ಶನಿವಾರ ರಾತ್ರಿ ಪ್ರಶಾಂತ ನಾವಿ ಎನ್ನುವ ಆರೋಪಿ ಬೈಕ್ ಮೇಲೆ ಬಂದು ಕರಡಿಗುಡ್ಡ ಗ್ರಾಮದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಮೊದಲು ಖಾಲಿ ಮನೆಯೊಂದಕ್ಕೆ ಹೋದಾಗ ಅಲ್ಲಿ ಆತನಿಗೆ ಏನು ಸಿಕ್ಕಿಲ್ಲ. ಬಳಿಕ ಗ್ರಾಮದ ಮನೆಯ ಮುಂದೆ ಮಲಗಿದ್ದ ವೃದ್ಧ ದಂಪತಿಯನ್ನು ಗಮನಿಸಿ ಅಲ್ಲಿಗೆ ಹೋಗಿದ್ದಾನೆ. ಅವರ ಕೊರಳಲ್ಲಿ ಏನಾದರೂ ಚಿನ್ನಾಭರಣ ಇವೆಯಾ ಎಂದು ಪರಿಶೀಲಿಸುವ ವೇಳೆ, ವೃದ್ಧ ಹೊಳೆಪ್ಪ ಮುಗಳಿ ಎಚ್ಚರಗೊಂಡು, ಕಳ್ಳನನ್ನು ಹಿಡಿದುಕೊಂಡಿದ್ದಾನೆ. ಆಗ ಆತನಿಂದ ಬಿಡಿಸಿಕೊಂಡು ಪರಾರಿಯಾಗಲು ತನ್ನ ಬಳಿ ಇದ್ದ ಪಿಸ್ತೂಲ್‌ನಿಂದ ಮೊದಲು ಎರಡು ಸಲ ಗುಂಡು ಹಾರಿಸಿದ್ದು, ಅವು ಮಿಸ್ -ಫೈರಿಂಗ ಆಗಿವೆ. ಮೂರನೇ ಸಲ ಹಾರಿಸಿದಾಗ ಹೊಳೆಪ್ಪನ ಪತ್ನಿ ಬಸವ್ವಳ ಬಲಗಾಲಿಗೆ ಬಿದ್ದಿದೆ.