ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ಆಡಿಯೋ.!

ಎಸ್.ಜಿ.ನಂಜಯ್ಯನಮಠ-ಆರ್.ಬಿ.ತಿಮ್ಮಾಪುರ
ಎಸ್.ಜಿ.ನಂಜಯ್ಯನಮಠ-ಆರ್.ಬಿ.ತಿಮ್ಮಾಪುರ
Published on

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಸಚಿವ ಸ್ಥಾನ ಸಿಗದೇ ಇರುವ ಶಾಸಕರು ತಮ್ಮ ಅಸಮಧಾನ ಹೊರಹಾಕುತ್ತಿದ್ದಾರೆ. ಕೆಲವರು ರಾಜೀನಾಮೆ ಮಾತು ಹೇಳುತ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್ ಪಕ್ಷದ ಇಬ್ಬರು ಹಿರಿಯ ಮುಖಂಡರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಅದು ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ.

ಬಾಗಲಕೋಟೆ ಜಿಲ್ಲೆ ಮುಧೋಳ ಕ್ಷೇತ್ರದ ಶಾಸಕ, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಬಾಗಲಕೋಟೆ ಘಟಕದ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸಚಿವರಾಗಲು ಪೇಮೆಂಟ್ ಮಾಡಿದ್ದಾರೆ, ಸಚಿವರು ಪ್ರಾಮಾಣಿಕರಾಗಿ ಇರುವಂತೆ ನಾವೆಲ್ಲ ಹೇಳಿದ್ದೇವೆ ಎಂದು ವೇಣುಗೋಪಾಲ ಹೇಳಿದ್ದರು ಎನ್ನುವುದು ಹಾಗೂ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ದುರ್ದೈವ ಹಾಗೆಯೇ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಸಚಿವರಾಗಿದ್ದು, ಅವರನ್ನು ಬಾಗಲಕೋಟೆಗೆ ಉಸ್ತುವಾರಿ ಆಗದಂತೆ ತಡೆಯುವ ಬಗ್ಗೆ ಮಾತನಾಡಿರುವ ಆಡಿಯೋ ಇದಾಗಿದೆ.
ಪಕ್ಷದ ಹೈಕಮಾಂಡ್ ವಿರುದ್ಧವೇ ಟೀಕೆ, ಟಿಪ್ಪಣಿ, ದುಡ್ಡಿದ್ದವರಿಗೆ ಸಚಿವ ಸ್ಥಾನ ಎನ್ನುವ ಮಾತುಗಳು ಇದೀಗ ವಿಪಕ್ಷಗಳಿಗೆ ಅಸöವಾಗಿದ್ದರೆ ಕಾಂಗ್ರೆಸ್ ಹೈಕಮಾಂಡ್ ಮುಜುಗರ ಪಡುವಂತೆ ಮಾಡಿದೆ.
ಆಡಿಯೋದಲ್ಲಿ ಯಾರು ಏನು ಅಂದಿದ್ದಾರೆ...?
ಆರ್.ಬಿ. ತಿಮ್ಮಾಪುರ: `ಪೇಮೆಂಟ್ ಆಗಿವೆ ಎನ್ನುತ್ತಾರೆ'.
ಎಸ್.ಜಿ. ನಂಜಯ್ಯನಮಠ: `ಶೇ ೭೦, ೭೫ ರಷ್ಟಿವೆ. ನಮ್ಮ ಬಾತ್ಮಿ ಪ್ರಕಾರ ಶೇ೮೦ ರಷ್ಟು ಆಗಬಬಹುದು'.
ತಿಮ್ಮಾಪುರ: `ಕೆಲವರು ಕೊಟ್ಟಾರ ಅಂತ ಹೇಳುತ್ತಾರೆ'
ನಂಜಯ್ಯನಮಠ: `ಕೊಟ್ಟಿರಬಹುದು'
ತಿಮ್ಮಾಪುರ: `ಅಂತಹವು ಬಹಳ ಇವೆ. ಜೈಲಿನಾಗಿಂದ ಬಂದವರಿಗೂ ಕೊಟ್ಟಾರ'.
