ಬಣಜಿಗ ಸಮಾಜವನ್ನು ೨ಎ ಮೀಸಲಾತಿಗೆ ಸೇರಿಸಿ

ಬಣಜಿಗ ಸಮಾಜಕ್ಕೆ ಶಿಕ್ಷಣ ಹಾಗೂ ಉದ್ಯೋಗ ಈ ಎರಡೂ ಮೀಸಲಾತಿಗಾಗಿ ಪ್ರವರ್ಗ ೨ ಎ ಗೆ ಸೇರಿಸುವಂತೆ ಆಗ್ರಹಿಸಿ ಮಂಗಳವಾರ ಬಾಗಲಕೋಟೆಯಲ್ಲಿ ತಾಲೂಕು ಬಣಜಿಗ ಸಮಾಜದ ವತಿಯಿಂದ ಜಿಲ್ಲಾಡಳಿತದ ಮುಖಾಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.
ಬಣಜಿಗ ಸಮಾಜಕ್ಕೆ ಶಿಕ್ಷಣ ಹಾಗೂ ಉದ್ಯೋಗ ಈ ಎರಡೂ ಮೀಸಲಾತಿಗಾಗಿ ಪ್ರವರ್ಗ ೨ ಎ ಗೆ ಸೇರಿಸುವಂತೆ ಆಗ್ರಹಿಸಿ ಮಂಗಳವಾರ ಬಾಗಲಕೋಟೆಯಲ್ಲಿ ತಾಲೂಕು ಬಣಜಿಗ ಸಮಾಜದ ವತಿಯಿಂದ ಜಿಲ್ಲಾಡಳಿತದ ಮುಖಾಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.
Published on

ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಬಣಜಿಗ ಸಮುದಾಯವನ್ನು ಪ್ರವರ್ಗ-೨ಎ ಗೆ ಸೇರಿಸಬೇಕು ಎಂದು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಘಟಕದಿಂದ ಜಿಲ್ಲಾಽಕಾರಿಗಳಿಗೆ ಮನವಿ ಸಲ್ಲಿಸಿದರು.

ನವನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಽಕಾರಿಗಳ ಮುಖಾಂತರ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದ ಸಮಾಜದ ಮುಖಂಡರು, ಬಣಜಿಗ ಸಮಾಜವನ್ನು ಪ್ರವರ್ಗ-೨ಎಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ವಿಭಾಗೀಯ ಉಚ್ಛ ನ್ಯಾಯಾಲಯವು ಶಿಕ್ಷಣ ಹಾಗೂ ಉದ್ಯೋಗ ಈ ಎರಡು ಮೀಸಲಾತಿಗಾಗಿ ಬಣಜಿಗ ಸಮುದಾಯವು ಅರ್ಹರವಾಗಿದ್ದರಿಂದ ಅವರನ್ನು ಗ್ರುಪ್-ಡಿ ಬದಲಿಗೆ ಗ್ರುಪ್-ಬಿ ಅಡಿಯಲ್ಲಿ ಮರು ವರ್ಗೀಕರಣ ಮಾಡಬೇಕೆಂದು ಸರ್ಕಾರಕ್ಕೆ ಆದೇಶ ನೀಡಿದೆ.
ಬಣಜಿಗ ಸಮಾಜವು ಬಹು ಹಿಂದಿನಿAದಲೂ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಈಗ ಜಾರಿಯಲ್ಲಿರುವ ಸರ್ಕಾರದ ಆದೇಶದಿಂದ ಸರ್ಕಾರಿ ನೇಮಕಾತಿಯಿಂದ ಬಣಜಿಗ ಸಮುದಾಯ ಅವಕಾಶ ವಂಚಿತವಾಗಿದೆ. ನ್ಯಾಯಾಲಯದ ತೀರ್ಪಿನ ಅನ್ವಯ ಸರ್ಕಾರ ಕೂಡಲೇ ಆದೇಶ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಹೊಳಬಸು ಬಾಳಶೆಟ್ಟರ, ತಾಲೂಕಾಧ್ಯಕ್ಷ ವೀರಭದ್ರಪ್ಪ ಅಂಗಡಿ, ಬಸವರಾಜ ಚಿನಿವಾಲರ, ಬಸವರಾಜ ಶೀಲವಂತ, ಮುತ್ತು ಜೋಳದ, ಮುರಗೇಶ ಶಿವನಗುತ್ತಿ, ಶಿವಲೀಲಾ ಪಟ್ಟಣಶೆಟ್ಟಿ, ವಿಶ್ವನಾಥ ವೈಜಾಪೂರ, ಆನಂದ ಜಿಗಜಿನ್ನಿ, ಸಂಗಮೇಶ ಅಂಗಡಿ, ವಿರೇಶ ಹುಂಡೇಕಾರ, ಈರಣ್ಣ ಮುಕ್ತಪ್ಪಿ, ಅರವಿಂದ ನಾವಲಗಿ, ಸಂತೋಷ ಕತ್ತಿ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net