ಸಾಲ ಮಂಜೂರಾತಿ ಅನಗತ್ಯ ವಿಳಂಬ ಸಲ್ಲದು

ಬಾಗಲಕೋಟೆ ಜಿಪಂ ಸಭಾಭವನದಲ್ಲಿ ಸೋಮವಾರ ಸಂಸದ ಪಿ.ಸಿ.ಗದ್ದಿಗೌಡರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮಾಲೋಚನಾ ಮತ್ತು  ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಪ್ರಸಕ್ತ ಸಾಲಿನ ಸಾಲ ಯೋಜನೆಯ ಮಾಹಿತಿ ಪುಸ್ತಕವನ್ನು ಸಂಸದರು ಬಿಡುಗಡೆ ಮಾಡಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಽಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ರಾಜಕುಮಾರ ಹೂಗಾರ ಮತ್ತಿತರರು ಇದ್ದರು.
ಬಾಗಲಕೋಟೆ ಜಿಪಂ ಸಭಾಭವನದಲ್ಲಿ ಸೋಮವಾರ ಸಂಸದ ಪಿ.ಸಿ.ಗದ್ದಿಗೌಡರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮಾಲೋಚನಾ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಪ್ರಸಕ್ತ ಸಾಲಿನ ಸಾಲ ಯೋಜನೆಯ ಮಾಹಿತಿ ಪುಸ್ತಕವನ್ನು ಸಂಸದರು ಬಿಡುಗಡೆ ಮಾಡಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಽಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ರಾಜಕುಮಾರ ಹೂಗಾರ ಮತ್ತಿತರರು ಇದ್ದರು.
Published on
ಬಾಗಲಕೋಟೆ: ಸರ್ಕಾರದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರಾತಿಯಲ್ಲಿ ಅನಗತ್ಯ ವಿಳಂಬವಾಗದAತೆ ಕ್ರಮವಹಿಸಬೇಕೆಂದು ಸಂಸದ ಪಿ.ಸಿ.ಗದ್ದಿಗೌಡರ ಬ್ಯಾಂರ‍್ಸ್ಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಜಿಲ್ಲಾ ಸಮಾಲೋಚನಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳ ಉದ್ದೇಶವು ಜನಸಾಮಾನ್ಯರಿಗೆ ಸುಲಭವಾಗಿ ತಲುಪಬೇಕಾದರೆ ಬ್ಯಾಂಕ್‌ಗಳು ಹಾಗೂ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಅಗತ್ಯವಿದೆ. ರೈತರು, ಮಹಿಳೆಯರು, ಯುವ ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಅಗತ್ಯ ಹಣಕಾಸು ನೆರವು ಒದಗಿಸುವ ಕೆಲಸವಾಗಬೇಕು ಎಂದರು.
ಪ್ರಸಕ್ತ ಸಾಲಿನ ಮೊದಲನೇ ತ್ರೆÊಮಾಸಿಕ ಬ್ಯಾಂಕಿAಗ್ ಸಾಧನೆ, ವಾರ್ಷಿಕ ಸಾಲ ಯೋಜನೆ ಅನುಷ್ಠಾನ, ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಶಿಕ್ಷಣ, ವಸತಿ, ಸ್ವಯಂ ಉದ್ಯೋಗ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿರುವ ಸಾಲದ ಪ್ರಗತಿಯನ್ನು ವಿವರವಾಗಿ ಪರಿಶೀಲಿಸಿದರು.
ಪ್ರಧಾನಮಂತ್ರಿ ಮುದ್ರಾ ಯೋಜನೆ, ಪ್ರಧಾನಮಂತ್ರಿ ಸ್ವನಿಽ ಯೋಜನೆ, ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ, ಕೃಷಿ ಸಾಲ, ಶಿಕ್ಷಣ ಸಾಲ ಹಾಗೂ ಮನೆ ಸಾಲ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.
ಆದ್ಯತಾ ವಲಯಗಳಾದ ಕೃಷಿ, ತೋಟಗಾರಿಕೆ, ಪಶು, ಶಿಕ್ಷಣಕ್ಕೆ ಸಂಬAಽಸಿದAತೆ ಸಾಲ ವಿತರಣೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ವಿವಿಧ ಯೋಜನೆಗಳಡಿ ಬಾಕಿ ಉಳಿದಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಅರ್ಹರಿಗೆ ಸಾಲ ಮಂಜೂರು ಮಾಡುವಂತೆ ಬ್ಯಾಂಕ್ ಅಽಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಸರ್ಕಾರದ ಯೋಜನೆಗಳ ಲಾಭ ನಿಯಮಾನುಸಾರ ನಿಗದಿತ ಅವಽಯಲ್ಲಿ ದೊರೆಯದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಬಾಕಿ ಇರುವ ಅರ್ಜಿಗಳನ್ನು ೧೦ ದಿನಗಳೊಳಗಾಗಿ ವಿಲೇ ಮಾಡಿ ವರದಿ ಸಲ್ಲಿಸಲು ತಿಳಿಸಿದರು.