ನಂಜಯ್ಯನಮಠ: ನಾಗೇಂದ್ರ ಕೊಟ್ಟಿರುವುದು ದುರಂತ. ಕೇಸ್ ಇದೆ. ನಿರ್ದೋಷಿ ಅಲ್ಲ. ಜಾಮೀನು ಸಿಕ್ಕಿದೆ. ಅದನ್ನು ನಾವು Àಮರ್ಥಿಸಿಕೊಳ್ಳಬೇಕು'
ತಿಮ್ಮಾಪುರ: `ಎಚ್.ಕೆ. ಪಾಟೀಲರು ಏನು ತಪ್ಪು ಮಾಡ್ಯಾರ'
ನಂಜಯ್ಯನಮಠ: `ಪಾಪ. ಬಹಳ ಅಂದ್ರೆ ಇವರು ಹೇಳಿದಷ್ಟು ಹಣ ಕೊಟ್ಟಿರಲಿಕ್ಕಿಲ್ಲ. ಯಾವ ಖಾತೆ ಕೊಟ್ಟರೂ ಸಮರ್ಥರಾಗಿ ನಿರ್ವಹಣೆ ಮಾಡಿದ್ದಾರೆ'
ತಿಮ್ಮಾಪುರ: `ಸುನೀಲ ಕನಗೋಳ ಯಾರು?'
ನಂಜಯ್ಯನಮಠ: `ಸುನೀಲ ಕನಗೋಳ ಅಂತ ಯಾರ ಅದಾರ. ಮೇಲೆ ಒಂದು ನಮೂನೆ ಹುಚ್ಚಿದ್ದಂಗ ಇವೆ. ಹಿಂದಕ್ಕೊಮೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ಎಚ್.ಕೆ. ಪಾಟೀಲ ಪರ ಕೆ.ಸಿ. ವೇಣುಗೋಪಾಲ್ ಅವರ ಮುಂದೆ ಹೇಳಿದೆ. `ನಾವು ಹೈಕಮಾಂಡ್‌ನವರು ಪ್ರಾಮಾಣಿಕರಾಗಿ ಇರು ಅಂತ ಹೇಳಿದ್ದೇವೆಯೇ? ನಾನು, ಎ.ಎಂ. ಹಿಂಡಸಗೇರಿ ಮತ್ತಿತರು ಇದ್ದಾಗ ಮಾತನಾಡಿದೆ. ೨೦೧೩ರಕ್ಕೆ ಮುಂಚೆ ಸಮ್ಮಿಶ್ರ ಸರ್ಕಾರ ರಚನೆ ಮಾಡುವಾಗ ಹೇಳಿದ್ದೆ. ಪ್ರಾಮಾಣಿಕರಾಗು ಅಂತ ಯಾರು ಹೇಳಿದ್ದರು ಅಂದ ಅಂವಾ. ಇದಕ್ಕೇನು ಉತ್ತರ ಕೊಡುವುದು. ನಾವು ಫಟಿಂಗ್ ಆಗು ಎಂದಿದ್ದೆವು ಅಂದAಗಾಯಿತು'.
ನಂಜಯ್ಯನಮಠ: `ನಿಮ್ಮದೊಂದು, ಅವರದೊಂದು ಆಗಬೇಕಿತ್ತು. ಉತ್ತರ ಕರ್ನಾಟಕದಾಗ ಮಾದರ ಪೈಕಿ ಯಾರೂ ಇಲ್ಲ. ಪಕ್ಷ ಸಂಘಟನೆ ಮಾಡಿರಿ. ನಿಮಗೆ ಕೊಡಿ ಅಂದಿದ್ದೆವು. ಹೊಂದುದ ಕಷ್ಟ, ಜಾತ್ರೆ ಮಾಡಿಕೊಂಡು ಹೋಗುತ್ತಾರ. ಹೊರಗ ಅಡ್ಡಾಡುವುದು ಬಿಡುವಂಗಿಲ್ಲ. ಉಸ್ತುವಾರಿಯನ್ನು ಕಣ್ಣಿಲೇ ನೋಡಬೇಕಲ್ಲ.
ತಿಮ್ಮಾಪುರ: `ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಲಕ್ಷಣ ಸವದಿ ಅವರನ್ನು ಮಾಡುವಂತೆ ಹೇಳಿತ್ತೇವೆ'
ನಂಜಯ್ಯನಮಠ: `ಮಾಡಿದರೆ ಏನು ಮಾಡಲಿಕ್ಕೆ ಆಗುವುದಿಲ್ಲ. ಉಳಿದ ಎಂಎಲ್‌ಎಗಳಿಗೆ ಹೇಳಿ'
ತಿಮ್ಮಾಪುರ: `ನಾಲ್ಕು ಮಂದಿ(ಜಿಲ್ಲೆಯ ಕಾಂಗ್ರೆಸ್ ಶಾಸಕರು) ಬರೆದುಕೊಡುತ್ತೇವೆ`
ನಂಜಯ್ಯನಮಠ: ಬರೆದು ಕೊಡುವುದು ನೀವು ಮಾಡಿ, ಶಿವಕುಮಾರ್ ಅವರಿಗೆ ಮಾತನಾಡುವುದು ನಾವು ಮಾಡುತ್ತೇವೆ. ಮೊದಲು ಬರೆದುಕೊಡುವುದು ಮಾಡಿ. ಆಗಸ್ಟ್ ೧೫ ಬಂತು ಅಷ್ಟರಲ್ಲಿ ಇದು ಆಗಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net