ನೀರಿಗಾಗಿ ಪ್ರತಿಭಟಿಸಿದವರ ಮೇಲೆ ಎಫ್ ಐ ಆರ್

ಬಾಗಲಕೋಟೆಯಲ್ಲಿ ಜಿಲ್ಲಾಽಕಾರಿ ಸಂಗಪ್ಪ ಅವರಿಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಅವರ ಬೆಂಬಲಿಗರು ಮನವಿ ಸಲ್ಲಿಸಿದರು.
ಬಾಗಲಕೋಟೆಯಲ್ಲಿ ಜಿಲ್ಲಾಽಕಾರಿ ಸಂಗಪ್ಪ ಅವರಿಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಅವರ ಬೆಂಬಲಿಗರು ಮನವಿ ಸಲ್ಲಿಸಿದರು.
Published on
ಬಾಗಲಕೋಟೆ: ಜಿಲ್ಲೆಯ ಇಳಕಲ್ಲ ನಗರದಲ್ಲಿ ಈಚೆಗೆ ಕುಡಿವ ನೀರಿನ ಸಮಸ್ಯೆಗಾಗಿ ನಗರಸಭೆ ಎದುರು ಪ್ರತಿಭಟನೆ ನಡೆಸಿದ್ದವರ ಮೇಲೆ ಆಯುಕ್ತರು ಎಫ್ ಐ ಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಬಾಗಲಕೋಟೆ ಜಿಲ್ಲಾಽಕಾರಿ ಸಂಗಪ್ಪ ಹಾಗೂ ಎಸ್ಪಿ ಸಿದ್ಧಾರ್ಥ ಗೋಯಲ್ ಅವರಿಗೆ ಬಿಜೆಪಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿ, ನಗರಸಭೆ ಆಯುಕ್ತ ಶ್ರೀನಿವಾಸ ಜಾಧವ ಅವರನ್ನು ಅಮಾನತು ಮಾಡಬೇಕು, ಎಫ್ ಐ ಆರ್ ಹಿಂಪಡೆಯಬೇಕು ಎಂದು ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಇಳಕಲ್ಲ ನಗರದಲ್ಲಿ ೨೪/೭ ಕುಡಿವ ನೀರಿನ ವ್ಯವಸ್ಥೆ ೨೦೧೨ರಲ್ಲಿ ಮಾಡಲಾಗಿತ್ತು. ಮನೆ ಮನೆಗೆ ನೀರು ಸರಬರಾಜು ಆಗುತ್ತಿತ್ತು. ಈ ಮೊದಲು ನೀರು ಸರಬರಾಜು ನಿರ್ವಹಣೆ ಮಾಡುತ್ತಿದ್ದ ಕಂಪನಿಯನ್ನು ಬಿಡಿಸಿ, ಕಮಿಷನ್‌ಗಾಗಿ ಪೌರಾಯುಕ್ತರು ಒತ್ತಡಕ್ಕೆ ಮಣಿದು ಅನುಭವ ಇಲ್ಲದ ಕಂಪನಿಗೆ ನಿರ್ವಹಣೆ ವಹಿಸಿತು. ಇದೀಗ ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದ ಅನೇಕ ಸಲ ಪ್ರತಿಭಟನೆಗಳು ನಡೆದಿವೆ. ಜೂ. ೯ ರಂದು ನಗರಸಭೆ ಎದುರು ಪ್ರತಿಭಟನೆಗೆ ತೆರಳಿದ್ದ ವೇಳೆ ಮೂರು ಗಂಟೆ ಕಳೆದರೂ ಪೌರಾಯುಕ್ತರು ಕಚೇರಿಗೆ ಬರಲಿಲ್ಲ. ಇದರಿಂದ ಜನರು ನಗರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಽಕಾರಿ ಬಂದ ಬಳಿಕ ತಾವೇಕೆ ಬೀಗ ಹಾಕಿದ್ದೇವೆ ಎಂದು ತಿಳಿಸಿದ್ದಾರೆ. ಆಗ ಸುಮ್ಮನಿದ್ದ ಪೌರಾಯುಕ್ತರು ಮರುದಿನ ಇಬ್ಬರು ಮಹಿಳೆಯರು ಸೇರಿ ೯ ಜನರು ಹಾಗೂ ಇತರರು ಎಂದು ಎಫ್ ಐ ಆರ್ ಮಾಡಿಸಿದ್ದಾರೆ ಎಂದು ಮಾಜಿ ಶಾಸಕರು ತಿಳಿಸಿದರು.
ಪ್ರತಿಭಟನೆ ನಡೆಸಿದವರು ಮೇಲೆ ದೂರು ದಾಖಲಿಸಲು ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿ ಪಾಟೀಲ, ಕ್ಷೇತ್ರದಲ್ಲಿ ಕಾಶಪ್ಪನವರ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ದರ್ಪ, ದೌರ್ಜನ್ಯ, ಅಽಕಾರದ ಮದ ಏರಿರುವಂತ ಶಾಸಕರು ಅವರು ಎಂದು ಆರೋಪಿಸಿದರು.
ಇದೇ ಶಾಸಕ ಕಾಶಪ್ಪನವರ ಎರಡು ಇಂಚು ಪೈಪ್ ಹಾಕಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಇರುವ ತಮ್ಮ -ರ‍್ಮಹೌಸ್‌ಗೆ ಅಲ್ಲಿರುವ ಸ್ವೀಮಿಂಗ್ ಫುಲ್ ನೀರು ಒಯ್ದಿದ್ದಾರೆ. ಜನರಿಗೆ ಕುಡಿಯಲು ನೀರು ಸಿಗಲಿ ಬಿಡಲಿ, ಶಾಸಕರ ಸ್ವೀಮಿಂಗ್ ಫುಲ್ ಮಾತ್ರ ನೀರು ಬೇಕು. ಅಽಕಾರಿಗಳು ಶಾಸಕರ ಕೈಗೊಂಬೆಗಳಾಗಿದ್ದಾರೆ ಎಂದು ಕಿಡಿಕಾರಿದರು.
ಗ್ರಾಮೀಣ ಪ್ರದೇಶದಲ್ಲಿ ಇರುವ ಶಾಸಕರ -ರ‍್ಮಹೌಸ್‌ಗೆ ನೀಡಿರುವ ನೀರಿನ ಸಂಪರ್ಕ ಬಂದ್ ಮಾಡಬೇಕು. ನಗರಸಭೆ ಆಯುಕ್ತ ಶ್ರೀನಿವಾಸ ಜಾಧವ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು, ಕುಡಿವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಽಕಾರಿಗಳಿಗೆ ತಿಳಿಸಿದ್ದೇವೆ. ಈ ಬಗ್ಗೆ ಕ್ರಮ ವಹಿಸುವುದಾಗಿ ಹೇಳಿದ್ದಾರೆ. ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೇ ಇದ್ದರೆ ನಾವು ಪ್ರತಿಭಟನೆಗೆ ಇಳಿಯುತ್ತೇವೆ. ಶಾಸಕ ತಮ್ಮ ಅಽಕಾರ ದರ್ಪ ಬಳಕೆ ಮಾಡಿಕೊಂಡು ಅದೆಷ್ಟು ಜನರ ಮೇಲೆ ಎಫ್ ಐ ಆರ್ ಹಾಕಿಸುತ್ತಾರೋ ಹಾಕಿಸಲಿ. ನಾವು ನೋಡುತ್ತೇವೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಖಡಕ್ಕಾಗಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net