ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದಲ್ಲಿ ಎರಡು ವಿಭಾಗ, ಎಂಟು ಉಪ ವಿಭಾಗಗಳಿವೆ. ನವನಗರ ಯೂನಿಟ್ -೨ ನಿರ್ಲಕ್ಷ÷್ಯ ವಹಿಸಿದ್ದಾರೆ. ಕಸ ವಿಲೇವಾರಿ ಟೆಂಡರ್ ಕೂಡಾ ನೀಡುವದಿಲ್ಲ. ಬಿಟಿಡಿಎ ಮುಖ್ಯ ಇಂಜಿನಿಯರ್ ಚಂದ್ರಹಾಸ ಬಂಡಿ ಸೇರಿದಂತೆ ಈ ವರೆಗೆ ಅಽಕಾರದಲ್ಲಿದ್ದ ಯಾವ ಮುಖ್ಯಸ್ಥರು ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಪತ್ರ ಬರೆದು ಬಸ್ ಸೌಕರ್ಯ, ಶಾಲೆ ಹಾಗೂ ಆಸ್ಪತ್ರೆ ಆರಂಭಕ್ಕೆ ಕೋರಿಲ್ಲ ಎನ್ನುವುದೇ ಬಹಳಷ್ಟು ನೋವಿನ ಸಂಗತಿ. ಸಂತ್ರಸ್ತರ ಬಗ್ಗೆ ಇಷ್ಟೊಂದು ಅಸಡ್ಡೆನಾ ? ಎನ್ನುವ ಪ್ರಶ್ನೆ ಕಾಡ ತೊಡಗಿದೆ.