ಗ್ರಾಮೀಣ ಭಾಗದಲ್ಲಿ ವೈದ್ಯರ ಸೇವೆ ಅಗತ್ಯ

 ಬಾಗಲಕೋಟೆಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಪದವೀಧರರಿಗೆ ಪದವಿ ಪ್ರಮಾಣ ಪತ್ರವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ವಿತರಿಸಿದರು. ಹೃದ್ರೋಗ ತಜ್ಞ ಡಾ.ಗಿರೀಶ ನವಸುಂದಿ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಡಾ.ಭುವನೇಶ್ವರಿ ಯಳಮಲಿ ಇದ್ದರು.
ಬಾಗಲಕೋಟೆಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಪದವೀಧರರಿಗೆ ಪದವಿ ಪ್ರಮಾಣ ಪತ್ರವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ವಿತರಿಸಿದರು. ಹೃದ್ರೋಗ ತಜ್ಞ ಡಾ.ಗಿರೀಶ ನವಸುಂದಿ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಡಾ.ಭುವನೇಶ್ವರಿ ಯಳಮಲಿ ಇದ್ದರು.
Published on
ಬಾಗಲಕೋಟೆ: ವೈದ್ಯಕೀಯ ಶಾಸ್ತçದ ಮೂಲನೆಲೆಯಾದ ಭಾರತ ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿ ಸಾಽಸಿದೆ. ಆದರೆ, ದೇಶದಲ್ಲಿ ಶೇ.೬೫ ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸ ಇದ್ದು, ಶೇ. ೭೫ ರಷ್ಟು ವೈದ್ಯರು ನಗರದಲ್ಲಿ ತಮ್ಮ ಸೇವೆ ನೀಡುತ್ತಿದ್ದಾರೆ. ಹೀಗಾಗಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಸೇವೆಯ ಅಗತ್ಯವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವೈದ್ಯ ಪದವೀಧರರಿಗೆ ಸಲಹೆ ನೀಡಿದರು.
ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ೧೭ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವೀಧರರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಪದವೀಧರರಾದ ನಿಮಗೆ ಇಂದಿನಿAದ ಕಲಿಕೆ ಆರಂಭವಾಗುತ್ತದೆ. ಸವಾಲುಗಳು ಕೂಡ ಎದುರಾಗುವುದು ಈಗಿನಿಂದಲೇ. ಸವಾಲುಗಳನ್ನು ಎದುರಿಸಿ ವೃತ್ತಿಯಲ್ಲಿ ಉತ್ಕೃಷ್ಟವಾದದ್ದನ್ನು ಸಾಽಸಿ. ಕರೋನಾ ಸಂದಿಗ್ಧ ಕಾಲದಲ್ಲಿ ಕೋವಿಡ್ ಲಸಿಕೆ ಕಂಡುಹಿಡಿದು ನೂರಕ್ಕೂ ಹೆಚ್ಚು ರಾಷ್ಟçಗಳಿಗೆ ಕಳುಹಿಸಿಕೊಟ್ಟ ದೇಶ ನಮ್ಮದು ಎಂದು ತಿಳಿಸಿದ ಅವರು, ಉತ್ತರ ಕರ್ನಾಟಕದಲ್ಲಿ ಡಾ.ವೀರಣ್ಣ ಚರಂತಿಮಠ ಅವರು ಅತ್ಯುತ್ತಮವಾದ ವೈದ್ಯಕೀಯ ಕಾಲೇಜು ಸ್ಥಾಪಿಸಿ ವೈದ್ಯಕೀಯ ಕ್ಷೇತ್ರಕ್ಕೆ ಗಮನಾರ್ಹವಾದ ಕೊಡುಗೆ ನೀಡುತ್ತಿರುವರು ಎಂದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ಪದವಿ ಪ್ರದಾನ ಭಾಷಣ ಮಾಡಿದ ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ.