ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಿ

ಬಾಗಲಕೋಟೆ ಜಿಪಂ ಸಭಾಭವನದಲ್ಲಿ ಕುಡಿಯುವ ನೀರು ಸರಬರಾಜು ಕುರಿತು ಮಂಗಳವಾರ ಜಿಪಂ ಸಿಇಒ ಶಶಿಧರ ಕುರೇರ ಅವರು ಜಿಲ್ಲೆಯ ಪಿಡಿಒ, ಆಡಳಿತಾಽಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಡಿಎಸ್‌ಒ ಎನ್.ವೈ.ಬಸರಿಗಿಡದ ಇದ್ದರು.
ಬಾಗಲಕೋಟೆ ಜಿಪಂ ಸಭಾಭವನದಲ್ಲಿ ಕುಡಿಯುವ ನೀರು ಸರಬರಾಜು ಕುರಿತು ಮಂಗಳವಾರ ಜಿಪಂ ಸಿಇಒ ಶಶಿಧರ ಕುರೇರ ಅವರು ಜಿಲ್ಲೆಯ ಪಿಡಿಒ, ಆಡಳಿತಾಽಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಡಿಎಸ್‌ಒ ಎನ್.ವೈ.ಬಸರಿಗಿಡದ ಇದ್ದರು.
Published on
ಬಾಗಲಕೋಟೆ: ಪ್ರಖರ ಬೇಸಿಗೆಯ ಕಾಲ ಪ್ರಾರಂಭವಾಗಿದ್ದು, ಮುಂದಿನ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳು ಮತ್ತು ಆಡಳಿತಾಽಕಾರಿಗಳೊಂದಿಗೆ ಕುಡಿಯುವ ನೀರು ಸರಬರಾಜು ಕುರಿತು ಮಂಗಳವಾರ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದರು.
ಯಾವ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ತಿಳಿದುಕೊಂಡು ಪರಿಹಾರ ಕಂಡುಕೊಳ್ಳಬೇಕು. ಸಾರ್ವಜನಿಕರಿಂದ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ದೂರು ಬಂದರೂ ಸಹ ೨೪ ಗಂಟೆಯೊಳಗೆ ಸಮಸ್ಯೆ ಬಗೆ ಹರಿಸುವ ಕೆಲಸವಾಗಬೇಕು. ಪಂಚಾಯಿತಿ ಬೋರವೆಲ್ ಬಳಕೆಗೆ ಯೋಗ್ಯವಲ್ಲ ಎಂದು ಕಂಡು ಬಂದಲ್ಲಿ ಖಾಸಗಿ ಬೋರವೆಲ್ ಗಳನ್ನು ಗುರುತಿಸಿಕೊಂಡು ಅವುಗಳ ಮಾಲೀಕರೊಂದಿಗೆ ಕರಾರು ಪತ್ರ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಖಾಸಗಿ ಬೋರವೆಲ್ ಸಿಗದಿದ್ದ ಪಕ್ಷದಲ್ಲಿ ಟ್ಯಾಂಕರ್‌ಗಳನ್ನು ಬಳಸಿ ನೀರು ಪೂರೈಸುವ ಕೆಲಸ ಮಾಡಬೇಕು.
ಒವರ್ ಹೆಡ್ ಟ್ಯಾಂಕ್ ಗಳು ದುರಸ್ತಿ ವ್ಯವಸ್ಥೆಯಲ್ಲಿದ್ದರೆ ದುರಸ್ತಿ ಮಾಡಿಸಿಕೊಡಲಾಗುವುದು. ಹೊಸ ಬೋರವೆಲ್‌ಗಳಿಗೆ ಅವಕಾಶವಿರುವದಿಲ್ಲ. ಕೇವ¯ ಬೇಸಿಗೆ ಸಮಸ್ಯೆಗಾಗಿ ಹೊಸ ಕೊಳವೆ ಬಾವಿ ಕೊರೆಯಿಸುವ ಕಾರ್ಯ ಸೂಕ್ತವಲ್ಲ ಎಂದರು.
ಗ್ರಾಮಗಳಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳು ಸುಸ್ಥಿಯಲ್ಲಿದ್ದು, ಜನಬಳಕೆಗೆ ಸದಾಕಾಲ ದೊರೆಯುವಂತೆ ಅಗತ್ಯ ಕ್ರಮವಹಿಸಿ, ಗ್ರಾಮಗಳಲ್ಲಿನ ಎಲ್ಲ ಜಲಮೂಲಗಳ ಸುತ್ತಲಿನ ಪ್ರದೇಶದಲ್ಲಿ ಇರಬಹುದಾದ ತಾಜ್ಯ ಹಾಗೂ ಚರಂಡಿ ನೀರನ್ನು ಸರಿಯಾಗಿ ವಿಲೇವಾರಿ ಮಾಡಿ, ಕುಡಿಯುವ ನೀರು ಕಲುಷಿತಗೊಳ್ಳದಂತೆ ತಡೆಗಟ್ಟಬೇಕು. ಬಹುಗ್ರಾಮ ನೀರು ಸರಬರಾಜು ಮಾಡುವ ಒವರ್ ಹೆಡ್ ಟ್ಯಾಂಕ್ ಗಳನ್ನು ಕಾಲ ಕಾಲಕ್ಕೆ ಸ್ವಚ್ಚಗೊಳಿಸಿ, ಯಾವುದೇ ರೀತಿಯ ರೋಗಾಣು ಬ್ಯಾಕ್ಟೀರಿಯಾ ಅಥವಾ ಫಂಗಸ್ ಸೇರದಂತೆ, ಬೆಳೆಯದಂತೆ ನಿಯಮಿತವಾಗಿ ಎಲ್ಲ ಬಗೆಯ ಜಲಸಂಗ್ರಹಾರಗಳನ್ನು ಸ್ವಚ್ಚಗೊಳಿಸಿ, ವೈಜ್ಞಾನಿಕ ರೀತಿಯಲ್ಲಿ ಕ್ಲೋರಿನೇಷನ್ ಮಾಡಿ ಸ್ವಚ್ಚಗೊಳಿಸತಕ್ಕದ್ದು ಎಂದು ಹೇಳಿದರು.
ಚಾಲ್ತಿಯಲ್ಲಿರುವಂತಹ ಕೊಳವೆ ಬಾವಿಗಳನ್ನು ಪರಿಶೀಲಿಸಿ, ಪ್ರಯೋಗಾಲಯದಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಿ ನೀರಿನ ಶುದ್ದತೆಯನ್ನು ಖಾತ್ರಿ ಪಡಿಸಿಕೊಳ್ಳಿ. ಒಟ್ಟಾರೆ ಗ್ರಾಮಸ್ಥರಿಗೆ ಅವರ ಆರೋಗ್ಯಕ್ಕೆ ಯಾವುದೇ ತೊಂದರೆಯಾಗದAತೆ ಕಲುಷಿತ ನೀರಿನ ಸೇವನೆಯಿಂದ ವಾಂತಿಭೇದಿ ಪ್ರಕರಣಗಳು, ಸಾವುನೋವು ಘಟಿಸದಂತೆ ಎಲ್ಲ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಽಕಾರಿ ಆಕಾಶ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net