ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಪಠ್ಯ ಸಾಮಗ್ರಿ, ಜಾಮಿಟ್ರಿ ಬಾಕ್ಸ್, ಕ್ಯಾಲ್ಕುಲೇಟರ್, ಮೊಬೈಲ್ ಫೋನ್ ಸೇರಿದಂತೆ ಇತರೆ ಎಲೆಕ್ಟಾçನಿಕ್ಸ್ ವಸ್ತುಗಳು, ಕೈಗಡಿಯಾರ, ಬಳೆ, ಯಾವುದೇ ಆಭರಣ, ಲೋಹದ ವಸ್ತುಗಳು (ಮಂಗಳ ಸೂತ್ರ ಹೊರತುಪಡಿಸಿ), ಕ್ಯಾಮರಾ, ಬ್ಲೂಟೂತ್ ಸಾಧನ ತರುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಪರೀಕ್ಷಾ ಪ್ರವೇಶ ಪತ್ರದ ಜೊತೆಗೆ ಯಾವುದಾದರೊಂದು ಗುರುತಿನ ಚೀಟಿ ತರುವುದನ್ನು ತಿಳಿಸಬೇಕು ಎಂದರು.