ಛತ್ತೀಸಗಡ ಮೂಲದ ಮಹಿಳೆ ರಕ್ಷಣೆ

ಬಾಗಲಕೋಟೆ ಸಖಿ ಇನ್ ಸ್ಟಾಪ್ ಸೆಂಟರ್ ಸಿಬ್ಬಂದಿ ಜೊತೆ ಸುರಕ್ಷಿತವಾಗಿ ರಕ್ಷಿಸಲಾದ ಛತ್ತೀಸಗಡ ಮೂಲದ ಮಹಿಳೆ ಸಂತೋಷಿ.
ಬಾಗಲಕೋಟೆ ಸಖಿ ಇನ್ ಸ್ಟಾಪ್ ಸೆಂಟರ್ ಸಿಬ್ಬಂದಿ ಜೊತೆ ಸುರಕ್ಷಿತವಾಗಿ ರಕ್ಷಿಸಲಾದ ಛತ್ತೀಸಗಡ ಮೂಲದ ಮಹಿಳೆ ಸಂತೋಷಿ.
Published on
ಬಾಗಲಕೋಟೆ: ಗಂಡನ ಕಿರುಕುಳದಿಂದ ಬೇಸತ್ತು ಮನೆತೊರೆದು ನಾಪತ್ತೆಯಾಗಿದ್ದ ಹೊರರಾಜ್ಯದ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ, ಮರಳಿ ಅವರ ಕುಟುಂಬ ಸೇರಿಸುವಲ್ಲಿ ಬಾಗಲಕೋಟೆಯ ಸಖಿ ಒನ್ ಸ್ಟಾಪ್ ಸೆಂಟರ್ ಸಿಬ್ಬಂದಿ ಯಶಸ್ಸಿಯಾಗಿದ್ದಾರೆ.
ಛತ್ತೀಸಗಡ ಮೂಲದ ಮಹಿಳೆ ಸಂತೋಷಿ ನರೇಂದ್ರ ದನವಾರ(೨೬) ಅವ ರನ್ನು ರಕ್ಷಣೆ ಮಾಡಿ, ಅಗತ್ಯ ಆರೈಕೆ, ಸಮಾಲೋಚನೆ ಹಾಗೂ ಸುರಕ್ಷಿತ ಆಶ್ರಯ ಒದಗಿಸಿ ಅಂತಿಮವಾಗಿ ಅವರ ಕುಟುಂಬ ಸೇರಿಸುವ ಕೆಲಸವನ್ನು ಮಾಡಲಾಗಿದೆ.
ಛತ್ತೀಸಗಡ ರಾಜ್ಯದ ಬಿಸಲಾಪುರ ಜಿಲ್ಲೆಯ ಬರಾಲಿ ಗ್ರಾಮದ ಸಂತೋಷಿ, ಬಾಗಲಕೋಟೆ ರೈಲ್ವೆ ಸ್ಟೇಷನ್ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದ ಮುಂದೆ ತಿರುಗಾಡುತ್ತಿರುವುದನ್ನು ಗಮನಿಸಿ ಅಲ್ಲಿಯ ರಮಿತಾ ಗುಮಚಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಽಕಾರಿ ಮಂಜುನಾಥ ಪರಸನ್ನವರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಪಡೆದ ಅಽಕಾರಿ ಮಂಜುನಾಥ ಮೂಲಕ ಜಿಲ್ಲೆಯ ಅಕ್ಕಾಪಡೆಯ ತಂಡZವು ಸ್ಥಳಕ್ಕೆ ಭೇಟಿ ನೀಡಿ, ಸಂತೋಷಿ ಎಂಬ ಮಹಿಳೆಯನ್ನು ಕರೆದುಕೊಂಡು ಹೋಗಿ ವಿಚಾರಿಸಿ, ತಾತ್ಕಾಲಿಕ ಆಶ್ರಯ ಹಾಗೂ ಮುಂದಿನ ಕ್ರಮಕ್ಕಾಗಿ ಜುಲೈ ೨೧ ರಂದು ಸಖಿ ಕೇಂದ್ರಕ್ಕೆ ಬಿಡಲಾಗಿತ್ತು.
ನಂತರ ಸಖಿ ಕೇಂದ್ರದಲ್ಲಿರುವ ಆಡಳಿತಾಽಕಾರಿ ಶಂಕ್ರಮ್ಮ ಜಮ್ಮನಕಟ್ಟಿ ಹಾಗೂ ಕಾನೂನು ಸಲಹೆಗಾರರಾದ ಸೀಮಾ ಅವರು ರಕ್ಷಿಸಲಾದ ಮಹಿಳೆಯನ್ನು ಸಮಾಲೋಚನೆ ಮಾಡಿ ಮಹಿಳೆಯ ಗುರುತು ಮತ್ತು ವಿಳಾಸವನ್ನು ಪತ್ತೆಹಚ್ಚಲು ಛತ್ತೀಸಗಡ ರಾಜ್ಯದ ಸಂಬAಽಸಿದ ಅಽಕಾರಿಗಳ ಜೊತೆ ನಿರಂತರವಾಗಿ ಸಂಪರ್ಕ ಸಾಽಸಿ ಅಗತ್ಯ ದಾಖಲೆಗಳೊಂದಿಗೆ ಪರಿಶೀಲನೆ ನಡೆಸಿದರು. ಮಹಿಳೆ ಛತ್ತೀಸಗಡದ ರಾಜ್ಯದ ಬಿಸಲಾಪೂರ ತಾಲೂಕಿನ ಬರಾಲಿ ಗ್ರಾಮದವರು ಎಂದು ತಿಳಿದು ಬಂದಿತು. ಅಲ್ಲಿಯ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ಪಡೆದು, ನಂತರ ಬರಾಲಿ ಗ್ರಾಮದ ಗ್ರಾಮದ ಪ್ರಮುಖರ ಮಾಹಿತಿ ಪಡೆದುಕೊಂಡು ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಲಾಯಿತು.
ರಕ್ಷಿಸಲಾದ ಮಹಿಳೆಯು ಕಳೆದ ಒಂದೂವರೆ ವರ್ಷದಿಂದ ಗಂಡನ ಕಿರುಕುಳದಿಂದ ಬೇಸತ್ತು ಇಬ್ಬರ ಮಕ್ಕಳನ್ನು ಬಿಟ್ಟು ಹೋಗಿದ್ದರು. ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು, ಕಾಣೆಯಾದ ಮಹಿಳೆ ಬಾಗಲಕೋಟೆಯಲ್ಲಿ ದೊರೆತ ಹಿನ್ನಲೆಯಲ್ಲಿ ಸಖಿ ಕೇಂದ್ರ ಮಹಿಳೆಯನ್ನು ಸುರಕ್ಷಿತವಾಗಿ ಕುಟುಂಬದವರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಖಿ ಒನ್ ಸ್ಟಾಪ್ ಸೆಂಟರ್‌ನ ತ್ವರಿತ ಕಾರ್ಯಾಚರಣೆ ಮತ್ತು ವಿವಿಧ ಇಲಾಖೆಗಳ ಸಮನ್ವಯದಿಂದ ಮಹಿಳೆ ಸುರಕ್ಷಿತವಾಗಿ ಕುಟುಂಬದ ಮಡಿಲು ಸೇರಿದ್ದಾರೆ. ಈ ಪ್ರಕರಣ ಸಖಿ ಕೇಂದ್ರದ ಮೂರನೇ ಯಶಸ್ವಿ ಕಾರ್ಯಾಚರಣೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net