ಅಲ್ಲದೇ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲೆ ಸಾಕಷ್ಟು ಬೆಳವಣಿಗೆಗಳು ಆಗಿದ್ದು, ಶಾಸಕರು, ಸಚಿವರು ಅದರಲ್ಲೆ ಮುಳುಗಿ ತಮ್ಮ ಸ್ಥಾನಮಾನಕ್ಕೆ ಏನೆಲ್ಲ ಪರಿಣಾಮ ಬೀರಬಹುದು ಎನ್ನುವ ಲೆಕ್ಕಚಾರದಲ್ಲಿ ಮುಳುಗಿದ್ದಾರೆ. ಹೀಗಾಗಿ ಇಲ್ಲಿ ಅಕ್ರಮ ಮರಳು ದಂಧೆಯಲ್ಲಿ ಸಿಲುಕಿ ಇದರಿಂದ ರಕ್ಷಣೆ ಮಾಡಿ ಎನ್ನುವ ಕೆಲವರ ಒತ್ತಡದ ಕಡೆಗೆ ಗಮನ ಹರಿಸಲು ಆಗುತ್ತಿಲ್ಲ. ಇತ್ತ ಲೋಕಾಯುಕ್ತ ಅಽಕಾರಿಗಳು ವಿವಿಧ ಇಲಾಖೆ ಅಽಕಾರಿಗಳ ಸಭೆ ನಡೆಸಿ, ಅಕ್ರಮ ಮರಳುಗಾರಿಕೆ ಪತ್ತೆ ಮಾಡಿದ ಬಳಿಕ ಏನೆಲ್ಲ ಕ್ರಮ ತೆಗೆದುಕೊಂಡಿದ್ದೀರಿ? ಯಾವ ಕೇಸ್ ಹಾಕಿದ್ದೀರಿ ಎನ್ನುವ ಕುರಿತು ಶೀಘ್ರದಲ್ಲೆ ವರದಿ ನೀಡುವಂತೆ ಗಡುವು ನೀಡಿದ್ದು, ಅಽಕಾರಿಗಳಿಗೂ ಬಿಸಿತುಪ್ಪವಾಗಿದ್ದು, ವರದಿ ಸಲ್ಲಿಸಬೇಕಾಗಿದೆ. ಅಕ್ರಮ ಮರಳುಗಾರಿಕೆ ನಡೆಸುವವರ ಹೆಸರು ಪತ್ತೆ ಆಗದಿದ್ದರೂ ಸದ್ಯ ಪತ್ತೆ ಆಗಿರುವ ವಾಹನ ಯಾರಿಗೆ ಸೇರಿದ್ದು, ಅಕ್ರಮ ಮರಳು ಎತ್ತಲು, ಸಾಗಾಟ ಮಾಡಲು ಬಳಕೆ ಮಾಡಿರುವ ಬಗ್ಗೆ ಲೋಕಾಗೆ ವರದಿ ಕೊಡಲೇಬೇಕಿದೆ. ಹೀಗಾಗಿ ಯಾರ ಯಾರ ಹೆಸರು ಮುಂಚೂಣಿಗೆ ಬರಲಿದೆ? ಅವರಗೆ ಬೆಂಬಲವಾಗಿ ಇದ್ದವರು ಯಾರು ಎನ್ನುವುದು ಬಹಿರಂಗವಾಗಲಿದೆ ಎಂದು ಹೇಳಲಾಗುತ್ತಿದೆ.