ವಿಕಸಿತ ಭಾರತದೆಡೆಗೆ ಒಂದಾಗಿ ಮುನ್ನಡೆಯೋಣ

ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಅಂದಾಜು ೫೦೦ ಮೀಟರ್ ಉದ್ದದ ತಿರಂಗಾ ಧ್ವಜ ಹಿಡಿದು ಸಾಗಿದ ವಿದ್ಯಾರ್ಥಿಗಳು ಗಮನ ಸೆಳೆದರು.
ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಅಂದಾಜು ೫೦೦ ಮೀಟರ್ ಉದ್ದದ ತಿರಂಗಾ ಧ್ವಜ ಹಿಡಿದು ಸಾಗಿದ ವಿದ್ಯಾರ್ಥಿಗಳು ಗಮನ ಸೆಳೆದರು.
Published on

ತ್ರಿವರ್ಣ ಧ್ವಜ ರಾಷ್ಟç ಗೌರವದ ಸಂಕೇತ, ಪ್ರತಿಯೊಬ್ಬರ ಭಾರತೀಯನಲ್ಲೂ ಐಕ್ಯತೆ, ಹೆಮ್ಮೆ ಹಾಗೂ ದೇಶಭಕ್ತಿಯ ಭಾವನೆ ಮೂಡಿಸುತ್ತದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ `ಹರ್ ಘರ್ ತಿರಂಗಾ' ಅಭಿಯಾನದ ಅಂಗವಾಗಿ ಭವ್ಯ ಬೃಹತ್ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಯುವಜನತೆಯಲ್ಲಿ ದೇಶಭಕ್ತಿ ಹಾಗೂ ರಾಷ್ಟಾçಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ `ರಾಷ್ಟçಧ್ವಜವನ್ನು ಎತ್ತಿ ಹಿಡಿಯೋಣ, ವಿಕಸಿತ ಭಾರತದೆಡೆಗೆ ಒಂದಾಗಿ ಮುನ್ನಡೆಯೋಣ' ಎಂಬ ಸಂಕಲ್ಪದೊAದಿಗೆ ತಿರಂಗಾ ಯಾತ್ರೆ ಕಾರ್ಯಕ್ರಮಗಳು ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕರೆಯಂತೆ ಪ್ರತಿಯೊಂದು ಮನೆಯ ಮೇಲೂ ನಮ್ಮ ರಾಷ್ಟç ಧ್ವಜ ಹಾರಾಡಲಿ ತ್ರಿವರ್ಣ ಧ್ವಜ ನಮ್ಮ ಹೆಮ್ಮೆ, ಪ್ರಗತಿ ಮತ್ತು ಏಕತೆಯ ಸಂಕೇತ. ಎಲ್ಲರೂ ಅಭಿಯಾನದಲ್ಲಿ ಭಾಗವಹಿಸಿರಿ ಎಂದರು.
೫೦೦ ಮೀಟರ್ ಉದ್ದದ ತಿರಂಗಾ ಆಕರ್ಷಣೆ :
ಯಾತ್ರೆಯಲ್ಲಿ ಸುಮಾರು ೫೦೦ ಮೀಟರ್ ಉದ್ದದ ಬೃಹತ್ ತಿರಂಗಾ ಧ್ವಜ ಪ್ರಮುಖ ಆಕರ್ಷಣೆಯಾಗಿ, ಸಾರ್ವಜನಿಕರ ಗಮನ ಸೆಳೆಯಿತು. ರಾಷ್ಟçಧ್ವಜವನ್ನು ಎತ್ತಿ ಹಿಡಿದು ದೇಶಭಕ್ತಿ ಘೋಷಣೆಗಳೊಂದಿಗೆ ಸಾಗಿದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಯಾತ್ರೆಗೆ ಮೆರುಗು ತಂದರು.
ತಿರAಗಾ ಯಾತ್ರೆ ಬಿವಿವಿ ಸಂಘದ ಬೀಳೂರು ಗುರುಬಸವ ಅಜ್ಜನ ಗುಡಿಯಿಂದ ಆರಂಭಗೊAಡು ಬಸವೇಶ್ವರ ವೃತ್ತ, ಮಹಾತ್ಮಾ ಗಾಂಽ ರಸ್ತೆ, ಕಿಲ್ಲಾ ಅಂಭಾಭವಾನಿ ದೇವಸ್ಥಾನ, ಹಳೇ ಪೋಸ್ಟ್ ಮಾರ್ಗವಾಗಿ ಸರದಾರ ವಲ್ಲಭಭಾಯಿ ಪಟೇಲ್ ಚೌಕ್‌ನಲ್ಲಿ ಸಮಾರೋಪಗೊಂಡಿತು. ನಂತರ ಬಹಿರಂಗ ಸಭೆ ಜರುಗಿತು.
ಮಾಜಿ ಸೈನಿಕರಾದ ಕ್ಯಾಪ್ಟನ್ ಅರ್ಜುನ ಕೋರಿ, ಸುಬೇದಾರ ಮೇಜರ್ ಗದಿಗೆಪ್ಪ ಅರಕೇರಿ, ಸುಬೇಧಾರ್ ಶಂಕ್ರಪ್ಪ ಬಾರಕೇರ, ಹವಾಲ್ದಾರ ವಿನೋದ ಮುಧೋಳಿ, ಎಸ್ಟಿ ಮೋರ್ಚಾ ರಾಜ್ಯ ಪ್ರದಾನ ಕಾರ್ಯದರ್ಶಿ ರಾಜು ನಾಯ್ಕರ, ಬಿಜೆಪಿ ಮುಖಂಡರಾದ ಬಸರಾಜ ಹುನಗುಂದ, ಸುರೇಶ ಕೋಣ್ಣುರ, ನಂದು ಗಾಯಕವಾಡ, ಬಸವರಾಜ ಯಂಕAಚಿ, ಕುಮಾರಸ್ವಾಮಿ ಹಿರೇಮಠ, ಸುರೇಶ ಮಜ್ಜಗಿ, ಭಾಗೀರಥಿ ಪಾಟೀಲ, ಜಯಶ್ರೀ ಭದ್ರಶೆಟ್ಟಿ, ಶಿವಲೀಲಾ ಸಂಬನ್ನವರ, ಸುಜಾತಾ ಶಿಂಧೆ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net