ಮಹಿಳೆಯರಿಗೆ `ಮೀಸಲಾತಿ' ಶಕ್ತಿ

ಬಾಗಲಕೋಟೆ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ಸುಮೇದಾ ಮಾನೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಮಂಡಲ ಅಧ್ಯಕ್ಷೆ ಶಶಿಕಲಾ ಮಜ್ಜಗಿ, ಸುಜತಾ ಸಿಂಧೆ, ವೈಷ್ಣವಿ ಬಿ. ಇದ್ದರು.
ಬಾಗಲಕೋಟೆ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ಸುಮೇದಾ ಮಾನೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಮಂಡಲ ಅಧ್ಯಕ್ಷೆ ಶಶಿಕಲಾ ಮಜ್ಜಗಿ, ಸುಜತಾ ಸಿಂಧೆ, ವೈಷ್ಣವಿ ಬಿ. ಇದ್ದರು.
Published on
ಬಾಗಲಕೋಟೆ: ದೇಶದ ಮಹಿಳೆಯರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ನಾರೀ ಶಕ್ತಿ ವಂದನ ಅಽನಿಯಮ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ ಹಾಗೂ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ಪ್ರಧಾನಿಯವರು ಮಾಡುತ್ತಿದ್ದಾರೆ. ಈ ಕಾಯ್ದೆಯನ್ನು ದೇಶದ ಮಹಿಳೆಯರು ಬೆಂಬಲಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.೧೬ ಮತ್ತು ೧೭ ರಂದು ನಾರಿ ಶಕ್ತಿ ವಂದನ್ ಅಽನಿಯಮ ಕುರಿತು ಲೋಕಸಭೆಯಲ್ಲಿ ಚರ್ಚೆಯಾಗಿ ಮಸೂದೆಯು ಜಾರಿಯಾಗಲಿದೆ. ದೇಶದ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ರಾಜಕೀಯ ಕ್ಷೇತ್ರದಲ್ಲಿ ಸಿಗಲಿದೆ ಎಂದರು.
ದೇಶಕ್ಕೆ ಸ್ವಾತಂತ್ರ‍್ಯ ಬಂದ ಬಳಿಕ ಇದುವರೆಗೂ ಮಹಿಳಾ ಮೀಸಲಾತಿ ಜಾರಿ ಮಾಡಿಲ್ಲ. ಹಿಂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೀಸಲಾತಿ ಕುರಿತು ಕಾಯ್ದೆ ಚರ್ಚೆಗೆ ಬಂದಾಗ ಕಾಗದಗಳನ್ನು ವಿರೋಧ ಪಕ್ಷದವರು ಹರಿದು ಹಾಕಿದ್ದ ಉದಾಹರಣೆ ಇದೆ. ಕಾಯ್ದೆಗಳನ್ನು ಮಾಡುವ ಮೂಲಕ ನಿರ್ಣಾಯಕ ಸ್ಥಳದಲ್ಲಿ ಈಗ ಮಹಿಳೆಯರು ಸ್ಥಾನ ಅಲಂಕರಿಸಲು ಪ್ರಧಾನಿ ಮೋದಿಯವರು ಅವಕಾಶ ಮಾಡಿಕೊಡುವ ಮೂಲಕ ಎಸ್ಸಿ,ಎಸ್ಟಿ ಮತ್ತು ಇನ್ನೂಳಿದ ಒಳಪಂಗಡಗಳಿಗೆ ಅನುಕೂಲವಾಗುವಂತೆ ಶೇ.೩೩ರಷ್ಟು ಮೀಸಲಾತಿಗೆ ಅಂಗೀಕಾರ ದೊರೆಯಲಿದ್ದು, ಇದರಿಂದ ಮಹಿಳೆಯರು ಹರ್ಷವಾಗಲಿದ್ದಾರೆ ಎಂದು ತಿಳಿಸಿದರು.
ಮಹಿಳಾ ಸಶಕ್ತೀಕರಣಕ್ಕೆ ಮೋದಿಯವರು ಕೆಲಸ ಮಾಡುತ್ತಿದ್ದು, ಮಹಿಳೆಯರಿಗಾಗಿಯೇ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಪರಿಣಾಮ ಇವತ್ತು ಹೆಣ್ಣು ಭ್ರೂಣ ಹತ್ಯೆ, ತಾಯಂದಿರ ಮರಣ ಪ್ರಮಾಣ ಕಡಿಮೆಯಾಗಿವೆ. ಮಹಿಳೆಯರಿಗೆ ಅಽಕಾರ ನೀಡಿದರೆ ಶೈಕ್ಷಣಿಕ, ಆರೋಗ್ಯ, ನೈರ್ಮಲ್ಯದ ಪರ ಯೋಜನೆಗಳು ಅನುಷ್ಠಾನವಾಗಲಿವೆ ಎಂದರು.
ಚಂದ್ರಯಾನ ಯಶಸ್ವಿಯಾಗುವ ಸಂದರ್ಭದಲ್ಲಿ ಶೇ.೬೦ರಷ್ಟು ಮಹಿಳೆಯರು ಕೆಲಸ ಮಾಡಿದ್ದಾರೆ. ಸೈನಿಕರಾಗಿಯೂ ಕೂಡ ಮಹಿಳೆಯರು ಮುಂದೆ ಇದ್ದಾರೆ. ಎಲ್ಲಾ ರಂಗದಲ್ಲಿ ಮಹಿಳೆಯರು ಮುಂದೆ ಇರುವ ದೇಶದಲ್ಲಿ ಈಗ ಮೀಸಲಾತಿಯನ್ನು ರಾಜಕೀಯವಾಗಿ ಕಲ್ಪಿಸಿಕೊಡುವ ಮೂಲಕ ಮಹಿಳೆಯರಿಗೆ ರಾಜಕೀಯ ಬಲವನ್ನು ಕೂಡ ಕೇಂದ್ರ ಸರ್ಕಾರ ನೀಡುತ್ತಿದೆ ಎಂದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ಸುಮೇದಾ ಮಾನೆ ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿಯವರು ಮಹಿಳಾ ಮೀಸಲಾತಿಯನ್ನು ಜಾರಿಗೆ ತರುತ್ತಿರುವ ಹಿನ್ನಲೆಯಲ್ಲಿ ಏ.೧೮ ರಂದು ಬಾಗಲಕೋಟೆ ಜಿಲ್ಲೆಯ ಪ್ರತಿ ಮಂಡಲದಲ್ಲಿ ಮಹಿಳೆಯರಿಂದ ಸ್ಕೂಟಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಏ.೧೯ ರಂದು ಇಳಕಲ್‌ದಲ್ಲಿ ಮಹಿಳಾ ಸಮಾವೇಶ, ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಿಸ್ ಕಾಲ್ ನೀಡಿ ಬೆಂಬಲಿಸಿ:
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲ ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬಲು ಶೇ.೩೩ರಷ್ಟು ಮೀಸಲಾತಿಯನ್ನು ಜಾರಿಗೆ ತರುತ್ತಿದ್ದು ಮೊ: ೯೬೬೭೧೭೧೩೩೩೩ ಗೆ ಮಿಸ್ ಕಾಲ ಕೊಟ್ಟು ಕಾಯ್ದೆಯನ್ನು ಬೆಂಬಲಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಪದಾಽಕಾರಿಗಳು ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಮಂಡಲ ಅಧ್ಯಕ್ಷೆ ಶಶಿಕಲಾ ಮಜ್ಜಗಿ, ಸುಜತಾ ಸಿಂಧೆ, ವೈಷ್ಣವಿ ಬಿ. ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net