ಬೀದಿ ನಾಯಿಗಳ ದಾಳಿಗೆ ಮೇಕೆಗಳು ಬಲಿ

 ಬೀಳಗಿ ತಾಲೂಕಿನ ಗೋವಿನದಿನ್ನಿ ಗ್ರಾಮದಲ್ಲಿ ನಾಯಿಗಳ ಗುಂಪು ದಾಳಿಗೆ ಗಾಯಗೊಂಡಿರುವ ಮೇಕೆಗಳಿಗೆ ಪಶುವೈದ್ಯಾಽಕಾರಿ ಡಾ.ಸಂತೋಷ ಬಸಣ್ಣವರ ತಂಡವೂ ಚಿಕಿತ್ಸೆ ನೀಡಿದರು.
ಬೀಳಗಿ ತಾಲೂಕಿನ ಗೋವಿನದಿನ್ನಿ ಗ್ರಾಮದಲ್ಲಿ ನಾಯಿಗಳ ಗುಂಪು ದಾಳಿಗೆ ಗಾಯಗೊಂಡಿರುವ ಮೇಕೆಗಳಿಗೆ ಪಶುವೈದ್ಯಾಽಕಾರಿ ಡಾ.ಸಂತೋಷ ಬಸಣ್ಣವರ ತಂಡವೂ ಚಿಕಿತ್ಸೆ ನೀಡಿದರು.
Published on
ಬಾಗಲಕೋಟೆ: ಜಿಲ್ಲೆಯಲ್ಲಿ ಬೀದಿ ನಾಯಿಗಳ ದಾಳಿ ಮುಂದುವರೆದಿದೆ. ಕಳೆದ ವರ್ಷ ೨೫೧೫೨ ಜನರಿಗೆ ಕಚ್ಚಿ, ಐವರ ಸಾವಿಗೂ ಕಾರಣವಾಗಿದ್ದ ಬೀದಿ ನಾಯಿಗಳ ಹಾವಳಿ ಪ್ರಸಕ್ತ ವರ್ಷದ ಆರಂಭದಿAದಲೂ ವಿವಿಧೆಡೆ ದಾಳಿ ನಡೆಸಿ, ಜನರನ್ನು ಆಸ್ಪತ್ರೆಗೆ ದಾಖಲಾಗಿರುವ ವರದಿ ಬೆನ್ನೆಲ್ಲೆ ಇದೀಗ ಪ್ರಾಣಿಗಳ ಮೇಲೂ ದಾಳಿ ಮುಂದುವರೆಸಿವೆ.
ಬೀಳಗಿ ತಾಲೂಕಿನ ಗೋವಿನದಿನ್ನಿ ಗ್ರಾಮದಲ್ಲಿ ಬೀದಿ ನಾಯಿಗಳು ಗುಂಪು ದಾಳಿ ಮಾಡಿದ್ದರಿಂದ ಹಲವು ಮೇಕೆಗಳು ಸಾವನ್ನಪ್ಪಿದ್ದು, ಕೆಲ ಮರಿಗಳು ಗಂಭೀರ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ಬಸವರಾಜ ಬುಗಡಿ ಎನ್ನುವವರು ತಮ್ಮ ಮನೆ ಪಕ್ಕದಲ್ಲಿ ಕಟ್ಟಿದ್ದ ಮೇಕೆಗಳ ಮೇಲೆ ಮಧ್ಯರಾತ್ರಿ ೨ ಗಂಟೆಯ ಸುಮಾರಿಗೆ ಎಂಟತ್ತು ಬೀದಿ ನಾಯಿಗಳು ದಾಳಿ ನಡೆಸಿದ್ದು, ಈ ವೇಳೆ ಅಲ್ಲಿ ೧೭ ದೊಡ್ಡ ಮೇಕೆ ಹಾಗೂ ೬ ಮರಿಗಳು ಇದ್ದು, ನಾಯಿಗಳ ಗುಂಪು ದಾಳಿಯಿಂದ ಅಂದಾಜು ೨೦ ಮೇಕೆಗಳು ಸಾವನ್ನಪ್ಪಿವೆ, ೩ ಮರಿಗಳಿಗೆ ಗಂಭೀರ ಗಳಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಬುಗಡಿ ಅವರು ಹೇಳುತ್ತಾರೆ.
