ಬಾಗಲಕೋಟೆ: ನಮ್ಮ ಶರೀರ ಪರರ ಹಿತಕ್ಕಾಗಿ ಶ್ರಮಿಸಬೇಕು. ಸಾಧು-ಸಜ್ಜನರ ಶರೀರ ಗದ್ದುಗೆಯಾಗಿ ಪೂಜಿಸಲ್ಪಡುತ್ತದೆ. ಸಾಮಾನ್ಯ ಪ್ರಾಪಂಚಿಕ ಜೀವನ ನಡೆಸಿದವರ ಶರೀರ ಸ್ಮಶಾನದಲ್ಲಿ ಮಣ್ಣಲ್ಲಿ ಮಣ್ಣಾಗಿ, ಅಗ್ನಿಯಲ್ಲಿ ಬೂದಿಯಾಗಿ ಹೋಗುತ್ತದೆ. ಈ ಕುರಿತು ಮಕ್ಕಳಿಗೆ ಆಧ್ಯಾತ್ಮಿಕ ಚಿಂತನೆ ನೀಡುವ ಅಗತ್ಯ ಇದೆ ಎಂದು ಪ್ರದೀಪ ಗುರೂಜಿ ಹೇಳಿದರು.
ನವನಗರದ ಸೆಕ್ಟರ್ ನಂಬರ್ ೨೨ ರಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮನೆ-ಮನಗಳಲ್ಲಿ ದೇವರ ದಾಸಿಮಯ್ಯ ಅವರ ವಚನಗಳ ಮಾಸಿಕ ಚಿಂತನಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಅರ್ಥವುಂಟೆ0ದು ಅಹಂಕರಿಸಿ ಮಾಡುವನ ಭಕ್ತಿ, ತೊತ್ತಿನ ಕೂಟ, ತೊರೆಯನ ಮೇಳದಂತೆ. ತನು- ಮನ-ಧನದಲ್ಲಿ ವಂಚನೆಯುಳ್ಳ ಪ್ರಪಂಚಿಯ ಮನೆಯ ಕೂಳು, ಶುನಕನ ಬಾಯ ಎಲುವ ಪ್ರತಿಶುನಕ ತಿಂದAತೆ ಕಾಣಾ! ರಾಮನಾಥ. ಎಂದು ದೇವರ ದಾಸಿಮಯ್ಯನವರ ವಚನ ವಿಶ್ಲೇಷಣೆಯನ್ನು ತಿಳಿಸಿದರು.
-À.ಗು.ಹಳಕಟ್ಟಿ ಪ್ರತಿಷ್ಠಾನದ ಬಾಗಲಕೋಟೆ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ.ಚವಡಾಪುರ ಮಾತನಾಡಿ, ಪ್ರತಿಯೊಬ್ಬರು ಭಕ್ತಿ ಮಾರ್ಗ, ಜ್ಞಾನ ಮಾರ್ಗ, ಕಾಯಕ ಮಾರ್ಗದಲ್ಲಿ ಪ್ರಾಮಾಣಿಕವಾಗಿ ನಡೆದು ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು. ಆದ್ಯ ವಚನಕಾರರಾದ ದೇವರ ದಾಸಿಮಯ್ಯನವರು ಸಮಾಜದ ಅಂಕುಡೊAಕುಗಳನ್ನು ತಿದ್ದಲು ತಮ್ಮ ವಚನದಲ್ಲಿ ಅತ್ಯಂತ ನೇರನುಡಿಗಳನ್ನು ಬಳಸಿದ್ದಾರೆ ಎಂದರು.
ಸಮಾಜದಲ್ಲಿ ಪ್ರತಿ ತಿಂಗಳ ಒಬ್ಬರ ಮನೆಯಲ್ಲಿ ದೇವರ ದಾಸಿಮಯ್ಯನವರ ಒಂದು ವಚನ ವಿಶ್ಲೇಷಣೆಯ ಚಿಂತನ ಗೋಷ್ಠಿ ಜರುಗುತ್ತಿದೆ. ದೇವಾಂಗ ಸಮಾಜದ ಬಾಂಧವರು ಸಂಘಟಿತರಾಗಿ ತಮ್ಮೊಂದಿಗೆ ಮಕ್ಕಳು, ಮಿತ್ರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಚನಗೋಷ್ಠಿಯನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಜಂಪಣ್ಣ ಶೇಬನಕಟ್ಟಿ, ಎಚ್.ವೈ. ಗದ್ದನಕೇರಿ, ಮಲ್ಲಪ್ಪ ಚನ್ನಿ, ಎಸ್ ಎನ್ ಮುತ್ತಗಿ, ಜಿ.ಬಿ ಹಿರೇಮಠ, ಆರ್.ಎಸ್.ವಿರಕ್ತಿಮಠ, ಆರ್ ದಂಡಣ್ಣನವರ, ಲಕ್ಷಿ÷್ಮÃ ಹೊಸಕೋಟೆ, ಶಂಕ್ರಮ್ಮ ಗಾಡದ, ಸುರೇಶ ಉಕ್ಕಲಿ, ಸುರೇಶ ದಡ್ಡಿ ಮತ್ತಿತರರು ಇದ್ದರು.