ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ; ವಾರ್ಡನ್‌ಗೆ ಎಚ್ಚರಿಕೆ

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸೂಳೆಭಾವಿ ಗ್ರಾಮದ ಬಿಸಿಎಂ ವ್ಯಾಪ್ತಿಯ ಬಾಲಕರ ಹಾಸ್ಟೆಲ್‌ಗೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾಽಕಾರಿ ಸಂಗಪ್ಪ ಅವರು ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ವ್ಯತ್ಯಾಸದ ಬಗ್ಗೆ ವಾರ್ಡನ್‌ಗೆ ತರಾಟೆಗೆ ತೆಗೆದುಕೊಂಡರು.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸೂಳೆಭಾವಿ ಗ್ರಾಮದ ಬಿಸಿಎಂ ವ್ಯಾಪ್ತಿಯ ಬಾಲಕರ ಹಾಸ್ಟೆಲ್‌ಗೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾಽಕಾರಿ ಸಂಗಪ್ಪ ಅವರು ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ವ್ಯತ್ಯಾಸದ ಬಗ್ಗೆ ವಾರ್ಡನ್‌ಗೆ ತರಾಟೆಗೆ ತೆಗೆದುಕೊಂಡರು.
Published on

ಜಿಲ್ಲೆಯ ಹುನಗುಂದ ತಾಲೂಕಿನ ಸೂಳೆಭಾವಿ ಗ್ರಾಮದಲ್ಲಿರುವ ಬಿಸಿಎಂ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಶನಿವಾರ ಜಿಲ್ಲಾಽಕಾರಿ ಸಂಗಪ್ಪ ಅವರು ಅನಿರೀಕ್ಷಿತ ಭೇಟಿ ನೀಡಿದರು. ಈ ವೇಳೆ ಹಾಸ್ಟೆಲ್ ಅವ್ಯವಸ್ಥೆ ಕಂಡು ತೀವ್ರ ಅಸಮಧಾನಗೊಂಡ ಡಿಸಿ ಅವರು, ಹಾಸ್ಟೆಲ್ ವಾರ್ಡನ್‌ಗೆ ತರಾಟೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.

