..
ತೇರದಾಳ: ತನಗೆ ಬರ ಬೇಕಾಗಿರುವ ಬಾಕಿ ಹಣ ಬಿಲ್ ಪಾವತಿಸಬೇಕು ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ತನಗೆ ಆಗಿರುವ ಅನ್ಯಾಯ ಸರಿಪಡಿಸಿ ಕೊಡಬೇಕು ಎಂದು ಆಗ್ರಹಿಸಿ ಪ್ರಥಮ ದರ್ಜೆ ಗುತ್ತಿಗೆದಾರ ಮುರಗೇಶ ಮಿರ್ಜಿ ಬುಧವಾರ ಪುರಸಭೆ ಆವರಣದಲ್ಲಿ ಧರಣಿ ನಡೆಸಿದರು.

ನನಗೆ 5 ಕಾಮಗಾರಿಗಳ 13 ಲಕ್ಷ ಬಾಕಿ ಬಿಲ್ ಪಾವತಿ ಆಗಬೇಕಿದೆ. ಕೆಲ ಟೆಂಡರ್‌ಗಳಲ್ಲಿ ನನಗೆ ಆಗಬೇಕಾದ ಟೆಂಡರ್‌ಗಳನ್ನು ಜೆಇ ಅವರು ಬೇರೆ ಅವರಿಗೆ ಮಾಡಿಕೊಟ್ಟಿದ್ದಾರೆ. ಜತೆಗೆ ಟೆಂಡರ್‌ಗಿಟ್ಟ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದರು. ಸರ್ಕಾರದ ದರಕ್ಕೆ ಹಾಕಿದ ಟೆಂಡರ್‌ದಾರನಿಗೆ ಟೆಂಡರ್ ಮಾಡಿಕೊಡುವ ಮೂಲಕ ಸರ್ಕಾರಕ್ಕೆ ಜೆಇ ಅವರು ನಷ್ಟ ಮಾಡಿದ್ದಾರೆ. ಕೆಲವು ಟೆಂಡರ್‌ಗಳಲ್ಲಿ ಲೈಸೆನ್ಸ್ ಇಲ್ಲದ ಹಾಗೂ ಕಾಮಗಾರಿ ಮಾಡಿದ ಪತ್ರ ಇಲ್ಲದ ಗುತ್ತಿಗೆದಾರನಿಗೆ ಟೆಂಡರ್ ನೀಡಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು. 

 ಧರಣಿ ಕೈಬಿಟ್ಟ ಗುತ್ತಿಗೆದಾರ
ಬಾಕಿ ಬಿಲ್ ಮೊತ್ತ ಪಾವತಿಸಲು ಅನುದಾನ ಇಲ್ಲ. ಅನುದಾನ ಬಂದ ಬಳಿಕ ಮೊದಲು ನಿಮ್ಮ ಬಾಕಿ ಬಿಲ್ ಪಾವತಿಸುವ ಕ್ರಮ ಕೈಗೊಳ್ಳಲಾಗುವುದು ಅಂತ ಮುಖ್ಯಾಧಿಕಾರಿ ಇಾನ್ ಝಾರೆ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ ಹಾಗೂ ಮುಖಂಡರು ಮನ ವೊಲಿಸಿದ ಬಳಿಕ ಮುರಗೇಶ ಮಿರ್ಜಿ ಧರಣಿ ವಾಪಸ್ ಪಡೆದರು.
ತೇರದಾಳ ಪಟ್ಟಣದ ಪುರಸಭೆ ಆವರಣದಲ್ಲಿ ಗುತ್ತಿಗೆದಾರ ಮುರುಗೇಶ ಮಿರ್ಜಿ ಧರಣಿ ನಡೆಸಿದರು. ಪುರಸಭೆ ಮುಖ್ಯಾಧಿಕಾರಿ ರ್ಇಾನ ಝಾರೆ, ಮುಖಂಡ ಸಿದ್ದು ಅಮ್ಮಣಗಿ ಇತರರಿದ್ದರು.
Published on: 

ಮನವೊಲಿಸಿದ ಮುಖಂಡರು

ತೇರದಾಳ: ತನಗೆ ಬರ ಬೇಕಾಗಿರುವ ಬಾಕಿ ಹಣ ಬಿಲ್ ಪಾವತಿಸಬೇಕು ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ತನಗೆ ಆಗಿರುವ ಅನ್ಯಾಯ ಸರಿಪಡಿಸಿ ಕೊಡಬೇಕು ಎಂದು ಆಗ್ರಹಿಸಿ ಪ್ರಥಮ ದರ್ಜೆ ಗುತ್ತಿಗೆದಾರ ಮುರಗೇಶ ಮಿರ್ಜಿ ಬುಧವಾರ ಪುರಸಭೆ ಆವರಣದಲ್ಲಿ ಧರಣಿ ನಡೆಸಿದರು.

ನನಗೆ 5 ಕಾಮಗಾರಿಗಳ 13 ಲಕ್ಷ ಬಾಕಿ ಬಿಲ್ ಪಾವತಿ ಆಗಬೇಕಿದೆ. ಕೆಲ ಟೆಂಡರ್‌ಗಳಲ್ಲಿ ನನಗೆ ಆಗಬೇಕಾದ ಟೆಂಡರ್‌ಗಳನ್ನು ಜೆಇ ಅವರು ಬೇರೆ ಅವರಿಗೆ ಮಾಡಿಕೊಟ್ಟಿದ್ದಾರೆ. ಜತೆಗೆ ಟೆಂಡರ್‌ಗಿಟ್ಟ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದರು. ಸರ್ಕಾರದ ದರಕ್ಕೆ ಹಾಕಿದ ಟೆಂಡರ್‌ದಾರನಿಗೆ ಟೆಂಡರ್ ಮಾಡಿಕೊಡುವ ಮೂಲಕ ಸರ್ಕಾರಕ್ಕೆ ಜೆಇ ಅವರು ನಷ್ಟ ಮಾಡಿದ್ದಾರೆ. ಕೆಲವು ಟೆಂಡರ್‌ಗಳಲ್ಲಿ ಲೈಸೆನ್ಸ್ ಇಲ್ಲದ ಹಾಗೂ ಕಾಮಗಾರಿ ಮಾಡಿದ ಪತ್ರ ಇಲ್ಲದ ಗುತ್ತಿಗೆದಾರನಿಗೆ ಟೆಂಡರ್ ನೀಡಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಧರಣಿ ಕೈಬಿಟ್ಟ ಗುತ್ತಿಗೆದಾರ

ಬಾಕಿ ಬಿಲ್ ಮೊತ್ತ ಪಾವತಿಸಲು ಅನುದಾನ ಇಲ್ಲ. ಅನುದಾನ ಬಂದ ಬಳಿಕ ಮೊದಲು ನಿಮ್ಮ ಬಾಕಿ ಬಿಲ್ ಪಾವತಿಸುವ ಕ್ರಮ ಕೈಗೊಳ್ಳಲಾಗುವುದು ಅಂತ ಮುಖ್ಯಾಧಿಕಾರಿ ಇಾನ್ ಝಾರೆ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ ಹಾಗೂ ಮುಖಂಡರು ಮನ ವೊಲಿಸಿದ ಬಳಿಕ ಮುರಗೇಶ ಮಿರ್ಜಿ ಧರಣಿ ವಾಪಸ್ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net