ಈಗಾಗಲೇ ದೇಶದಲ್ಲಿ ಅಂದಾಜು ೧೩ ರಾಜ್ಯಗಳಲ್ಲಿ ಎಸ್‌ಐಆರ್ ಆಗಿದ್ದು, ಅಲ್ಲಿ ೫ ಕೋಟಿಗಿಂತ ಹೆಚ್ಚು ಮತದಾರರು ಹೊರಗುಳಿದಿದ್ದಾರೆ. ಈ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಕರ್ನಾಟಕ ಯಾವುದೇ ದೇಶದ ಗಡಿರೇಖೆ ಹಂಚಿಕೊAಡಿರುವುದಿಲ್ಲ. ಹೀಗಾಗಿ ಇಲ್ಲಿ ನುಸುಳುಕೋರರು ಎನ್ನುವ ಪ್ರಮೇಯ ಬರುವುದಿಲ್ಲ. ಯಾವುದೇ ತಾಂತ್ರಿಕ ನೆಪಮಾಡಿ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಡಿಎಸ್‌ಎಸ್ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಬೇಕಿದೆ. ಮುಖ್ಯವಾಗಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಮತಪಟ್ಟಿಯಿಂದ ಹೋಗದಂತೆ ಎಚ್ಚರವಹಿಸಬೇಕಾಗಿದೆ ಎಂದರು.