ಸಿಎಂ ಸ್ಥಾನದ ಕಗ್ಗಂಟಿನ ಬಗ್ಗೆ ಪ್ರಶ್ನಿಸಿದಾಗ, ಅದನ್ನೆಲ್ಲ ನಾವು ಹೇಳುವುದಿಲ್ಲ. ಅದು ಯಾವಾಗ ಎಂದು ಅವರೇ ಹೇಳಬೇಕು. ಅದು ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸರಿ ಆಗಬೇಕು ಎನ್ನುವುದಷ್ಟೆ ನಮ್ಮ ಮನವಿ. ಹೇಗೆ ಮಾಡುತ್ತಾರೋ, ಬಿಡುತ್ತಾರೋ ದೆಹಲಿ ಅವರಿಗೆ ಬಿಟ್ಟಿದ್ದು. ನಾನು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಯಾವುದಕ್ಕೂ ಆಕಾಂಕ್ಷಿ ಅಲ್ಲ ಎಂದು ಪದೇ ಪದೇ ಹೇಳಿದ್ದೇನೆ. ಅದನ್ನೆ ಮತ್ತೆ ಮತ್ತೆ ಹೇಳುವ ಅಗತ್ಯ ಇಲ್ಲ ಎಂದರು.