ನದಿ ಅವಲಂಬಿತ ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಕುಡಿವ ನೀರು ಜುಲೈ ೧೫ ರವರೆಗೆ ಮಾತ್ರ ಲಭ್ಯ ಇದ್ದು, ಬಳಿಕ ಕುಡಿವ ನೀರಿಗಾಗಿ ಸಾಕಷ್ಟು ಹಾಹಾಕಾರ ಉಂಟಾಗಲಿದೆ ಎಂದು ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ನಡೆಸಿತ್ತು. ಇದಕ್ಕೆ ಪರಿಹಾರ ಎಂದರೆ ವರುಣ ಕೃಪೆ ಆಗಿತ್ತು. ಇದೀಗ ಸಂಕಷ್ಟದ ಸಮಯದಲ್ಲೆ ಮಹಾರಾಷ್ಟçದ ಪಶ್ಚಮ ಘಟ್ಟದಲ್ಲಿ ಮತ್ತು ಬೆಳಗಾವಿಯಲ್ಲಿ ವರುಣಾರ್ಭ ಮುಂದುವರೆದಿದ್ದು, ಜಿಲ್ಲೆಯಲ್ಲಿ ಆವರಿಸಿದ್ದ ಆತಂಕದ ಕಾರ್ಮೋಡ ಸರಿಯುವಂತಾಗಿದೆ.