ಪ್ರಸಕ್ತ ಸಾಲಿನ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಸಮೀಕ್ಷೆಗೆ ಸಂಬAಽಸಿದAತೆ ರೈತರಿಂದ ಬಂದಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅರ್ಹ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಹರಿಸುವಂತೆ ಜಿಲ್ಲಾಽಕಾರಿ ಸಂಗಪ್ಪ ಅವರು ಅಽಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕೃಷಿ ಅಂಕಿ ಅಂಶ ಹಾಗೂ ಜನನ-ಮರಣಗಳ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳೆ ಸಮೀಕ್ಷೆಯಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬAದಿವೆ. ರೈತ ಬೆಳೆದ ಬೇರೆ ಬೇರೆ ಬೆಳೆಗಳಲ್ಲಿ ಜಮೀನಿನಲ್ಲಿ ಕಂಡ ಬೆಳೆ ಮಾತ್ರ ನಮೂದಾಗಿರುವುದು ಸೇರಿದಂತೆ ಇತರೆ ನ್ಯೂನ್ಯತೆಗಳ ಮೇಲೆ ರೈತರು ಆಕ್ಷೇಪಣೆಗಳನ್ನು ಸಲ್ಲಿಸಿರುತ್ತಾರೆ. ರೈತರ ಆಕ್ಷೇಪಣೆ ಸರಿಪಡಿಸಲು ಆಗಸ್ಟ ೩೧ ಕೊನೆ ದಿನವಾಗಿದ್ದು, ಅದರೊಳಗೆ ಸರಿಪಡಿಸುವಂತೆ ಸಂಬAಽಸಿದ ಅಽಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮುಂದಿನ ಹಂಗಾಮಿನ ಸಮೀಕ್ಷೆ ಕಾರ್ಯದಲ್ಲಿ ಯಾವುದೇ ರೀತಿಯ ಲೋಪದೋಷಗಳು ಸಂಭವಿಸದAತೆ ಎಚ್ಚರಿಕೆಯಿಂದ ಸಮೀಕ್ಷೆ ಕೈಗೊಳ್ಳಬೇಕು. ಬೆಳೆ ಅಂದಾಜು ಸಮೀಕ್ಷೆಯಡಿ ಪೂರ್ವ ಮುಂಗಾರು ಹಾಗೂ ತಡ ಮುಂಗಾರು ಋತುವಿಗೆ ಸಂಬAಽಸಿದ ಕಟಾವು ಪ್ರಯೋಗಗಳನ್ನು ಸಮರ್ಪಕವಾಗಿ ಆಯೋಜಿಸಿ, ನಿಖರವಾದ ಅಂಕಿ-ಅAಶಗಳನ್ನು ಸಂಗ್ರಹಿಸುವAತೆ ಅಽಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಅಂಕಿ-ಸAಖ್ಯಾಽಕಾರಿ ಗೌರಮ್ಮ ಸುಂಕದ ಮಾತನಾಡಿ, ಪೂರ್ವ ಮುಂಗಾರು ಮತ್ತು ತಡ ಮುಂಗಾರು ಋತುವಿಗೆ ಒಟ್ಟು ೨೮೪೪ ಬೆಳೆ ಕಟಾವು ಪ್ರಯೋಗಗಳನ್ನು ಯೋಜಿಸಲಾಗಿದೆ. ಅದರಲ್ಲಿ ಕಂದಾಯ ಇಲಾಖೆಗೆ ೧೦೫೪, ಕೃಷಿ ಇಲಾಖೆಗೆ ೨೩೦ ಪ್ರಯೋಗಗಳು, ಆರ್.ಡಿ.ಪಿ.ಆರ್‌ಗೆ ೧೦೮೦ ಪ್ರಯೋಗಗಳು ಹಾಗೂ ತೋಟಗಾರಿಕೆ ಇಲಾಖೆಗೆ ೪೮೦ ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಜನನ-ಮರಣ ನೋಂದಣಿ
ಜನನ ಮರಣ ನೋಂದಣಿ ಏಕರೂಪದ ವ್ಯವಸ್ಥೆಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಏಪ್ರೀಲ್ ೧, ೨೦೧೫ ರಿಂದ ಮತ್ತು ನಗರ ಪ್ರದೇಶಗಳಲ್ಲಿ ಜುಲೈ ೧, ೨೦೧೮ ರಿಂದ ಇ-ಜನ್ಮ ತಂತ್ರಾAಶ ವ್ಯವಸ್ಥೆ ಜಾರಿಯಲ್ಲಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲ ಜನನ-ಮರಣ ಉಪನೋಂದಣಾಽಕಾರಿಗಳು ೨೦೨೪ನೇ ವರ್ಷದ ಜನನ-ಮರಣದ ಮಾಹೆವಾರು ಕೋಡೀಕರಿಸಿ, ಸುರಕ್ಷಿತವಾಗಿ ಇಡಲು ಕೂಡಲೇ ವರ್ಗಾಯಿಸಲು ಸಂರಕ್ಷಣಾಽಕಾರಿಗಳಿಗೆ ಜಿಲ್ಲಾಽಕಾರಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ೬೬೬ ಗ್ರಾಮೀಣ ಭಾಗದಲ್ಲಿ ನೋಂದಣಿ ಘಟಕಗಳು ಮತ್ತು ೩೬ ನಗರ ನೋಂದಣಿ ಘಟಕಗಳು ಸೇರಿ ಒಟ್ಟು ೬೩೯ ನೋಂದಣಿ ಘಟಕಗಳಿವೆ. ಪ್ರಸಕ್ತ ೨೦೨೬ನೇ ಸಾಲಿನಲ್ಲಿ ಪ್ರಗತಿ ನೋಡಿದಾಗ ಜನನ-ಮರಣ ನೋಂದಣಿಗಳು ವಿಳಂಬವಾಗಿ ನೋಂದಣಿ ಆಗುತ್ತಿವೆ. ನಿಗದಿತ ಸಮಯದಲ್ಲಿ ನಿಯಮಾನುಸಾರ ನೋಂದಣಿಗೆ ಕ್ರಮಕೈಗೊಳ್ಳಲು ಅಽಕಾರಿಗಳಿಗೆ ತಿಳಿಸಿ, ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಸಂಭವಿಸುವ ಮರಣ ಘಟಕಗಳ ಬಗ್ಗೆ ನಮೂನೆಗಳಲ್ಲಿ ಕಡ್ಡಾಯವಾಗಿ ವರದಿ ನೀಡಲು ತಿಳಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ಮಹಿಳಾ ಮತ್ತು ಮಕ್ಕಳ ಅಭಿವೃಽ್ಧ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ. ಜಿಲ್ಲಾ ಅಗ್ರಣಿ ಬ್ಯಾಂಕ್‌ನ ವ್ಯವಸ್ಥಾಪಕ ರಾಜಕುಮಾರ ಹೂಗಾರ, ಜಿಲ್ಲಾ ಮಲೇರಿಯಾ ನಿಯಂತ್ರಣಾಽಕಾರಿ ಡಾ.ಕುಸುಮಾ ಮಾಗಿ ಸೇರಿದಂತೆ ಇತರರು ಇದ್ದರು.