ವಿಕಸಿತ ಭಾರತದ ಆಧಾರಸ್ಥಂಭವಾಗಿ ಪ್ರಗತಿಯ ಇಂಜಿನ್ ಆಗಿರುವ ರೈಲ್ವೆ ಅಭಿವೃದ್ಧಿ ಸೇರಿದಂತೆ ಎಲ್ಲ ರಂಗಗಳ ಅಭಿವೃದ್ಧಿಗೂ ಮೋದಿ ಸರ್ಕಾರ ಹೆಚ್ಚಿನ ಒತ್ತು ಕೊಟ್ಟಿದೆ. ರೈಲ್ವೆ ಅಪಘಾತಗಳನ್ನು ತಡೆಯಲು ರಾಷ್ಟçದಲ್ಲಿ ೧೦ ಸಾವಿರ ಎಂಜಿನ್, ೧೫ ಸಾವಿರ ಕಿ.ಮೀ.ಗೆ ಸ್ವದೇಶಿ ನಿರ್ಮಿತ `ಕವಚ್' ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ರಾಜ್ಯದಲ್ಲಿಯೂ ರೂ. ೧,೭೦೦ ಕೋಟಿ ವೆಚ್ಚದಲ್ಲಿ ೩,೫೦೦ ಕಿ.ಮೀ. `ಕವಚ್' ತಂತ್ರಜ್ಞಾನ ಅಳವಡಿಕೆಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.