ರೈತರಿಗೆ ಹೊಸ ವರ್ಷಕ್ಕೆ ಆಘಾತ...!

ಕಲಾದಗಿ ಭಾಗದಲ್ಲಿ ದಾಳಿಂಬೆಗೆ ಆಲಿಕಲ್ಲುಗಳೊಂದಿಗೆ ನಷ್ಟಕ್ಕೊಳಗಾದ ರೈತರು
ಕಲಾದಗಿ ಭಾಗದಲ್ಲಿ ದಾಳಿಂಬೆಗೆ ಆಲಿಕಲ್ಲುಗಳೊಂದಿಗೆ ನಷ್ಟಕ್ಕೊಳಗಾದ ರೈತರು
Published on
ಬಾಗಲಕೋಟೆ: ಮೂರು ಎಕರೆಯಲ್ಲಿದ್ದ ದಾಳಿಂಬೆ ಇನ್ನೊಂದು ತಿಂಗಳಲ್ಲಿ ಮಾರುಕಟ್ಟೆಗೆ ಹೋಗೋದಿತ್ತು. ಪ್ರತಿಗಿಡಕ್ಕೆ ಏನಿಲ್ಲವೆಂದರೂ ೩೦೦-೩೫೦ ಕಾಯಿಗಳಿದ್ದವು ಅವೆಲ್ಲವೂ ಈಗ ಬಿದ್ದ ಆಲಿಕಲ್ಲಿನಿಂದ ಹಾಳಾಗಿವೆ. ಇದರಿಂದ ಏನಿಲ್ಲವೆಂದರೂ ೭೦-೮೦ ಲಕ್ಷ ನಷ್ಟ ಆಗಿದೆ. ಲಕ್ಷಗಟ್ಟಲೆ ಸಾಲಾ ಸೂಲಾ ಮಾಡಿ ಬೆಳೆದ ಫಸಲು ಮಣ್ಣಪಾಲಾತು...!!
ಹೀಗೇ ನೋವನ್ನು ತೋಡಿಕೊಂಡವರು ಕಲಾದಗಿ ಗ್ರಾಮದ ರೈತರಾದ ರಾಮು ರೇವಣಕರ. ಇದು ಅವರೊಬ್ಬರದೇ ವ್ಯಥೆ ಅಲ್ಲ. ಕಳೆದ ಬುಧವಾರ ರಾತ್ರಿ ಸುರಿದ ಆಲಿಕಲ್ಲು ಮಳೆ ಅನೇಕ ರೈತರನ್ನು ಹೀಗೆ ನೋವಿಗೆ ದೂಡಿದೆ, ಹಾಳಾದ ಫಸಲಿನ ನಡುವೆ ನಿಂತು ಕಣ್ಣೀರಾಕುವಂತೆ ಮಾಡಿದೆ. ಅವರನ್ನೆಲ್ಲಾ ಹೊಸ ವರ್ಷ ಯುಗಾದಿ ಬರೀ ಕಹಿಯಾಗುವಂತೆ ಮಾಡಿದ್ದು ವಿಪರ್ಯಾಸ.
ಅದು ಬರೀ ಮಳೆ ಆಗಿರಲಿಲ್ಲ ; ಬುಧವಾರ ರಾತ್ರಿ ಬಾದಾಮಿ ತಾಲೂಕಿನ ಕಡಿ ಅಂಚಿನ ಅನವಾಲ,ಯಂಡಿಗೇರಿಯಿAದ ಹಿಡಿದು ಗ್ರಾಮವೂ ಸೇರಿದಂತೆ ಗ್ರಾಮ ವ್ಯಾಪ್ತಿಯ ಕಳಸಕೊಪ್ಪ, ಚಿಕ್ಕಶೆಲ್ಲಿಕೇರಿ, ಹಿರೇಶೆಲ್ಲಿಕೇರಿ ಭಾಗಗಳಲ್ಲಿ ಕೆಲವೆ ಗಂಟೆ ಸುರಿದ ಮಳೆ ಬರೀ ಮಳೆಯಾಗಿರಲಿಲ್ಲ. ಅದು ಆಲಿಕಲ್ಲು ಮಳೆಯಾಗಿ ಬಿದ್ದಿದ್ದು ಈ ಭಾಗದ ನೂರಾರು ಎಕರೆ ಪ್ರದೇಶಲ್ಲಿದ್ದ ದಾಳಿಂಬೆ, ಪಪ್ಪಾಯಿ, ಕಲ್ಲಂಗಡಿ, ಪೇರು ಮುಂತಾದ ತೋಟಗಾರಿಕೆ ಬೆಳೆಗಳನ್ನು, ಕಬ್ಬು, ಗೋದಿ, ಸದಕ, ಗೋವಿನ ಜೋಳ ಮುಂತಾದ ಬೆಳೆಗಳನ್ನು ಸಾಕಷ್ಟು ಹಾನಿ ಮಾಡುವುದರ ಮೂಲಕ ಕಷ್ಟಪಟ್ಟು ಬೆಳೆದಿದ್ದ ಬೆಳೆ ಮಣ್ಣುಪಾಲಾಗುವಂತೆ ಮಾಡಿದೆ.
