ಬಗೆಹರಿಯದ ಕಾಂಗ್ರೆಸ್ ಟಿಕೆಟ್ ಗೊಂದಲ !

ಮಹಾದೇವಿ
ಮಹಾದೇವಿ
Published on
ಅಶೋಕ ಶೆಟ್ಟರ, ಬಾಗಲಕೋಟೆ: ಶಾಸಕ ಎಚ್.ವೈ.ಮೇಟಿ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರಕ್ಕೆ ಈಗಾಗಲೇ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಎರಡು ಪಕ್ಷಗಳಲ್ಲಿ ಇನ್ನೂ ಅಽಕೃತವಾಗಿ ಅಭ್ಯರ್ಥಿಗಳ ಘೋಷಣೆಯಾಗಬೇಕಷ್ಟೆ. ಈ ನಡುವೆ ಕೈ-ಕಮಲ ಪಕ್ಷಗಳು ರಾಜಕೀಯ ಜಂಗೀ ಕುಸ್ತಿಗೆ ಅಖಾಡ ಸಿದ್ದಗೊಳಿಸಿದ್ದಾರೆ.
ಚುನಾವಣೆ ದಿನಾಂಕ ನಿಗದಿಗೂ ಒಂದು ದಿನ ಹಿಂದಷ್ಟೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಕೈ ಶಾಸಕರು, ಸಚಿವರ ಪಡೆ ಬಾಗಲಕೋಟೆಗೆ ಲಗ್ಗೆ ಹಾಕಿ ಸರ್ಕಾರಿ ಕಾರ್ಯಕ್ರಮ ನಡೆಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು, ಉದ್ಘಾಟನೆ ಮತ್ತು ಘೋಷಣೆ ಮಾಡಿ ಚುನಾವಣೆ ಕಾವು ಹೆಚ್ಚಿಸಿ ಹೋಗಿದ್ದಾರೆ. ಮೇಟಿ ಕುಟುಂಬಕ್ಕೆ ಪಕ್ಷದ ಟಿಕೆಟ್ ಎನ್ನುವ ಸುಳಿವು ನೀಡಿ, ಅನುಕಂಪದ ಲಾಭ ಪಡೆದು ಪಕ್ಷದ ಪ್ರತಿಷ್ಠೆ ಉಳಿಸಿಕೊಳ್ಳಲು ಮುಂದಾಗಿದೆ.
ಇದೀಗ ಟಿಕೆಟ್ ಮಲ್ಲಿಕಾರ್ಜುನ ಮೇಟಿ ಅವರಿಗೋ ಅಥವಾ ಉಮೇಶ ಮೇಟಿ ಅವರಿಗೋ ಎನ್ನುವ ಚರ್ಚೆ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲೂ ಮೇಟಿ ಅವರ ಪುತ್ರಿ ಮಹಾದೇವಿ ಅವರು ತಮ್ಮ ಟಿಕೆಟ್ ಪೈಪೋಟಿ ನಿಲ್ಲಿಸಿಲ್ಲ. ಮೇಟಿ ಸಹೋದರರು ಮಾಧ್ಯಮಗಳ ಎದುರು ತಮ್ಮಿಬ್ಬರಲ್ಲಿ ಯಾವುದೇ ಪೈಪೋಟಿ ಇಲ್ಲ. ಯಾರಿಗೆ ಸಿಕ್ಕರೂ ಸರಿ. ಅಥವಾ ಹೊರಗಿನವರಿಗೂ ಟಿಕೆಟ್ ಕೊಟ್ಟರೂ ಅಭ್ಯಂತರ ಇಲ್ಲ ಎನ್ನುವ ಎಂದು ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಆದರೆ, ಇದೇ ಮಾತನ್ನು ಆ ಕುಟುಂಬದ ಕಿರಿಯ ಪುತ್ರಿ ಮಹಾದೇವಿ ಮೇಟಿ ಅವರ ವಿಚಾರದಲ್ಲಿ ಹೇಳಲು ಆಗಲ್ಲ. ಅವರು ಈಗಾಗಲೇ ತಮಗೆ ಟಿಕೆಟ್ ಕೊಡಬೇಕು ಎನ್ನುವ ಹಕ್ಕೋತ್ತಾಯವನ್ನು ಜಿಲ್ಲಾಮಟ್ಟದಲ್ಲಿ ನಡೆದಿದ್ದ ಅಭಿಪ್ರಾಯ ಸಂಗ್ರಹದ ವೇಳೆ ಪುನರುಚ್ಛರಿಸಿದ್ದರು. ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಪಕ್ಷ ಅಭ್ಯರ್ಥಿ ಘೋಷಣೆಗೂ ಮುನ್ನವೇ ಮಾ. ೨೦ ರಂದೇ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಅಭಿಮಾನಿ ಸಂಘದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳಿಗೂ ಹೌದು, ಸಲ್ಲಿಸುವೆ ಎಂದಿದ್ದಾರೆ.
