ಪಾರದರ್ಶಕ ಚುನಾವಣೆ ನಡೆಸಲು ಸೂಚನೆ

ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ನೋಡಲ್ ಅಽಕಾರಿಗಳೊಂದಿಗೆ ಸಭೆ ನಡೆಸಿ ಸಾಮಾನ್ಯ ವೀಕ್ಷಕ ಪಾರುಲ್ ಪಟವಾರಿ ಮಾತನಾಡಿದರು. ಜಿಲ್ಲಾಽಕಾರಿ ಸಂಗಪ್ಪ ಎಂ.,  ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಇದ್ದರು.
ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ನೋಡಲ್ ಅಽಕಾರಿಗಳೊಂದಿಗೆ ಸಭೆ ನಡೆಸಿ ಸಾಮಾನ್ಯ ವೀಕ್ಷಕ ಪಾರುಲ್ ಪಟವಾರಿ ಮಾತನಾಡಿದರು. ಜಿಲ್ಲಾಽಕಾರಿ ಸಂಗಪ್ಪ ಎಂ., ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಇದ್ದರು.
Published on
ಬಾಗಲಕೋಟೆ: ನೋಡಲ್ ಅಽಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸಮಪಕವಾಗಿ ನಿರ್ವಹಿಸಿ, ಚುನಾವಣೆಯನ್ನು ಪಾರದರ್ಶಕ ಹಾಗೂ ನಿಸ್ಪಕ್ಷಪಾತವಾಗಿ ನಡೆಸುವಂತೆ ಸಾಮಾನ್ಯ ವೀಕ್ಷಕ ಪಾರುಲ್ ಪಟವಾರಿ ಸೂಚನೆ ನೀಡಿದರು.
ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ನೋಡಲ್ ಅಽಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ವಿವಿಧ ನೋಡಲ್ ಅಽಕಾರಿಗಳ ಕಾರ್ಯ, ಮಾದರಿ ನೀತಿ ಸಂಹಿತೆ ಜಾರಿಗೆ ಸಂಬAಽಸಿದ ಕ್ರಮಗಳು, ಮತದಾರರ ಸೌಲಭ್ಯಗಳು ಹಾಗೂ ಮತಟ್ಟೆಗಳಲ್ಲಿ ಕೈಗೊಳ್ಳಬೇಕಾದ ಸಿದ್ದತೆಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಿದರು ಎಂದರು.
ಈವರೆಗೆ ಕೈಗೊಂಡ ಚುನಾವಣಾ ಪೂರ್ವ ಸಿದ್ದತೆ, ಮಾದರಿ ನೀತಿ ಸಂಹಿತೆ, ಕಾನೂನು ಸುವ್ಯಸ್ಥೆ, ಮತಯಂತ್ರಗಳ ಪೂರ್ವಸಿದ್ದತೆ, ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆ ಸಿಬ್ಬಂದಿ ನಿಯೋಜನೆ, ಜಾಗೃತ ದಳದ ತಂಡಗಳ ನಿರ್ವಹಣೆ ಕುರಿತಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಜಿಲ್ಲೆಯಲ್ಲಿ ನೀತಿ ಸಂಹಿತೆ ಪಾಲನೆ ಮಾಡುವದರ ಜೊತೆಗೆ ಅಽಕಾರಿಗಳು ಪಕ್ಷಾತೀತವಾಗಿ ಹಾಗೂ ಯಾರಿಗೂ ಸಂಶಯ ಬಾರದಂತೆ ಪ್ರಾಮಾಣಿಕವಾಗಿ ಕಾರ್ಯ ಮಾಡಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಚುನಾವಣಾಽಕಾರಿ ಹಾಗೂ ತಮ್ಮನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಎಂದರು.
ಜಿಲ್ಲೆಯಲ್ಲಿರುವ ಅಬಕಾರಿ ಡಿಸ್ಟಿಲರಿಗಳ ಮೇಲೆ ಪ್ರತಿದಿನ ಉತ್ಪನ್ನಗಳ ಹಾಗೂ ಹೊರ ಸಾಗಾಟದ ಮೇಲೆ ತೀವ್ರ ನಿಗಾವಹಿಸಬೇಕು. ಬೇರೆ ಜಿಲ್ಲೆಗಳ ಬಾರ್ಡರಗಳಲ್ಲಿ ಅಬಕಾರಿ ಚೆಕ್‌ಪೋಸ್ಟಗಳನ್ನು ಸಹ ಹಾಕಬೇಕು. ಕಾಸಿಗಾಗಿ ಸುದ್ದಿ, ಪೇಯಡ್ ನ್ಯೂಸ್, ಸೋಸಿಯಲ್ ಮೇಡಿಯಾ ಹಾಗೂ ಜಾಹೀರಾತುಗಳ ಮೇಲೆ ನಿಗಾವಹಿಸಿ, ವೆಚ್ಚ ವೀಕ್ಷಕರ ಗಮನಕ್ಕೆ ತರುವಂತೆ ಸಾಮಾನ್ಯ ವೀಕ್ಷಕರಾದ ಪಾರುಲ್ ಪಟವಾರಿ ತಿಳಿಸಿದರು. ಕೇಬಲ್ ಟಿವಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳ ಬಗ್ಗೆ ತೀವ್ರ ನಿಗಾವಹಿಸಂತೆ ಎಂಸಿಎAಸಿ ಸಮಿತಿಗೆ ತಿಳಿಸಿದರು.
ಉಪ ಚುನಾವಣೆಗೆ ಸಂಬAಽಸಿದ ೩೧೯ ಮತಗಟ್ಟೆ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಚುನಾವಣಾ ಅಕ್ರಮ ತಡೆಗೆ ೨೪ ಚೆಕ್ ಪೋಸ್ಟಗಳನ್ನು ಹಾಗೂ ೭೨ ಸ್ಟ್ಯಾಟಿಕ್ ಸರ್ವೆಲನ್ಸ್ ತಂಡಗಳನ್ನು ರಚಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸದAತೆ ಎಲ್ಲ ರಾಜಕೀಯ ಪಕ್ಷಗಳಿಗೆ ಚುನಾವಣಾ ನೀತಿ ಸಂಹಿತೆ ಮಾಹಿತಿಯನ್ನು ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಽಕಾರಿ ಸಂಗಪ್ಪ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಽಕಾರಿ ಅಶೋಕ ತೇಲಿ ಸೇರಿದಂತೆ ಚುನಾವಣಾ ಎಲ್ಲ ನೋಡಲ್ ಅಽಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net