ಹಾಸ್ಟೆಲ್‌ನಲ್ಲಿ ಸಂಪೂರ್ಣ ಅವ್ಯವಸ್ಥೆ ಎದ್ದು ಕಾಣಿಸಿತು. ಸ್ವಚ್ಛತೆಯ ಕೊರತೆ ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳ ಅಭಾವದ ಕಂಡು ಬಂದಿತು. ವಸತಿ ನಿಲಯದ ಶೌಚಾಲಯಗಳಲ್ಲಿ ಸಮರ್ಪಕ ಸ್ವಚ್ಛತೆ ಇರಲಿಲ್ಲ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶೌಚಾಲಯಗಳನ್ನು ಪ್ರತಿದಿನ ಸ್ವಚ್ಛವಾಗಿಡುವಂತೆ ನಿಲಯ ಮೇಲ್ವಿಚಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಡುಗೆಮನೆ ಪರಿಶೀಲಿಸಿದ ವೇಳೆ ಮೆನು ಪ್ರಕಾರ ಆಹಾರ ತಯಾರಿಸಲಾಗುತ್ತಿಲ್ಲ ಎಂಬುದು ಜಿಲ್ಲಾಽಕಾರಿಗಳ ಗಮನಕ್ಕೆ ಬಂದಿತು. ಅಡುಗೆ ಕೋಣೆಯಲ್ಲಿ ಯಾವುದೇ ರೀತಿಯ ತರಕಾರಿ ದಾಸ್ತಾನು ಇಲ್ಲದಿರವ ಬಗ್ಗೆ ಪ್ರಶ್ನಿಸಿದರು. ವಿದ್ಯಾರ್ಥಿಗಳಿಗೆ ನಿಗದಿತ ಮೆನು ಪ್ರಕಾರವೇ ಪೌಷ್ಟಿಕ ಆಹಾರ ಒದಗಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿಯಲ್ಲೂ ಸಹ ವ್ಯತ್ಯಾಸ ಕಂಡು ಬಂದಿತು. ಹಾಜರಾತಿ ನಿರ್ವಹಣೆಯಲ್ಲಿ ಲೋಪ ಕಾಣಿಸಿದ್ದರಿಂದ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಽಕಾರಿಗಳು, ಹಾಜರಾತಿ ದಾಖಲೆಯನ್ನು ನಿಯಮಾನುಸಾರ ನಿರ್ವಹಿಸಬೇಕು ಎಂದರು.
ಕಿಟಕಿಗಳಿಗೆ ಸೊಳ್ಳೆ ತಡೆ ಪರದೆ ಅಳವಡಿಸದಿರುವುದು ಹಾಗೂ ಕೊಠಡಿಗಳಲ್ಲಿನ ಸೀಲಿಂಗ್ ಫ್ಯಾನ್‌ಗಳು ಮಕ್ಕಳ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಅಳವಡಿಸಿರುವುದನ್ನು ಗಮನಿಸಿದ ಜಿಲ್ಲಾಽಕಾರಿ ಸಂಗಪ್ಪ, ಈ ಎಲ್ಲ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಿ, ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಉತ್ತಮ ವಾತಾವರಣ ಕಲ್ಪಿಸುವಂತೆ ವಾರ್ಡನ್ ಗೋಪಾಲ ರಾಠೋಡಗೆ ನಿರ್ದೇಶನ ನೀಡಿದರು.
ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ವಾರ್ಡನ್‌ಗೆ ಸೂಚಿಸಿದ ಜಿಲ್ಲಾಽಕಾರಿಗಳು, ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಹಾಗೂ ಸುರಕ್ಷತೆಗೆ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿ, ವಸತಿ ನಿಲಯದ ನಿರ್ವಹಣೆಯಲ್ಲಿ ಸುಧಾರಣೆ ತರದಿದ್ದರೆ ಸಂಬAಽಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ತಳ್ಳಿಕೇರಿ ಗ್ರಾಮದ ಹತ್ತಿರವಿರುವ ಸೂಳೆಭಾವಿ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ, ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಮೂಲಭೂತ ಸೌಲಭ್ಯ ಹಾಗೂ ಮೇನುವಿನ ಪ್ರಕಾರ ಊಟ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದುಕೊಂಡರು. ನಿಲಯ ಆವರಣದಲ್ಲಿರುವ ಕಿಚನ್ ಗಾರ್ಡನ್ ವೀಕ್ಷಿಸಿ, ಇದನ್ನು ಇನ್ನಷ್ಟು ವಿಸ್ತರಿಸಲು ಸಲಹೆ ನೀಡಿದರು. ಆಹಾರ ಧಾನ್ಯಗಳ ದಾಸ್ತಾನು, ಕಾಯಿ ಪಲ್ಲೆಗಳನ್ನು ವೀಕ್ಷಣೆ ಮಾಡಿದರು. ಸ್ನಾನದ ಕೋಣೆಯ ನೀರು ಪೈಪ್‌ನಲ್ಲಿ ಸೋರುತ್ತಿರುವುದನ್ನು ಕಂಡು ಕೂಡಲೇ ದುರಸ್ಥಿ ಮಾಡಿಸುವಂತೆ ವಾರ್ಡನ್ ಪೂರ್ಣಿಮಾ ಕಟ್ಟಿಮನಿ ಅವರಿಗೆ ಸೂಚಿಸಿದರು.
ಅಮೀನಗಡ ಹೋಬಳಿಯ ಕಂದಾಯ ನಿರೀಕ್ಷಕ ಡಿ.ಎಸ್.ಯತ್ನಟ್ಟಿ, ತಾಲೂಕಾ ಸಮಾಜ ಕಲ್ಯಾಣಾಽಕಾರಿ ಎಂ.ಎಚ್.ಕಟ್ಟಿಮನಿ, ನಿಲಯ ಮೇಲ್ವಿಚಾರಕಿ ಪೂರ್ಣಿಮಾ ಕಟ್ಟಿಮನಿ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net