ಅ.1ರಂದು ಬಜಾರ ಶಾಖೆ ನೂತನ ಕಟ್ಟಡ ಉದ್ಘಾಟನೆ

ಹುಚ್ಚೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಮಾಹಿತಿ * ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ
ಕಮತಗಿ: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಹೊಳೆ ಹುಚ್ಚೇಶ್ವರ ಪತ್ತಿನ ಸಹಕಾರಿ ಸಂಘದ ಕಮತಗಿ ಬಜಾರ ಶಾಖೆಯ ನೂತನ ಕಟ್ಟಡದ ಅ.1ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ಹೊಳೆ ಹುಚ್ಚೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಕಮತಗಿ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು, ಹೊಸಹಳ್ಳಿ ಬೂದಿಶ್ವರ ಸಂಸ್ಥಾನಮಠ ಬೂದಿಶ್ವರ ಮಹಾಸ್ವಾಮಿಗಳು, ಹಂಪಿ ಹೇಮಕೂಟ ಗಾಯಿತ್ರಿಪೀಠ ಮಹಾಸಂಸ್ಥಾನಮಠ ದಯಾನಂದಪುರಿ ಮಹಾಸ್ವಾಮಿಗಳು, ಗುಳೇದಗುಡ್ಡ ಗುರುಸಿದ್ದಪಟ್ಟದಾರ್ಯ ಮಹಾಸ್ವಾಮಿಗಳು, ಹುಬ್ಬಳ್ಳಿ ನೀಲಕಂಠಮಠ ಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಚಿಕ್ಕನಕೊಪ್ಪ ಬಳಗಾನೂರ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ. 

ಸಂಘದ ಅಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಅಧ್ಯಕ್ಷತೆ ವಹಿಸುವರು, ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು ಭಾಗವಹಿಸುವರು ಎಂದು ತಿಳಿಸಿದರು.

ಉಪಾಧ್ಯಕ್ಷ ಮಲ್ಲಪ್ಪ ಮೇದಾರ, ನಿರ್ದೇಶಕರಾದ ಮಲ್ಲಪ್ಪ ಲೆಕ್ಕದ, ಹುಚ್ಚಪ್ಪ ಸಿಂಹಾಸನ, ಕಮಲಪ್ಪ ಕಡ್ಲಿಮಟ್ಟಿ, ರಮೇಶ ಜಮಖಂಡಿ, ಹನಮಂತ ಕಡಿವಾಲ, ಹುಚ್ಚೇಶ ಗೋಕಾವಿ, ಮಹಾಂತೇಶ ಕಡ್ಲಿಮಟ್ಟಿ, ರೇವಣಕುಮಾರ ಭಾಪ್ರಿ, ಬಸವ್ವ ಕೋಳೂರ, ಸುಧಾ ಕ್ಯಾದಿಗ್ಗೇರಿ, ಹನಮಂತ ವಡ್ಡರ, ಪ್ರಧಾನ ವ್ಯವಸ್ಥಾಪಕ ಶಿವಶಂಕರ ಮಾಶೆಟ್ಟಿ, ಉಪ ಪ್ರಧಾನ ವ್ಯವಸ್ಥಾಪಕ ಸದಾಶಿವ ಎಸ್. ಕಡ್ಲಿಮಟ್ಟಿ ಇದ್ದರು.
ಕಮತಗಿ ಪಟ್ಟಣದ ಹೊಳೆ ಹುಚ್ಚೇಶ್ವರ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಮಲ್ಲಪ್ಪ ಮೇದಾರ, ನಿರ್ದೇಶಕರಾದ ಮಲ್ಲಪ್ಪ ಲೆಕ್ಕದ, ಹುಚ್ಚಪ್ಪ ಸಿಂಹಾಸನ, ಕಮಲಪ್ಪ ಕಡ್ಲಿಮಟ್ಟಿ, ರಮೇಶ ಜಮಖಂಡಿ, ಹನಮಂತ ಕಡಿವಾಲ, ಹುಚ್ಚೇಶ ಗೋಕಾವಿ, ಮಹಾಂತೇಶ ಕಡ್ಲಿಮಟ್ಟಿ ಇತರರಿದ್ದರು.
Published on: 

ಕಮತಗಿ: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಹೊಳೆ ಹುಚ್ಚೇಶ್ವರ ಪತ್ತಿನ ಸಹಕಾರಿ ಸಂಘದ ಕಮತಗಿ ಬಜಾರ ಶಾಖೆಯ ನೂತನ ಕಟ್ಟಡದ ಅ.1ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ಹೊಳೆ ಹುಚ್ಚೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಕಮತಗಿ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು, ಹೊಸಹಳ್ಳಿ ಬೂದಿಶ್ವರ ಸಂಸ್ಥಾನಮಠ ಬೂದಿಶ್ವರ ಮಹಾಸ್ವಾಮಿಗಳು, ಹಂಪಿ ಹೇಮಕೂಟ ಗಾಯಿತ್ರಿಪೀಠ ಮಹಾಸಂಸ್ಥಾನಮಠ ದಯಾನಂದಪುರಿ ಮಹಾಸ್ವಾಮಿಗಳು, ಗುಳೇದಗುಡ್ಡ ಗುರುಸಿದ್ದಪಟ್ಟದಾರ್ಯ ಮಹಾಸ್ವಾಮಿಗಳು, ಹುಬ್ಬಳ್ಳಿ ನೀಲಕಂಠಮಠ ಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಚಿಕ್ಕನಕೊಪ್ಪ ಬಳಗಾನೂರ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ.

ಸಂಘದ ಅಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ಅಧ್ಯಕ್ಷತೆ ವಹಿಸುವರು, ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು ಭಾಗವಹಿಸುವರು ಎಂದು ತಿಳಿಸಿದರು.

ಉಪಾಧ್ಯಕ್ಷ ಮಲ್ಲಪ್ಪ ಮೇದಾರ, ನಿರ್ದೇಶಕರಾದ ಮಲ್ಲಪ್ಪ ಲೆಕ್ಕದ, ಹುಚ್ಚಪ್ಪ ಸಿಂಹಾಸನ, ಕಮಲಪ್ಪ ಕಡ್ಲಿಮಟ್ಟಿ, ರಮೇಶ ಜಮಖಂಡಿ, ಹನಮಂತ ಕಡಿವಾಲ, ಹುಚ್ಚೇಶ ಗೋಕಾವಿ, ಮಹಾಂತೇಶ ಕಡ್ಲಿಮಟ್ಟಿ, ರೇವಣಕುಮಾರ ಭಾಪ್ರಿ, ಬಸವ್ವ ಕೋಳೂರ, ಸುಧಾ ಕ್ಯಾದಿಗ್ಗೇರಿ, ಹನಮಂತ ವಡ್ಡರ, ಪ್ರಧಾನ ವ್ಯವಸ್ಥಾಪಕ ಶಿವಶಂಕರ ಮಾಶೆಟ್ಟಿ, ಉಪ ಪ್ರಧಾನ ವ್ಯವಸ್ಥಾಪಕ ಸದಾಶಿವ ಎಸ್. ಕಡ್ಲಿಮಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net