ಬೀದಿ ಬದಿ ವ್ಯಾಪಾರಸ್ಥರಿಗೆ ಬ್ಯಾಂಕ್ ಸಾಲ ಕೊಡಲು ಆರ್‌ಡಿ ಸ್ಕಿಮ್ ಮಾಡಿದರೆ ಮಾತ್ರ ಸಾಲ ಮಂಜೂರು ಮಾಡುವುದಾಗಿ ಕೆಲವೊಂದು ಬ್ಯಾಂಕ್‌ಗಳು ಹೇಳುತ್ತಿರುವುದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಈ ರೀತಿ ಆಗಬಾರದು. ಬ್ಯಾಂಕ್ ಅಽಕಾರಿಗಳಿಗೆ ತಮ್ಮ ವ್ಯಾಪ್ತಿಯ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಬೇಕು. ಸೂರ್ಯಾ ಘರ್ ಯೋಜನೆಯಡಿ ಸೋಲಾರ ಅಳವಡಿಕೆ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ತಿಳಿಸಿದರು.
ನಬಾರ್ಡ ಮತ್ತು ಆರ್.ಬಿ.ಐ ಅಽಕಾರಿಗಳು ಹೊಸ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಆರ್‌ಸೆಟ್ ಸಂಸ್ಥೆಯಿAದ ವಿವಿಧ ವೃತ್ತಿ ಕೌಶಲ್ಯ ಕುರಿತು ತರಬೇತಿ ನೀಡಿರುವ ಬಗ್ಗೆ ಮಾಹಿತಿಯನ್ನು ಸಭೆಗೆ ತಿಳಿಸಿದಾಗ, ಈ ವೇಳೆ ಜಿಲ್ಲಾಽಕಾರಿ ಸಂಗಪ್ಪ ಅವರು ಮಾತನಾಡಿ, ಮುಖ್ಯವಾಗಿ ವೈರಿಂಗ್, ಪ್ಲಂಬಿAಗ್ ಸೇರಿದಂತೆ ಮೊಬೈಲ್, -ೆÇÃಟೋಗ್ರಾಫಿ ಹಾಗೂ ಲೇಬರ್ ಓರಿಯಂಟ್ ತರಬೇತಿಗಳನ್ನು ನೀಡುವುದು ಅವಶ್ಯವಾಗಿದೆ. ತರಬೇತಿ ಕೊಟ್ಟು ಬ್ಯಾಂಕ್‌ನಲ್ಲಿ ಸಾಲ ಒದಗಿಸಿದರೆ ಸಾಲದು ಇದರಿಂದ ಪ್ರಯೋಜನವಾಗುತ್ತಿರುವ ಬಗ್ಗೆ ಗಮನ ಹರಿಸಲು ತಿಳಿಸಿದರು.
ವಿವಿಧ ಯೋಜನೆಗಳಿಗೆ ಸಂಬAಽಸಿದ ಸಾಲ ಮಂಜೂರಾತಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಹತ್ತು ದಿನಗಳಲ್ಲಿ ವಿಲೇ ಮಾಡುವಂತೆ ಜಿಪಂ ಸಿಇಒ ಗಜಾನನ ಬಾಲೆ ಹೇಳಿದರು.
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಸಾಲ ಯೋಜನೆಯ ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಮುಖ್ಯ ಲೆಕ್ಕಾಽಕಾರಿ ಸಿದ್ದರಾಮೇಶ್ವರ ಉಕ್ಕಲಿ, ಜಿಲ್ಲಾ ಅಗ್ರಣಿ ಬ್ಯಾಂಕ್‌ನ ವ್ಯವಸ್ಥಾಪಕ ರಾಜಕುಮಾರ ಹೂಗಾರ, ನಬಾರ್ಡ ಬ್ಯಾಂಕ್‌ನ ಡಿಡಿಎಂ ವಿಷ್ಣುವರ್ಧನ, ಆರ್.ಬಿ.ಐ ಎಲ್‌ಡಿಒ ಸೀಲಪ್ರೀಯಾ ಗೌತಮ, ಕೆನರಾ ಬ್ಯಾಂಕ್ ಎಜಿಎಂ ಯೋಗೇಶ ಪೂಜಾರ, ಕೆಜಿಬಿ ಬ್ಯಾಂಕ್‌ನ ಆರ್‌ಎಂ ಪರಮೇಶ್ವರ ಸೇರಿದಂತೆ ಜಿಲ್ಲಾ ಮಟ್ಟದ ಅಽಕಾರಿಗಳು, ಬ್ಯಾಂರ‍್ಸ್ಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net