ಆಯುಷ್ ಇಲಾಖೆ ಅಽಕಾರಿ ಜಿಲ್ಲೆಯಲ್ಲಿ ಇರುವ ಆಸ್ಪತ್ರೆ, ಹೆಲ್ತ್ ಆ್ಯಂಡ್ ವೆಲ್ನಸ್ ಸೆಂಟರ್, ಕಟ್ಟಡಗಳ ಬಗ್ಗೆ ಅಂಕಿ ಅಂಶಗಳನ್ನು ಸಭೆಯ ಮುಂದಿಟ್ಟಾಗ, ಬರೀ ಇದನ್ನೆ ಹೇಳೋದರಲ್ಲರೀ, ಪ್ರತಿ ತಾಲೂಕಿನ ಆಸ್ಪತ್ರೆ, ಸೆಂಟರ್‌ಗಳಲ್ಲಿ ಪ್ರತಿ ನಿತ್ಯ ಒಳರೋಗಿಗಳು, ಹೊರರೋಗಿಗಳ ಎಷ್ಟು ಇದ್ದಾರೆ? ಯಾವ ತಾಲೂಕಿನ ಆಸ್ಪತ್ರೆಗೆ ಯಾವಾಗ ಭೇಟಿ ನೀಡಿದ್ದೀರಿ? ನೀವು ತೆರಳಿದಾಗ ಆಸ್ಪತ್ರೆಯಲ್ಲಿ ಕಂಡು ಬಂದಿದ್ದೇನು? ಅಲ್ಲಿನ ಸಮಸ್ಯೆಗಳೇನು? ಸೌಲಭ್ಯಗಳೇನು ಈ ಬಗ್ಗೆ ಮಾಹಿತಿ ನೀಡಿ. ಬರೀ ಕಟ್ಟಡ, ಅನುದಾನ ಇಷ್ಟೆ ಹೇಳಿ ಹೋಗೋದಲ್ಲ. ನಿಮ್ಮ ಇಲಾಖೆಯ ಆಗುಹೋಗುಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಮೊಹಿಸಿನ್ ಅವರು ಸ್ಪಷ್ಟವಾಗಿ ಹೇಳಿದರು. ಹಾಗೆಯೇ ವಿವಿಧ ಇಲಾಖೆಗಳ ಅಽಕಾರಿಗಳಿಗೂ ಇದೇ ರೀತಿ ಶಾಂತವಾಗಿಯೇ ಚಾಟಿ ಬೀಸಿದರು.