ಸಿಎಂ ಅಂಗಳದಲ್ಲಿ ಚಂಡು :
ಮೇಟಿ ಕುಟುಂಬದಲ್ಲಿ ಟಿಕೆಟ್ ಪೈಪೋಟಿ ಹೆಚ್ಚಿರುವ ಬಗ್ಗೆ ಈ ವರೆಗೂ ಕಾದು ನೋಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಚುನಾವಣೆಗೆ ಮಹೂರ್ತ ಫಿಕ್ಸ್ ಆಗಿದ್ದರಿಂದ ಕುಟುಂಬದಲ್ಲಿನ ಪೈಪೋಟಿ ಶಮನಕ್ಕೆ ಮುಂದಾದAತೆ ಕಾಣುತ್ತಿದೆ. ಮಾ. ೧೮ ತಮ್ಮನ್ನು ಬೆಂಗಳೂರಗೆ ಬರುವಂತೆ ಆವ್ಹಾನ ನೀಡಿದ್ದಾರೆ. ಬಹುಶಃ ಸಹೋದರ ಮತ್ತು ಸಹೋದರಿಗೂ ಕರೆದಿರಬಹುದು ಎಂದು ಮಹಾದೇವಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮೇಟಿ ಅವರು ಹಿರಿಯ ಪತ್ರ ಮಲ್ಲಿಕಾರ್ಜುನ ಮೇಟಿ ಅವರನ್ನು ಸಂಪರ್ಕಿಸಿದಾಗ, ಬೆಂಗಳೂರಗೆ ಬರವಂತೆ ನನಗೆ ಈ ಕ್ಷಣದ ವರೆಗೂ ನನಗೆ ಯಾರೂ ತಿಳಿಸಿಲ್ಲ. ಕರೆದರೆ ಹೋಗುತ್ತೇನೆ ಎಂದಷ್ಟೆ ಹೇಳಿದರು.
ಚಂದ್ರಶೇಖರ ರಾಠೋಡ ಅಸಮಧಾನ :
ಇತ್ತ ಪಕ್ಷದ ಮುಖಂಡ ಚಂದ್ರಶೇಖರ ರಾಠೋಡ ಸಹ ಪಕ್ಷಕ್ಕೆ ನಿಷ್ಠೆಯಿಂದ ದುಡಿದರೂ ತಳಸಮುದಾಯಕ್ಕೆ ಅಽಕಾರ ಇಲ್ಲ ಎಂದು ತಮ್ಮ ಅಸಮಧಾನವನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರಹಾಕಿದ್ದಾರೆ. ಎನ್‌ಎಸ್‌ಯುಐ ಮೂಲಕ ಪಕ್ಷ ಸಂಘಟನೆಯಲ್ಲಿ ಪಾಲ್ಗೊಂಡು ೧೯೯೩ರಿಂದ ಈ ವರೆಗೂ ವಿವಿಧ ರೀತಿಯಲ್ಲಿ ಪಕ್ಷದ ಕೆಲಸ ಮಾಡಿದ್ದೇನೆ. ತಮ್ಮ ವಕೀಲಿ ವೃತ್ತಿ ಬದಿಗಿರಿಸಿ ಪಕ್ಷಕ್ಕಾಗಿ ದುಡಿದರೂ ಅಽಕಾರ, ಸ್ಥಾನಮಾನ ಇಲ್ಲ. ಇಂಥ ವರ್ತನೆಯಿಂದ ಪಕ್ಷದಲ್ಲಿ ಕೆಲಸ ಮಾಡುವ ಯುವಕರಿಗೆ, ಪ್ರಾಮಾಣಿಕರಿಗೆ ಅಽಕಾರ ಇಲ್ಲವೆಂದರೆ ಯಾವ ಸಂದೇಶ ಕೊಡುತ್ತಿದ್ದೀರಿ? ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಮ್ಮಂತ ಕಾರ್ಯಕರ್ತರ ಶಾಪ ತಟ್ಟುವುದು ಶತಃಸಿದ್ಧ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net