ಅಗ್ನಿ ಸುರಕ್ಷತಾ ನಿಯಮಗಳ ಅರಿವು ಅಗತ್ಯ

ಡಾ. ಎಸ್.ಆರ್. ಹಂದಿಗುಂದ ಹೇಳಿಕೆ * ತುರ್ತು ಸೇವೆಗಳ ಅರಿವು ಕಾರ್ಯಕ್ರಮ
ರಬಕವಿ-ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಗ್ನಿ ಅವಘಡ ನಿಯಂತ್ರಣದ ಕುರಿತು ಅಗ್ನಿಶಾಮಕ ಸಿಬ್ಬಂದಿ ಪ್ರಾತ್ಯಕ್ಷಿಕೆ ನೀಡಿದರು. ಪ್ರಾಚಾರ್ಯ ಡಾ. ಎಸ್.ಆರ್. ಹಂದಿಗುಂದ ಹಾಗೂ ರಾಮು ಸನದಿ ಇದ್ದರು.
ರಬಕವಿ-ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಗ್ನಿ ಅವಘಡ ನಿಯಂತ್ರಣದ ಕುರಿತು ಅಗ್ನಿಶಾಮಕ ಸಿಬ್ಬಂದಿ ಪ್ರಾತ್ಯಕ್ಷಿಕೆ ನೀಡಿದರು. ಪ್ರಾಚಾರ್ಯ ಡಾ. ಎಸ್.ಆರ್. ಹಂದಿಗುಂದ ಹಾಗೂ ರಾಮು ಸನದಿ ಇದ್ದರು.
Published on: 

ರಬಕವಿ-ಬನಹಟ್ಟಿ: ಅಗ್ನಿ ಅವಘಡಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಅಗ್ನಿ ಸುರಕ್ಷತಾ ನಿಯಮಗಳನ್ನು ತಿಳಿದುಕೊಂಡು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಆರ್. ಹಂದಿಗುಂದ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಅಗ್ನಿಶಾಮಕ ಹಾಗೂ ತುರ್ತು ಸೇವಾ ದಳ, ಎನ್‌ಎಸ್‌ಎಸ್ ಮತ್ತು ರೆಡ್‌ಕ್ರಾಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಗ್ನಿ ಅವಘಡ ಹಾಗೂ ತುರ್ತು ಸೇವೆಗಳ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಗ್ನಿಶಾಮಕ ದಳದ ಪ್ರಧಾನ ಸಿಬ್ಬಂದಿ ರಾಮು ಸನದಿ ಅವರು ಬೆಂಕಿ ಅವಘಡಗಳಿಗೆ ಕಾರಣಗಳು, ಬೆಂಕಿ ನಿಯಂತ್ರಿಸುವ ವಿಧಾನಗಳು, ಅಗ್ನಿ ನಂದಿಸುವ ಉಪಕರಣಗಳ ಬಳಕೆ ಹಾಗೂ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ನಂತರ ಕಾಲೇಜು ಮೈದಾನದಲ್ಲಿ ಅಗ್ನಿಶಾಮಕ ಸಿಬ್ಬಂದಿ ವಿವಿಧ ರೀತಿಯ ಬೆಂಕಿ ಅವಘಡಗಳನ್ನು ನಿಯಂತ್ರಿಸುವುದು, ರಕ್ಷಣಾ ಕಾರ್ಯಾಚರಣೆ ಹಾಗೂ ಅಗ್ನಿ ನಂದಿಸುವ ಉಪಕರಣಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ನಡೆಸಿದರು. ತುರ್ತು ಸಂದರ್ಭದಲ್ಲಿ ಗಾಬರಿಗೊಳ್ಳದೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಮಹಾವೀರ ಕವಟಕೊಪ್ಪ, ಮಾರುತಿ ನಡಕಟ್ಟಿನ, ಬಿ.ಎ. ದೇಸಾಯಿ, ಡಾ. ರಮೇಶ ಕುಂಬಾರ, ಪುಂಡಲೀಕ ಬಾಡಗಿ, ವಿಜಯ ಕಾಬರಾ, ಅಶೋಕ ಮುದೇನೂರ, ದಾದಾ ಮಾನಗಾಂವಿ, ವಿಶ್ವಚೇತನ ಪತ್ತಾರ, ಪ್ರಶಾಂತ ಮಾವರಕರ ಸೇರಿ ಇತರರು ಉಪಸ್ಥಿತರಿದ್ದರು. ಅಶೋಕ ಕನ್ನಾಳ ಸ್ವಾಗತಿಸಿದರು. ಡಾ. ಚೇತನ ಡಾಗಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ರಡ್ಡೆರಟ್ಟಿ ಉಪಸ್ಥಿತರಿದ್ದರು. ಡಾ. ಮಹಾದೇವ ಪೋತರಾಜ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net