ರಾಹುಲ್ ಗಾಂಧಿ ನಾಪತ್ತೆ

ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಮುರುಗೇಶ ನಿರಾಣಿ ಚಿತ್ರದಲ್ಲಿ ಇದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆ ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಮುರುಗೇಶ ನಿರಾಣಿ ಚಿತ್ರದಲ್ಲಿ ಇದ್ದಾರೆ.
Published on
ಬಾಗಲಕೋಟೆ: ರಾಜ್ಯದಲ್ಲಿ ಅರ್ಧಮುರ್ಧ ಸರ್ಕಾರ ಇರುವುದಕ್ಕೆ ಯಾವುದೇ ಪ್ರಮುಖ ತೀರ್ಮಾನಗಳು ಆಗುತ್ತಿಲ್ಲ. ರಾಹುಲ್ ಗಾಂಧಿ ಅವರು ಯಾರಿಗೂ ಹೇಳದೇ ನಾಪತ್ತೆ ಆಗಿದ್ದರಿಂದ ರಾಜ್ಯ ಮಂತ್ರಿ ಮಂಡಲ ವಿಸ್ತರಣೆ ಆಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು. ರಾಜ್ಯದ ಬಹಳಷ್ಟು ಕಡೆಗೆ ತೀವ್ರ ಬರ, ಕುಡಿವ ನೀರಿನ ಸಮಸ್ಯೆ ಇದೆ. ಜಿಲ್ಲೆಗೊಬ್ಬರ ಮಂತ್ರಿ ಇಲ್ಲ. ಪ್ರಮುಖ ಜಿಲ್ಲೆಗಳಲ್ಲಿ ಮಂತ್ರಿಗಳೇ ಇಲ್ಲ. ಇದರಿಂದ ಜನರ ಭವಣೆಗಳನ್ನು ಕೇಳುವವರು ಇಲ್ಲ ಎಂದರು.
ಮೇವಿನ ಸಂಗ್ರಹಣೆ, ಕುಡಿವ ನೀರಿನ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಗೊತ್ತಿಲ್ಲ. ಬೇಜವಾಬ್ದಾರಿಯಿಂದ ಮಾತನಾಡುತ್ತ, ಬೇರೆ ಬೇರೆ ವಿಷಯಗಳನ್ನು ಡೈವರ್ಟ್ ಮಾಡುತ್ತಿರುವುದು ಕಂಡು ಬರುತ್ತಿದೆ. ಒಬ್ಬ ಹೇಳುತ್ತಾನೆ ಆರ್‌ಎಸ್‌ಎಸ್ ಬೈಠಕ್ ನಡೆದಿದೆ, ಗಲಿಭೆ ಆಗುತ್ತಿದೆ ಎನ್ನುತ್ತಾನೆ. ದೇಶದಲ್ಲಿ ನೀವು(ಕಾಂಗ್ರೆಸ್) ಇದ್ದಾಗ ಭಯೋತ್ಪಾದನೆ ಆಯಿತು. ನಕ್ಸಲಿಸಂನ್ನು ಸ್ವೀಕಾರ ಮಾಡಿದ್ದರು. ಪಶುಪತಿಯಿಂದ ತಿರುಪತಿ ವರೆಗೂ ರೆಡ್ ಕಾರ್ಡರ್ ಘೋಷಿಸಿದ್ದರು. ಇವತ್ತು ಮೋದಿ ಸರ್ಕಾರದ ಅವಽಯಲ್ಲಿ ಈ ದೇಶ ನಕ್ಸಲ್ ಮುಕ್ತವಾಗಿದೆ ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ಉತ್ತರಿಸಬೇಕಿಲ್ಲ :
ಆರ್‌ಎಸ್‌ಎಸ್ ನೋಂದಣಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳಿಗೆ ನಾನು ಉತ್ತರಿಸಲ್ಲ, ಸಂಘವೂ ಸಹ ಉತ್ತರಿಸಬೇಕಿಲ್ಲ. ಯಾರೂ ಉತ್ತರಿಸುವ ಅವಶ್ಯಕತೆ ಇಲ್ಲ ಎಂದು ನಾನು ಹೇಳಿದ್ದೇನೆ. ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತದೆ ಎಂದು ಅವರು ಮಾತನಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಆರ್‌ಎಸ್‌ಎಸ್ ಹಿರಿಯರು ಒಮ್ಮೆ ಮಾತನಾಡಿದ್ದಾರೆ. ಹೀಗಾಗಿ ಅದಕ್ಕೆ ನಾವು ಮತ್ತೆ ಮತ್ತೆ ಉತ್ತರ ಕೊಡಬೇಕಿಲ್ಲ. ಅವರು ಏನು ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ ಎಂದು ಸಚಿವ ಖರ್ಗೆಗೆ ತಿರುಗೇಟು ನೀಡಿದರು.
ರಾಹುಲ್ ಗಾಂಧಿಯ0ತೆ ಕ್ಷಮೆ ಕೇಳಬೇಕಾಗುತ್ತದೆ:
ಆರ್‌ಎಸ್‌ಎಸ್ ಬಗ್ಗೆ ಆಧಾರರಹಿತ ಆರೋಪ ಮಾಡಿದ್ದಕ್ಕೆ ರಾಹುಲ್ ಗಾಂಧಿ ಕೋರ್ಟ್ನಲ್ಲಿ ಕ್ಷಮೆ ಕೋರಿದ್ದಾರೆ. ಈಗ ಅವರಂತೆ ಸಂಘದ ಬಗ್ಗೆ ಕೆಲವರು ಹತ್ಯೆ ವಿಚಾರದಲ್ಲಿ ಹೋಲಿಕೆ ಮಾಡಿ ಆರೋಪ ಮಾಡಿದ್ದಕ್ಕೆ ಅವರು ಸಹ ರಾಹುಲ್ ಗಾಂಧಿಯ0ತೆ ಕೋರ್ಟ್ನಲ್ಲಿ ಕ್ಷಮೆ ಕೋರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸ್‌ಐಆರ್‌ಗೆ ಸರಿಯಾದ ಸೌಲಭ್ಯ ಒದಗಿಸಬೇಕು:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net