ಹಿಂದೆ ನಮಾಜ್ ಮಾಡಿ, ಟೋಪಿ ಹಾಕಿದ್ರಲ್ಲ

ಸಚಿವ ಎಂ.ಬಿ.ಪಾಟೀಲ
ಸಚಿವ ಎಂ.ಬಿ.ಪಾಟೀಲ
Published on
ಬಾಗಲಕೋಟೆ: ಮಾತೆತ್ತಿದರೆ ಪಾಕಿಸ್ತಾನ, ಅದು ಇದು ಎಂದು ಮಾತನಾಡುವ ಬಸನಗೌಡ ಪಾಟೀಲ ಯತ್ನಾಳ್ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಇದ್ದಾಗ ವಿಜಯಪುರದಲ್ಲಿ ರಂಜಾನ್ ವೇಳೆ ನನ್ನ ಜೊತೆಗೆ ಬಂದು ನಮಾಜ್ ಮಾಡಿ ತಲೆಗೆ ಟೋಪಿ ಹಾಕಿಕೊಂಡಿದ್ರಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಕುಟುಕಿದ್ದಾರೆ.
ಬಾಗಲಕೋಟೆ ಉಪ ಚುನಾವಣೆ ಪ್ರಚಾರಕ್ಕೆಂದು ಭಾನುವಾರ ನಗರಕ್ಕೆ ಆಗಮಿಸಿದ್ದ ಅವರು, ಸುದ್ದಿಗೋಷ್ಠಿಯಲ್ಲಿ ಯತ್ನಾಳ್ ಬಗ್ಗೆ ಎದುರಾದ ಪ್ರಶ್ನೆಗೆ ಈ ರೀತಿ ಟಾಂಗ್ ಕೊಟ್ಟರು.
ಯತ್ನಾಳ್ ಮಿದುಳು ಹಾಗೂ ನಾಲಿಗೆಗೆ ಲಿಂಕ್ ಇಲ್ಲ. ಹಿಂದೆ ರಂಜಾನ್ ಹಬ್ಬದಲ್ಲಿ ಪ್ರಾರ್ಥನೆ ಮಾಡಿದ್ದರು. ಟೋಪಿ ಹಾಕಿಕೊಂಡಿದ್ದರು. ಟಿಪ್ಪು ಸುಲ್ತಾನ್ ಕಾರ್ಯಕ್ರಮವನ್ನು ಮಾಡಿದ್ದರು. ಈಗ ಟಿಪ್ಪು ಸುಲ್ತಾನ್ ಬಗ್ಗೆ ಬೈಯುತ್ತಾರೆ. ನಾನು ಅವರಂತೆ ಅಲ್ಲ. ಕಳೆದ ೨೫ ವರ್ಷಗಳಿಂದ ರಂಜಾನ್ ನಮಾಜ್‌ನಲ್ಲಿ ಪಾಲ್ಗೊಳ್ಳುತ್ತೇನೆ. ವಿಜಯಪುರದಲ್ಲಿ ಬೌದ್ಧ ವಿಹಾರ ನಾನೇ ಕಟ್ಟಿಸಿಕೊಟ್ಟಿದ್ದೇನೆ. ಜೈನ ಧರ್ಮದ ಕಾರ್ಯಗಳಿಗೂ ಹೋಗುತ್ತೇನೆ. ಆದರೆ, ಯತ್ನಾಳ್ ಆಗಾವ ಅಲ್ಲಾಹೋ ಅಕ್ಬರ್ ಎಂದು ಈಗ ಇವೆಲ್ಲ ಮಾತನಾಡುವುದು ಬಿಡಲಿ ಎಂದು ಸಲಹೆ ನೀಡಿದರು.
೨೦೨೮ಕ್ಕೂ ಕಾಂಗ್ರೆಸ್ ಅಽಕಾರಕ್ಕೆ :
ಈಗ ರಾಜ್ಯದಲ್ಲಿ ನಡೆದಿರುವ ಎರಡು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ನಿಶ್ಚಿತ. ಜೊತೆಗೆ ೨೦೨೮ಕ್ಕೂ ಬಿಜೆಪಿ ಸೋಲುತ್ತದೆ ಮತ್ತೆ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತದೆ. ಇದನ್ನು ಬರೆದಿಟ್ಟುಕೊಳ್ಳಿ ಎಂದು ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆ ವೇಳೆ ಸರ್ಕಾರ ಗೃಹ ಲಕ್ಷಿ÷್ಮÃ ಯೋಜನೆ ಅಡಿ ಹಣ ಬಿಡುಗಡೆ ಮಾಡುತ್ತಿರುವ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ಕೊಡುವ ಬಗ್ಗೆ ಪ್ರಸ್ತಾಪಿಸಿದ್ದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಪಾಟೀಲ, ಗೃಹ ಲಕ್ಷಿ÷್ಮÃ ಹಣವನ್ನು ನಾವು ಚುನಾವಣೆಗಾಗಿ ಬಿಡುಗಡೆ ಮಾಡುತ್ತಿಲ್ಲ. ಇದು ಎರಡುವರೆ ವರ್ಷಗಳಿಂದ ನಿರಂತರವಾಗಿ ಹಣ ಕೊಡುತ್ತ ಬರಲಾಗಿದೆ. ಬಿಜೆಪಿಯವರು ಮೊದಲು ಬಿಹಾರ ಚುನಾವಣೆಯಲ್ಲಿ ಏನು ಮಾಡಿದರೂ ಅದನ್ನು ಹೇಳಲಿ. ಚುನಾವಣೆ ಇನ್ನು ಒಂದು ತಿಂಗಳಿಗಿAತ ಕಡಿಮೆ ಇರುವಾಗ ೧೦ ಸಾವಿರ ಹಣ ಕೊಟ್ಟರಲ್ಲ. ಆ ಬಗ್ಗೆ ಪ್ರಸ್ತಾಪಿಸಲಿ. ಚುನಾವಣೆ ಮುಗಿಯುತ್ತಿದ್ದಂತೆ ಬಂದ್ ಮಾಡಿದರು. ಮಹಾರಾಷ್ಟçದಲ್ಲಿ ಲಾಡ್ ಕಿ ಬೆಹನಾ ಎಂದು ಮಹಿಳೆಯರ ಮತ ಪಡೆದು ಬಳಿಕ ಬಂದ್ ಮಾಡಿದರು. ನಾವು ಅವರಂತೆ ಮಾಡಿಲ್ಲ. ಎರಡುವರೆ ವರ್ಷಗಳಿಂದಲೂ ಗ್ಯಾರಂಟಿ ಯೋಜನೆ ಕೊಡುತ್ತ ಬಂದಿದ್ದೇವೆ ಎಂದರು.
ಉಪ ಚುನಾವಣೆ ಆಡಳಿತ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಷ್ಠೆಯ ಮಾತೆ ಇಲ್ಲ. ನಾವು ರಾಜ್ಯದ ಜನರಿಗೆ ಐದು ಗ್ಯಾರಂಟಿ ಕೊಟ್ಟಿದ್ದೇವೆ. ನುಡಿದಂತೆ ನಡೆದಿದ್ದೇವೆ. ಜೊತೆಗೆ ಅಭಿವೃದ್ಧಿಗೂ ಹಣ ಒದಗಿಸಿದ್ದೇವೆ. ಈ ಆಧಾರದ ಮೇಲೆ ಜನರ ಬಳಿ ಮತಯಾಚನೆ ಮಾಡುತ್ತೇವೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಗೆಲುವು ನಿಶ್ಚಿತ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net