ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಭಾಷಿಕರ ದಾಳಿಗೆ ನಲುಗುತ್ತಿರುವ ಕನ್ನಡಿಗರ ಅಸ್ಮಿತೆ ದ್ವಿಭಾಷಾ ನೀತಿ ಜಾರಿಗೆ ತರಬೇಕು. ಸರ್ಕಾರಿ ಶಾಲೆಗಳ ಅವನತಿಗೆ ರಾಜ್ಯ ಸರ್ಕಾರವೇ ಕಾರಣವಾಗುತ್ತಿದೆ. ಕನ್ನಡಿಗರ ಉದ್ಯೋಗದಾತೆ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿ ಮಾಡಬೇಕು. ಬಾಂಗ್ಲಾ ದೇಶದ ಮುಸ್ಲಿಂ ಅಕ್ರಮವಾಗಿ ನೆಲೆಸಿದ್ದಾರೆ. ಶಾಂತಿಯ ತೋಟಕ್ಕೆ ನೆಮ್ಮದಿ ಮುಂದು ವರೆಯಲು ಇವರನ್ನು ಹೊರಗೆ ಹಾಕಬೇಕು ಎಂದು ಆಗ್ರಹಿಸಿದರು.