ಗಿರೀಶ ನವಸುಂದಿ ಅವರು, ಶಿಕ್ಷಿತನಾಗುವುದು ಎಂದರೆ ಕೇವಲ ವೈಯಕ್ತಿಯ ಬೆಳವಣಿಗೆಯಲ್ಲ, ಅದು ಸಮುದಾಯದ ಬೆಳವಣಿಗೆ. ವೈದ್ಯರಾಗಿ ಅತ್ಯುತ್ತಮ ಸೇವೆ ಒದಗಿಸಿ ಸಮಾಜದ ಪ್ರಗತಿಗೆ ಕಾರಣರಾಗಿ. ಪ್ರತಿಫಲವನ್ನು ನಿರೀಕ್ಷಿಸದೆ ವೃತ್ತಿಗೆ ಕೊಡುಗೆ ನೀಡಿ. ಸಾಮಾಜಿಕ ಮಾಧ್ಯಮವನ್ನು ಸೀಮಿತವಾಗಿ ಉಪಯೋಗಿಸಿ. ವಿಷಯದ ಪಠ್ಯಪುಸ್ತಕಗಳೊಂದಿಗೆ ಸಾಹಿತ್ಯ ಮತ್ತು ತತ್ವಜ್ಞಾನದ ಪುಸ್ತಕಗಳನ್ನು ಓದಿ ಎಂದು ಪದವೀಧರರಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಮಾತನಾಡಿ, ರೋಗಿಗಳ ಸೇವೆ ದೇವರ ಸೇವೆ ಎಂದು ಭಾವಿಸಿ ಚಿಕಿತ್ಸೆ ನೀಡಿ. ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಭಾಗದ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಚ್‌ಎಸ್‌ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಗೊAಡಿದ್ದು ಎಲ್ಲ ಪ್ರಕಾರದ ವಿಶೇಷ ಚಿಕಿತ್ಸೆಗಳ ಸೌಲಭ್ಯ ಸಾರ್ವಜನಿಕರಿಗೆ ದೊರೆಯುತ್ತಿದೆ ಎಂದರು.
ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ ಅತಿಥಿಗಳನ್ನು ಸ್ವಾಗತಿಸಿ, ಬಿವಿವಿ ಸಂಘ ಮತ್ತು ಮೆಡಿಕಲ್ ಕಾಲೇಜಿನ ಬೆಳವಣಿಗೆ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಡಾ.ಅನಿತಾ ಹೆರೂರ ಮತ್ತು ಡಾ.ಮಂಜುಳಾ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಡಾ.ಸಿ.ಎಸ್.ಹಿರೇಮಠ ವೈದ್ಯಕೀಯ ಪದವೀಧರರಿಗೆ ಪ್ರತಿಜ್ಞಾವಿಽ ಬೋಽಸಿದರು.
ಇದೇ ವೇಳೆ ಕಾಲೇಜಿನ ವತಿಯಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಹೃದ್ರೋಗ ತಜ್ಞ ಡಾ.ಗಿರೀಶ ನವಸುಂದಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ವೈದ್ಯಕೀಯ ಅಽÃಕ್ಷಕ ಡಾ.ಶ್ರೀರಾಮ ಕೋರಾ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಡಾ.ಮಂಜುಳಾ ಪಾಟೀಲ ಮತ್ತು ಡಾ.ಮಹಾಂತೇಶ ಭೂತಲ್ ಮತ್ತಿತರರು ಇದ್ದರು.
ಪದವಿ ಪ್ರದಾನ ಸಮಾರಂಭದಲ್ಲಿ ೨೪೦ ಸ್ನಾತಕ ಮತ್ತು ೧೦ ಸ್ನಾತಕೋತ್ತರ ಪದವಿಧರರಿಗೆ ಪದವಿ ಪ್ರದಾನ ಮಾಡಲಾಯಿತು. ರಾಜೀವಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಬಯೋಕೆಮಿಸ್ಟಿç ಮತ್ತು ಫಿಜಿಯಾಲಜಿ ವಿಷಯದಲ್ಲಿ ಕ್ರಮವಾಗಿ ೭ ಮತ್ತು ೮ ನೇ ರ‍್ಯಾಂಕ್‌ನಲ್ಲಿ ಉತ್ತೀರ್ಣರಾಗಿರುವ ಡಾ.ಶ್ವೇತಾ ಮತ್ತು ಡಾ.ಸೃಷ್ಠಿ ಅವರನ್ನು ಮತ್ತು ಅಽಕ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಡಾ.ರೇವಣ್ಣ, ಡಾ.ಹರ್ಷಿಣಿ ಮತ್ತು ಡಾ.ತೇಜಸ್ವಿನಿ ಅವರನ್ನು ವಿವಿಧ ದಾನಿಗಳು ಸ್ಥಾಪಿಸಿದ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net