ದಿಢೀರ ಸ್ಪೋಟ ; ಕಾರು ಛಿದ್ರ ಛಿದ್ರ

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಬಾರ್ ಮುಂದೆ ನಿಲ್ಲಿಸಿದ್ದ ಕಾರು ಏಕಾಏಕಿ ಸ್ಪೋಟಗೊಂಡು, ಕಾರು ಸಂಪೂರ್ಣ ಸುಟ್ಟು ಹೋಗಿರುವುದು.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಬಾರ್ ಮುಂದೆ ನಿಲ್ಲಿಸಿದ್ದ ಕಾರು ಏಕಾಏಕಿ ಸ್ಪೋಟಗೊಂಡು, ಕಾರು ಸಂಪೂರ್ಣ ಸುಟ್ಟು ಹೋಗಿರುವುದು.
Published on
ಬಾಗಲಕೋಟೆ: ಬಾರ್ ಮುಂದೆ ನಿಲ್ಲಿಸಿದ್ದ ಕಾರು ದಿಢೀರನೆ ಸ್ಪೋಟಗೊಂಡ ಘಟನೆ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಶನಿವಾರ ರಾತ್ರಿ ೯.೪೫ ಗಂಟೆ ವೇಳೆಗೆ ಸಂಭವಿಸಿದೆ.
ನಿಲ್ಲಿಸಿದ್ದ ಕಾರು ಏಕಾಏಕಿ ಸ್ಪೋಟಗೊಂಡಿದ್ದರಿAದ ವಾಹನ ಹತ್ತು ಅಡಿ ಎತ್ತರಕ್ಕೆ ಹಾರಿ, ಅಂದಾಜು ೨೦೦ ಅಡಿ ದೂರದವರೆಗೂ ಕಾರಿನ ಅವಶೇಷಗಳು ಹಾರಿ ಬಿದ್ದಿವೆ. ಈ ವೇಳೆ ಬೈಕ್‌ನಲ್ಲಿ ಹೊರಟಿದ್ದ ಸವಾರನ ಕಾಲಿಗೆ ಕಾರಿನ ಅವಶೇಷ ಬಡಿದು ಸಣ್ಣ ಗಾಯವಾಗಿದೆ.
ಕೆಎ ೪೮ ಎನ್ ೪೦೩೮ ನಂಬರ್‌ನ ಎಕ್ಸ್ಯುವಿ೩೦೦ ಕಾರು ಸ್ಪೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ಸುತ್ತಮುತ್ತ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿದ್ದಲ್ಲದೇ ಅಲ್ಲಿನ ಸಿಸಿಟಿವಿ ಸ್ಕಿçÃನ್ ಸಹ ಕ್ರ‍್ಯಾಶ್ ಆಗಿದೆ. ಕಾರು ನಿಂತಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಒಂದೇರೆಡು ಸೆಕೆಂಡ್‌ನಲ್ಲಿ ಉಂಟಾದ ಸ್ಪೋಟದ ದೃಶ್ಯ ಸೆರೆಯಾಗಿಲ್ಲ. ಅದರ ರಭಸಕ್ಕೆ ಸ್ಕಿçÃನ್ ಕ್ರ‍್ಯಾಶ್ ಆಗಿದೆ.
ಭಾರಿ ತೀವ್ರತೆಯಿಂದ ಸ್ಪೋಟವಾಗಿದ್ದು, ಕಾರಿನಲ್ಲಿ ಯಾರೋ ಬಾಂಬ್ ಇಟ್ಟಿರಬಹುದು ಎಂದು ಕಾರಿನ ಮಾಲೀಕ ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರು ಸ್ಪೋಟಗೊಂಡ ಸಮಯದಲ್ಲಿ ಅದರಲ್ಲಿ ಯಾರೂ ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಬಕವಿ ಪಟ್ಟಣದ ಹನಮಂತ ಎನ್ನುವವರಿಗೆ ಸೇರಿದ ಕಾರು ಇದಾಗಿದೆ. ಹಿಪ್ಪರಗಿಯಲ್ಲಿ ವೈನ್ ಶಾಪ್ ಇದ್ದು, ಪ್ರತಿ ದಿನ ಸಂಜೆ ರಬಕವಿಯಿಂದ ಹಿಪ್ಪರಗಿಗೆ ಹೋಗುವಂತೆ ಶನಿವಾರ ಸಹ ಸಂಜೆ ೪.೩೦ಕ್ಕೆ ವೈನ್ ಶಾಪ್ ಮುಂದೆ ವಾಹನ ನಿಲ್ಲಿಸಿದ್ದಾರೆ. ರಾತ್ರಿ ೧೦.೪೫ಕ್ಕೆ ಶಾಪ್ ಕ್ಲೋಸ್ ಮಾಡಿಕೊಂಡು ದುಡ್ಡು ತೆಗೆದುಕೊಂಡು ಹೋಗಲಿದ್ದರು. ಅಷ್ಟರಲ್ಲಿ ೧೦.೩೦ರ ಸುಮಾರಿಗೆ ಭಾರಿ ಸದ್ದು ಆಯಿತು. ನೋಡಿದರೆ ಕಾರು ಬ್ಲಾಸ್ಟ್ ಆಗಿತ್ತು. ಹೇಗಾಗಿದೆ ಎಂದು ನಮಗೆ ಗೊತ್ತಿಲ್ಲ ಎಂದು ಹನಮಂತ ಅವರು ಹೇಳುತ್ತಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾಗೆಯೇ ಬಾಂಬ್ ನಿಷ್ಕೀಯದಳ, ಸೊಕೋ ತಂಡಗಳು ಪರಿಶೀಲನೆ ಮಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ಧಾರ್ಥ ಗೋಯಲ್, ಈಗಾಗಲೇ ಸಿಸಿಟಿವಿ ಪುಟೇಜ್, ಕಾಲ್ ಸಿಡಿಆರ್ ಪರಿಶೀಲಿಸಲಾಗಿದೆ. ನಿಲ್ಲಿಸಿದ್ದ ಕಾರಿನ ಬಳಿ ಯಾರೂ ಹೋಗಿರುವುದು ಕಂಡು ಬಂದಿಲ್ಲ. ೯.೪೫ರ ಸುಮಾರು ಮೂವರು ಬಾರ್‌ನಲ್ಲಿ ಮದ್ಯ ಖರೀದಿಸಿ ಆ ಕಡೆಗೆ ಹೋಗಿದ್ದರು. ಅವರನ್ನು ಸಹ ವಿಚಾರಣೆ ಮಾಡಿದ್ದೇವೆ. ಸದ್ಯಕ್ಕೆ ಕಾರಿನ ಇಂಜಿನ್ ಬಳಿ ಬ್ಲಾಸ್ಟ್ ಆಗಿರುವುದು ಕಂಡು ಬಂದಿದೆ. ಬ್ಯಾಟರಿ ಅಥವಾ ಇಂಜಿನ್‌ಗೆ ಸಂಬAಽಸಿದAತೆ ಸ್ಪೋಟ ಸಂಭವಿಸಿರಬಹುದು ಎನ್ನುವ ಅನುಮಾನ ಇದೆ. ಕಾರಿನ ಅವಶೇಷಗಳನ್ನು ಸಂಗ್ರಹಿಸಿ ಎ-ï‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಸ್ಪೋಟ ಹೇಗಾಗಿದೆ ಎನ್ನುವುದು ಗೊತ್ತಾಗಲಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net