ಹೀಗೆ ಹಾಳಾದ ದಾಳಿಂಬೆ, ಗೋದಿ, ಪಪ್ಪಾಯಿ ಮುಂತಾದಫಸಲಿನಲ್ಲಿ ಬಹುತೇಕರದ್ದು ಇನ್ನೊಂದು ವಾರದಲ್ಲಿ ಗಿಡದ ತುಂಬ ಮೈತುಂಬಿಕೊAಡAತಿದ್ದ ಬೆಳೆ ಮಾರುಕಟ್ಟೆಗೆ ಹೋಗುವುದಿತ್ತು. ಅಷ್ಟರಲ್ಲಿ ಬಿದ್ದ ಆಲಿಕಲ್ಲು ಮಳೆ ಇವರೆನ್ನೆಲ್ಲಾ ಮತ್ತೆ ಮೇಲೇಳದಂತೆ ಮರ್ಮಾಘಾತವನ್ನುಂಟು ಮಾಡಿದೆ.
ಮತ್ತೆ ಆಲಿಕಲ್ಲು ಮಳೆಗೆ ಹಾನಿ: ಗುರುವಾರ ಸಂಜೆ ಸುರಿದ ಆಲಿಕಲ್ಲು ಮಳೆಗೆ ಗೋವಿಂದಕೊಪ್ಪ, ಹಿರೇಸಂಶಿ, ಚಿಕ್ಕಸಂಶಿ,ದೇವನಾಳ, ಸೊಕನಾದಗಿ, ತುಳಸಿಗೇರಿ, ಛಬ್ಬಿ ಮುಂತಾದ ಗ್ರಾಮಗಳಲ್ಲಿದ್ದ ದಾಳಿಂಬೆ, ಪಪ್ಪಾಯಿ, ಕಲ್ಲಂಗಡಿ, ಮಾವಿನ ಕಾಯಿ, ಗೋಽ, ಕಬ್ಬು ಮುಂತಾದ ಸಮೃದ್ಧವಾಗಿ ಬಂದಿದ್ದ ಫಸಲು ಸಂಪೂರ್ಣ ಹಾಳಾಗಿದ್ದು, ಈ ಎಲ್ಲಾ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಆಡುಗಳ ಸಾವು: ಬುಧವಾರ ಸುರಿದ ಆಲಿಕಲ್ಲು ಮಳೆಗೆ ಯಂಡಿಗೇರಿಯಹೊಲವೊAದರಲ್ಲಿದ್ದ ಹುಸೇನಸಾಬ ಬಾಂಗಾದ ಎಂಬುವವರಿಗೆ ಸೇರಿದ ೨೫ ಕುರಿಗಳು, ಚಿಕ್ಕಶೆಲ್ಲಿಕೇರಿಯ ಹೊಲವೊಂದರಲ್ಲಿದ್ದ ದುಂಡಪ್ಪ ನಾಯ್ಕರ ಎಂಬುವವರಿಗೆ ಸೇರಿದ ೮ ಕುರಿಗಳು ಸಾವನ್ನಪ್ಪಿವೆ. ಅಲ್ಲಲ್ಲಿ ತಗಡಿನ ಸೆಡ್ಡುಗಳು ಬಿದ್ದಿರುವ ಬಗ್ಗೆಯೂ ವರದಿಯಾಗಿದೆ.
ತತಕ್ಷಣ ಕ್ರಮಕ್ಕೆ, ಪರಿಶೀಲನೆಗೆ ಶಾಸಕ ಜೆಟಿಪಿ ಸೂಚನೆ
ಬುಧವಾರ ಬೆಳಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ದೂರವಾಣಿ ಮೂಲಕ ಜಿಲ್ಲಾಽಕಾರಿ ಸಂಗಪ್ಪ ಅವರೊಂದಿಗೆ ಹಾಗೂ ತೋಟಗಾರಿಕೆ ಅಽಕಾರಿಗಳೊಂದಿಗೆ ಮಾತನಾಡಿದ ಶಾಸಕ ಜೆ.ಟಿ.ಪಾಟೀಲ ಅವರು ತತಕ್ಷಣ ಕ್ರಮಕ್ಕೆ ಮುಂದಾಗುವAತೆ ಸೂಚನೆ ನೀಡಿದ್ದಾರೆ. ಹಾನಿಗೊಳಗಾದ ರೈತರಿಗೆ ಅಗತ್ಯ ಪರಿಹಾರಧನವನ್ನು ಕೊಡಿಸುವುದಾಗಿ ಭರವಸೆ ನೀಡಿದ ಅವರು, ಅರ್ಧಷ್ಟು ಬೇಗ ಈ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಶಾಸಕ ಪಾಟೀಲ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net