ಜಾತ್ರೆಯ ಅಂಗವಾಗಿ ಕಣವಿ ವೀರಭದ್ರೇಶ್ವರನಿಗೆ ವಿಶೇಷ ಅಲಂಕಾರ, ಪೂಜೆ, ಆರತಿ, ಅಭಿಷೇಕ ಮತ್ತು ಪಾಲಕಿ ಸೇವೆ ಜರುಗಿತು. ಯುಗಾದಿ ಪಾಡ್ಯದ ದಿನವಾದ ಗುರುವಾರ ಸಹಸ್ರಾರು ಭಕ್ತರ ಜಯಘೋಷಣೆಗಳ ನಡುವೆ ವೀರಭದ್ರೇಶ್ವರ ರಥೋತ್ಸವ ಸಂಭ್ರಮದಿAದ ನಡೆಯಿತು. ದೇವಸ್ಥಾನದಿಂದ ಆರಂಭವಾದ ರಥೋತ್ಸವ ಮೆರವಣಿಗೆ ಬನ್ನಿ ಗಿಡದ ವರೆಗೆ ಸಾಗಿತು. ಈ ವೇಳೆ ನೆರೆದ ಭಕ್ತರು ಉತ್ತತ್ತಿ, ಬಾಳೆಹಣ್ಣು ರಥಕ್ಕೆ ಅರ್ಪಿಸಿ ಇಷ್ಠಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.