ಇನ್ನು ನಾಯಿ ದಾಳಿಯಿಂದ ಮೇಕೆಗಳು ಸಾವನ್ನಪ್ಪಿರುವ ಮಾಹಿತಿ ಬಂದ ಬಳಿಕ ಸ್ಥಳಕ್ಕೆ ಬೀಳಗಿ ಪಶು ವೈದ್ಯಾಽಕಾರಿ ಡಾ.ಸಂತೋಷ ಬಸಣ್ಣವರ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಗಾಯಗೊಂಡಿರುವ ಮೇಕೆಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಅಽಕಾರಿಗಳು ಭೇಟಿ ನೀಡಿದ ವೇಳೆ ಸ್ಥಳದಲ್ಲಿ ನಾಲ್ಕು ಮೇಕೆಗಳ ದೇಹ ಕಂಡು ಬಂದಿದ್ದು, ಅವುಗಳ ಮರಣೋತ್ತರ ಪರೀಕ್ಷೆ ನಡೆಸಿ, ಪರಿಹಾರಕ್ಕೆ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಬಸವರಾಜ ಬುಗಡಿ ಅವರು ಬೇರೆ ಊರಿಗೆ ಹೋಗಿದ್ದರಿಂದ ಮನೆಯಲ್ಲಿ ಒಬ್ಬ ಹುಡುಗ ಮಾತ್ರ ಇದ್ದು. ನಾಯಿಗಳ ಗುಂಪು ದಾಳಿ ಮಾಡಿದ್ದರಿಂದ ಆತ ಅಲ್ಲಿಗೆ ಹೋಗಲು ಆಗಿಲ್ಲ. ನೆರೆಹೊರೆಯವರು ಸಹ ನಾಯಿಗಳು ಹೆಚ್ಚು ಇದ್ದಿದ್ದರಿಂದ ಅವರು ಹೊರಗಡೆ ಬಂದಿಲ್ಲ. ಈ ವೇಳೆ ಕೆಲ ಮರಿಗಳನ್ನು ಕಚ್ಚಿಕೊಂಡು ಹೋಗಿವೆ ಎನ್ನಲಾಗುತ್ತಿದೆ.
ಆದರೆ, ಸರ್ಕಾರದಿಂದ ಪರಿಹಾರ ನೀಡಲು ಅದಕ್ಕೆ ಅಗತ್ಯ ದಾಖಲೆಗಳು ಬೇಕಾಗುತ್ತವೆ. ಸತ್ತ ಮೇಕೆಗಳ ಮರಣೋತ್ತರ ಪರೀಕ್ಷೆ ಮಾಡಬೇಕು. ಸತ್ತ ಮೇಕೆಗಳನ್ನು ಮೊದಲು ಹಾಗೂ ಮರಣೋತ್ತರ ಪರೀಕ್ಷೆ ಬಳಿಕ ಜಿಪಿಎಸ್ ಅಪ್‌ಲೋಡ್ ಮಾಡಬೇಕು. ಹೀಗಾಗಿ ಅಲ್ಲಿ ನಿಖರವಾಗಿ ಎಷ್ಟು ಮೇಕೆಗಳು ಇದ್ದವೂ ಎನ್ನುವುದು ತಿಳಿದಿಲ್ಲ. ಕುಟುಂಬದವರು ಹೇಳಿದ್ದನ್ನು ಕೇಳಿದ್ದೇವೆ. ಆದರೆ, ನಮಗೆ ನಾಲ್ಕು ಸತ್ತ ಮೇಕೆಗಳು ಹಾಗೂ ಮೂರು ಗಾಯಗೊಂಡಿರುವ ಮೇಕೆಗಳು ಮಾತ್ರ ಇದ್ದು, ಗಾಯಗೊಂಡಿದ್ದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ನಾಲ್ಕು ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಅಽಕಾರಿಗಳು ಹೇಳುತ್ತಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net