ಮಾರ್ಗದರ್ಶನ, ಸಲಹೆ ಕೋರಿರುವೆ

ಮುಧೋಳದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಭೇಟಿ ಮಾಡಿದರು.
ಮುಧೋಳದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಭೇಟಿ ಮಾಡಿದರು.
Published on

ರಾಜ್ಯ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎಬ್ಬಿಸಿರುವ ಹಾಗೂ ವಿಪಕ್ಷಗಳ ಕೈಗೆ ಪ್ರಬಲ ಅಸöವಾಗಿರುವ ಮಾಜಿ ಸಚಿವ ಆರ್.ತಿಮ್ಮಾಪುರ ಮತ್ತು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಅವರದ್ದು ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೆ ಗುರುವಾರ ಮುಧೋಳದಲ್ಲಿ ತಿಮ್ಮಾಪುರ ಅವರನ್ನು ಸಚಿವ ವಿಜಯಾನಂದ ಕಾಶಪ್ಪನವರ ಭೇಟಿ ಮಾಡಿ ಗಮನ ಸೆಳೆದರು.

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಲು ಬಿಡಲ್ಲ ಎಂದು ವಿಜಯಾನಂದ ಕಾಶಪ್ಪನವರ ಉದ್ದೇಶಿಸಿ ಮಾತನಾಡಿರುವುದು ಆಡಿಯೋದಲ್ಲಿ ಇದೆ. ತಡೆಯಲು ಇರ‍್ಯಾರು ಎಂದು ಸಹ ಕಾಶಪ್ಪನವರ ತಿರುಗೇಟು ಕೊಟ್ಟಿದ್ದರು. ಇದರಿಂದ ಇಬ್ಬರ ನಡುವೆ ಆಂತರಿಕ ಕದನ ಮುಂದುವರೆಯುತ್ತದೆ ಎನ್ನುವಾಗಲೇ ಇಬ್ಬರು ಭೇಟಿ ಕುತೂಹಲ ಮೂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯಾನಂದ ಕಾಶಪ್ಪನವರ, ಆರ್.ಬಿ.ತಿಮ್ಮಾಪುರ ಮಾಜಿ ಸಚಿವರು, ಜಿಲ್ಲೆಯ ಹಿರಿಯ ನಾಯಕರು ಸಹ. ನಾನು ಬರ ವೀಕ್ಷಣೆಗೆ ಹೋಗಿದ್ದೆ. ಮುಧೋಳ ತಾಲೂಕು ಸಹ ಇದ್ದಿದ್ದರಿಂದ ಅವರನ್ನು ಸೌಜನ್ಯವಾಗಿ ಭೇಟಿ ಮಾಡಿದೆ. ನಿಮ್ಮ ಕ್ಷೇತ್ರದಲ್ಲಿ ಬರ ವೀಕ್ಷಣೆ ಮಾಡಲು ಬರುವ ವಿಚಾರ ತಿಳಿಸಿ, ತಮ್ಮ ಮಾರ್ಗದರ್ಶನ, ಸಲಹೆ ಇರಲಿ ಎಂದು ಕೋರಿದ್ದೇನೆ ಎಂದರು.
ವೈರಲ್ ಆಗಿರುವ ಆಡಿಯೋ ಬಗ್ಗೆ ಚರ್ಚೆ ನಡೆಯಿತಾ ಎನ್ನುವ ಪ್ರಶ್ನೆಗೆ, ಆಡಿಯೋ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ನನ್ನದು ಒಗ್ಗೂಡಿಸುವಂತದ್ದು. ಹಿಂದೆ ಏನೇ ಆಗಿರಬಹುದು. ಮುಂದೆ ನನ್ನ ಕಾಲದಲ್ಲಿ ಆಗಲು ಬಿಡುವುದಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು.
ಆಡಿಯೋ ಎಡಿಟ್ ಆಗಿದೆ ಎಂದಿರುವ ಎಸ್.ಜಿ.ನಂಜಯ್ಯನಮಠ ಹೇಳಿಕೆ ಬಗ್ಗೆ, ಆ ಬಗ್ಗೆ ಅವರು ದೂರು ಕೊಡಲಿ. ನಾನು ಎಸ್ಪಿ ಅವರೊಂದಿಗೆ ಮಾತನಾಡಿ ಆ ಬಗ್ಗೆ ಪರಿಶೀಲನೆ ಮಾಡಲು ಕಳಿಸೋಣ. ಆ ರೀತಿ ಆಗಿದ್ದರೆ ಚೆಕ್ ಮಾಡೋಣ. ಅದಕ್ಕೆ ಮುಂದೆ ವರಿಷ್ಠರು ಏನು ನಿರ್ಧಾರ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತಾರೆ.
ಎರಡು ದಿನದ ಬಳಿಕ ಬರ ವರದಿ :
ಜಿಲ್ಲೆಯಲ್ಲಿ ಈಗ ಎರಡು ದಿನ ಬರ ವೀಕ್ಷಣೆ ಮಾಡಿದ್ದೇನೆ. ಬೀಳಗಿ ಮತ್ತು ಮುಧೋಳ ತಾಲೂಕಿನಲ್ಲಿ ಆಗಬೇಕು. ಲೋಕಾಪುರದಲ್ಲಿ ನಾಳೆ ಹೋಗೋಣ ಎಂದು ತಿಮ್ಮಾಪುರ ಅವರು ಹೇಳಿದ್ದಾರೆ. ಹಾಗೆಯೇ ಬೀಳಗಿ ಶಾಸಕ ಜೆ.ಟಿ.ಪಾಟೀಲ ಅವರನ್ನು ನಾಳೆ ಕರೆದುಕೊಂಡು ಅವರ ಕ್ಷೇತ್ರದಲ್ಲೂ ಬೆಳೆಹಾನಿ ವೀಕ್ಷಣೆ ಮಾಡಿ, ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಸಚಿವ ಕಾಶಪ್ಪನವರ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net