ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೬೪೪೭೧ ಹೆಕ್ಟೆರ್‌ನಷ್ಟು ತೋಟಗಾರಿಕೆ ವಿಸ್ತೀರ್ಣವಿದ್ದು, ಅದರಲ್ಲಿ ಹಣ್ಣು, ತರಕಾರಿ, ಸಾಂಬಾರು ಬೆಳೆಗಳು, ತೋಟದ ಬೆಳೆಗಳು, ಹೂವಿನ ಬೆಳೆಗಳು, ಔಷಽ ಸಸ್ಯಗಳು ಸುಗಂಽತ ಸಸ್ಯಗಳನ್ನು ಬೆಳೆಯಲಾಗುತ್ತಿದೆ. ತೋಟಗಾರಿಕೆ ಇಲಾಖೆಯ ಕ್ಷೇತ್ರ, ನರ್ಸರಿಗಳ ಜಮೀನು ೭೯.೨೯ ಎಕರೆ ಇದೆ. ೬ ರೈತ ಉತ್ಪಾದಕ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೊಜನೆ, ಸೋಲಾರ ಪಂಪಸೆಟ್, ಕೋಲ್ಡ ಸ್ಟೋರೆಜ್ ಯುನಿಟ್, ಹವಾಮಾನ ಆಧಾರಿತ ಘಟಕಗಳಡಿ ಸಹಾಯಧನ ಯೋಜನೆ, ಪಿಎಂ ಫಸಲ್ ಬಿಮಾ ಯೋಜನೆ, ಪಿಎಂ ಕೃಷಿ ಸಿಂಚಾಯಿ ಯೋಜನೆ, ಎಣ್ಣೆ ತಾಳೆ ಅಭಿವೃದ್ಧಿ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಸಭೆಗೆ ತಿಳಿಸಿದರು.