ಬಾಗಲಕೋಟೆ ಬಿವಿವಿ ಸಂಘದ ಫಿಜಿಯೋಥೆರಪಿ ಕಾಲೇಜಿನಲ್ಲಿ ನಡೆದ ಎರಡು ದಿನಗಳ ಕಾರ್ಯಾಗಾರವನ್ನು ಎಸ್.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ ಉದ್ಘಾಟಿಸಿದರು. ಡಾ.ಸೈಯದ್ ರಿಝ್ವಿ, ಡಾ.ಸಿ.ಎಸ್.ಹಿರೇಮಠ, ಡಾ.ಸುಚಿತ್ರಾ ವನಕಿ, ಡಾ.ಶ್ರದ್ಧಾ ಮತ್ತಿತರರು ಇದ್ದರು.
ಬಾಗಲಕೋಟೆ: ಫಿಜಿಯೋಥೆರಪಿ ಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳಾಗುತ್ತಿವೆ. ಕೆ-ಟೇಪಿಂಗ್ ಚಿಕಿತ್ಸೆ ಎನ್ನುವುದು ಫಿಜಿಯೋಥೆರಪಿ ಚಿಕಿತ್ಸೆಯಾಗಿದ್ದು ನೋವು ನಿವಾರಣೆಗೆ ಇದು ಅಗತ್ಯದ ಚಿಕಿತ್ಸೆಯಾಗಿದೆ ಎಂದು ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ ತಿಳಿಸಿದರು.
ನಗರದ ಬಿವಿವಿ ಸಂಘದ ಫಿಜಿಯೋಥೆರಪಿ ಕಾಲೇಜಿನಲ್ಲಿ ಎರಡು ದಿನ ಹಮ್ಮಿಕೊಂಡಿರುವ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಫಿಜಿಯೋಥೆರಪಿ ವೈದ್ಯರ ಬೇಡಿಕೆ ಹೆಚ್ಚುತ್ತಿದೆ. ಉತ್ತರ ಕರ್ನಾಟಕದ ಈ ಭಾಗದಲ್ಲಿ ಫಿಜಿಯೋಥೆರಪಿ ವೈದ್ಯರ ಕೊರತೆಯನ್ನು ನಿವಾರಿಸಲು ಬಿವಿವಿ ಸಂಘದಿAದ ಪ್ರಥಮವಾಗಿ ಫಿಜಿಯೋಥೆರಪಿ ಕಾಲೇಜನ್ನು ಆರಂಭಿಸಲಾಗಿದೆ ಎಂದರು.
ಈ ಕಾಲೇಜಿನಲ್ಲಿ ಬಿಪಿಟಿ ಮತ್ತು ಎಂಪಿಟಿ (ಸ್ನಾತಕೋತ್ತರ) ಕೋರ್ಸುಗಳ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಡಾ.ಸೈಯದ್ ರಿಝ್ವಿ ಅವರು, ನೋವು ನಿವಾರಣೆ, ಕ್ರೀಡಾ ಗಾಯಗಳ ಚಿಕಿತ್ಸೆ ಮತ್ತು ಸ್ನಾಯುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಕೆ-ಟೇಪಿಂಗ್ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ವಿವರಿಸಿದರು.
ಕಾರ್ಯಾಗಾರದಲ್ಲಿ ಬಿಪಿಟಿ ಮತ್ತು ಎಂಪಿಟಿ ಕೋರ್ಸಿನ ೬೦ ವಿದ್ಯಾರ್ಥಿಗಳು ಶಿಭಿರಾರ್ಥಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಕೆ-ಟೇಪಿಂಗ್ ಚಿಕಿತ್ಸಾ ವಿಧಾನದ ಪ್ರಾತ್ಯಕ್ಷಿಕೆ ಮೂಲಕ ತರಬೇತಿಯನ್ನು ನೀಡಲಾಯಿತು.
ಮೆಡಿಕಲ್ ಕಾಲೇಜ್ ಉಪಪ್ರಾಚಾರ್ಯ ಡಾ.ಸಿ.ಎಸ್.ಹಿರೇಮಠ, ಫಿಜಿಯೋಥೆರಪಿ ಕಾಲೇಜಿನ ಬೋಧಕ ವೈದ್ಯರಾದ ಡಾ.ಸುಚಿತ್ರಾ ವನಕಿ, ಡಾ.ಮಹಾಂತೇಶ ಬಿರಡಿ, ಡಾ.ಶ್ರದ್ಧಾ ಮತ್ತಿತರರು ಇದ್ದರು.