ಉಪ ಚುನಾವಣೆ ರದ್ದುಗೊಳಿಸಲು ಆಗ್ರಹ

ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಮುಖ್ಯದ್ವಾರದ ಬಳಿಕ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಉಪ ಚುನಾವಣೆ ಅಭ್ಯರ್ಥಿ ನಾಗರಾಜ ಕಲಗೂಡ್ಕರ ಹೋರಾಟ ಆರಂಭಿಸಿರುವುದು.
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಮುಖ್ಯದ್ವಾರದ ಬಳಿಕ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಉಪ ಚುನಾವಣೆ ಅಭ್ಯರ್ಥಿ ನಾಗರಾಜ ಕಲಗೂಡ್ಕರ ಹೋರಾಟ ಆರಂಭಿಸಿರುವುದು.
Published on
ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಚುನಾವಣೆ ಆಯೋಗದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ. ಮೇ ೪ ರಂದು ಚುನಾವಣೆ ಫಲಿತಾಂಶ ಪ್ರಕಟಗೊಳಿಸಬಾರದು. ಕೂಡಲೇ ಈ ಉಪ ಚುನಾವಣೆ ರದ್ದುಗೊಳಿಸಬೇಕು ಎಂದು ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಉಪ ಚುನಾವಣೆ ಅಭ್ಯರ್ಥಿ ನಾಗರಾಜ ಕಲಗೂಡ್ಕರ ಹೋರಾಟ ಆರಂಭಿಸಿದ್ದಾರೆ.
ಇಲ್ಲಿ ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಬಳಿ ಶನಿವಾರ ಹೋರಾಟ ಆರಂಭಿಸಿರುವ ಅವರು, ಬಿಜೆಪಿ- ಕಾಂಗ್ರೆಸ್ ಪಕ್ಷ ಹಾಗೂ ಅಭ್ಯರ್ಥಿಗಳು, ನಾಯಕರು ಚುನಾವಣೆ ಅಕ್ರಮ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಅನೇಕ ಸಾಕ್ಷಿಗಳು ಇವೆ. ಇವರ ಅಕ್ರಮಗಳು ಕ್ಷೇತ್ರದ ಮತದಾರರಿಗೆ ತಿಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಹುದೊಡ್ಡ ಪೆಟ್ಟು ನೀಡಿವೆ. ಹೀಗಾಗಿ ಉಪ ಚುನಾವಣೆ ರದ್ದುಗೊಳಿಸುವಂತೆ ರಾಜ್ಯ, ಕೇಂದ್ರ ಚುನಾವಣೆ ಆಯೋಗಕ್ಕೆ ಮನವಿ ಮಾಡಲಾಗುವುದು. ಅಲ್ಲಿ ನ್ಯಾಯ ದೊರೆಯದೇ ಹೋದಲ್ಲಿ ಕೋರ್ಟ ಮೊರೆ ಹೋಗಲಾಗುವುದು ಎಂದು ತಿಳಿಸಿದರು.
ಈ ಉಪ ಚನಾವಣೆಯಲ್ಲಿ ನಾನು ಕೂಡಾ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ನಾಮಪತ್ರ ಅಂತಿಮವಾದ ಬಳಿಕ ಚುನಾವಣೆ ಅಽಕಾರಿಗಳು ಎಲ್ಲ ಅಭ್ಯರ್ಥಿಗಳಿಗೆ ತಿಳುವಳಿಕೆ ನೋಟಿಸ್ ನೀಡಿದ್ದಾರೆ. ಹಣ ಹಂಚುವುದು, ಮತದಾರರಿಗೆ ಆಮೇಶ ಒಡ್ಡುವುದು, ಧರ್ಮ, ಜಾತಿ ಹೆಸರಿನಲ್ಲಿ ಮತ ಕೇಳುವುದು ಅಕ್ರಮ, ಭ್ರಷ್ಟಾಚಾರ ಅಂತ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಅದರಂತೆ ಕಾಂಗ್ರೆಸ್‌ನವರು ಮತದಾನ ಪೂರ್ವದಲ್ಲಿ ಎರಡು ಮತದಾರರಿಗೆ ಹಣ ಹಂಚಿಕೆ ಮಾಡಿದ್ದಾರೆ. ವಿಡಿಯೋ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾರೆ. ಇನ್ನೂ ಬಿಜೆಪಿ ನಾಯಕರು ಧರ್ಮ, ಜಾತಿ ಹೆಸರಿನಲ್ಲಿ ಮತ ಕೇಳಿರುವುದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹೊರ ಬಿದ್ದಿದೆ. ಮತದಾರರಿಗೂ ಎರಡು ಪಕ್ಷದ ಅಕ್ರಮ ಗಮನಕ್ಕೆ ಇದೆ ಎಂದರು.
ಚುನಾವಣೆ ಆಯೋಗವು ಈ ಎಲ್ಲವನ್ನು ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಫಲಿತಾಂಶ ಪ್ರಕಟಿಸಬಾರದು. ಸಂಬAಧಪಟ್ಟವರ ಮೇಲೆ ಕ್ರಮ ಜರುಗಿಸುವುದರ ಜೊತೆಗೆ ಉಪ ಚುನಾವಣೆ ರದ್ದುಗೊಳಿಸಬೇಕು. ಕೇಂದ್ರ, ರಾಜ್ಯ ಚುನಾವಣೆ ಆಯೋಗಕ್ಕೆ ಇನ್ನೊಂದು ವಾರದಲ್ಲಿ ಮನವಿ ಸಲ್ಲಿಸಿ ಎಲ್ಲ ದಾಖಲೆ ಸಲ್ಲಿಸಲಿದ್ದೇನೆ. ಅಲ್ಲಿ ನ್ಯಾಯ ದೊರೆಯದೇ ಹೋದರೇ ಕೋರ್ಟಗೆ ಮೊರೆ ಹೋಗಲಾಗುವುದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net