ಉತ್ತಮ ಆರೋಗ್ಯಕ್ಕೆ ದೈಹಿಕ ಚಟುವಟಿಕೆ ಅಗತ್ಯ

ವಿಶ್ವ ಬೈಸಿಕಲ್ ದಿನದ ಹಿನ್ನೆಲೆಯಲ್ಲಿ ಈಚೆಗೆ ಬಾಗಲಕೋಟೆಯ ಎಸ್.ಎನ್.ಮೆಡಿಕಲ್ ಕಾಲೇಜಿನ ವತಿಯಿಂದ ಸೈಕಲ್ ಜಾಥಾ ನಡೆಯಿತು.
ವಿಶ್ವ ಬೈಸಿಕಲ್ ದಿನದ ಹಿನ್ನೆಲೆಯಲ್ಲಿ ಈಚೆಗೆ ಬಾಗಲಕೋಟೆಯ ಎಸ್.ಎನ್.ಮೆಡಿಕಲ್ ಕಾಲೇಜಿನ ವತಿಯಿಂದ ಸೈಕಲ್ ಜಾಥಾ ನಡೆಯಿತು.
Published on
ಬಾಗಲಕೋಟೆ: ಆರೋಗ್ಯಕರ ಜೀವನ ಇಂದಿನ ಬಹುಮುಖ್ಯ ಅಗತ್ಯವಾಗಿದೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದಾಗಿ ಅನೇಕ ಪ್ರಕಾರದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಈ ದಿಸೆಯಲ್ಲಿ ನಾಗರಿಕರು ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನÀ ಉಪಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ ಹೇಳಿದರು.
ವಿಶ್ವ ಬೈಸಿಕಲ್ ದಿನದ ಅಂಗವಾಗಿ ಈಚೆಗೆ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯರಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಇದರಿಂದ ಅನೇಕ ಬಗೆಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಕ್ರೀಡೆ, ವ್ಯಾಯಾಮ, ನಡಿಗೆ ಇಂತಹ ಚಟುವಟಿಕೆಗಳಿಂದ ಮನುಷ್ಯರು ದೂರಾಗುತ್ತಿದ್ದಾರೆ. ಪರಿಣಾಮವಾಗಿ ದೇಹ ರೋಗಗಳ ಗೂಡಾಗುತ್ತಿದೆ. ಆದ್ದರಿಂದ ಶರೀರದ ಸ್ವಾಸ್ತ್ಯಕ್ಕಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
೨೦ ಕಿಲೋ ಮೀಟರ್‌ವರೆಗೆ ಸಾಗಿದ ಸೈಕಲ್ ಜಾಥಾದಲ್ಲಿ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಸುಮಾರು ೪೦ ವೈದ್ಯರು ಭಾಗವಹಿಸಿದ್ದರು. ಸೈಕಲ್ ಸವಾರಿಯಿಂದ (ಸೈಕ್ಲಿಂಗ್) ಆರೋಗ್ಯ ಬಲವರ್ಧನೆ, ಮಾಲಿನ್ಯಮುಕ್ತ ಸಾರಿಗೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಜಾಥಾ ಉದ್ಧೇಶವಾಗಿತ್ತು.
ಡಾ.ಅಶೋಕ ಡೋರ್ಲೆ, ಡಾ.ಅಶೋಕ ಬಡಕಲಿ, ಡಾ.ಬ್ರಿಜೇಶ ಪಾಟೀಲ, ಡಾ.ಶ್ರೀನಿವಾಸ ಪಾಟೀಲ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net