ಬಾಗಲಕೋಟೆ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಬಳಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ -Àಲಕ ಹಿಡಿದು ಘೋಷಣೆ ಹಾಕಿದ ಮುಖಂಡರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ಇತರರು ಇದ್ದರು
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾದ ಆರೋಪಕ್ಕೆ ಸಿಲುಕಿರುವ ಸಚಿವ ಬಿ.ನಾಗೇಂದ್ರ ಅವರನ್ನು ವಜಾಗೊಳಿಸುವವರೆಗೂ ವಿರಮಿಸಲ್ಲ ಎಂದು ಘೋಷಿಸಿದ್ದ ಬಿಜೆಪಿ ಇದೀಗ ಸದನದ ಒಳಗೆ ಹಾಗೂ ಹೊರಗಡೆ ಹೋರಾಟ ತೀವ್ರಗೊಳಿಸಿದೆ.
ಬಾಗಲಕೋಟೆ ಜಿಲ್ಲಾ ಬಿಜೆಪಿ ಘಟಕದಿಂದ ಮಂಗಳವಾರ ಬೆಳಗ್ಗೆಯಿಂದ ಜಿಲ್ಲಾಡಳಿತ ಭವನದ ಎದುರು ತಮ್ಮ ಅನಿಽðಷ್ಟ ಆಹೋರಾತ್ರಿ ಧರಣಿಯನ್ನು ಆರಂಭಿಸಿದೆ. ಭವನದ ಪ್ರವೇಶ ದ್ವಾರದ ಬಳಿ ಶಾಮಿಯನ ಹಾಕಿ ಧರಣಿ ಆರಂಭಿಸಿರುವ ಕಮಲ ಮುಖಂಡರು, ಕಾರ್ಯಕರ್ತರು ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು. ಇಲ್ಲವೆ ಸರ್ಕಾರ ಅವರನ್ನು ವಜಾಗೊಳಿಸಬೇಕು. ಅಲ್ಲಿ ವರೆಗೂ ಹೋರಾಟ ನಿಲ್ಲುಸುವುದಿಲ್ಲ ಎಂದು ಎಚ್ಚರಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎಂ.ಕೆ.ಪಟ್ಟಣಶೆಟ್ಟಿ ಸೇರಿ ಹಿರಿಯ ಮುಖಂಡರು ಮಾತನಾಡಿ, ನಿಗಮದಲ್ಲಿ ೮೭ ಕೋಟಿ ರೂ. ಹಗರಣ ಆಗಿದೆ ಎಂದು ಸದನದಲ್ಲೆ ಅಂದಿನ ಸಿಎಂ ಸಿದ್ಧರಾಮಯ್ಯ ಒಪ್ಪಿಕೊಂಡಿದ್ದರು. ಬಿಜೆಪಿ ಹೋರಾಟದಿಂದ ರಾಜೀನಾಮೆಯನ್ನು ಪಡೆದಿದ್ದರು. ಇದೀಗ ಸಚಿವ ನಾಗೇಂದ್ರ ಅವರಿಗೆ ಇನ್ನೂ ಕ್ಲೀನ್ ಚೀಟ್ ಸಿಕ್ಕಿಲ್ಲ. ಅದಾಗ್ಯೂ ಡಿ.ಕೆ.ಶಿವಕುಮಾರ ಸಂಪುಟಕ್ಕೆ ಅವರನ್ನು ಸೇರಿಸಿಕೊಳ್ಳುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದರು.
ಸಂಪುಟದಲ್ಲಿ ಕಳಂಕಿತರಿಗೆ ಅವಕಾಶ ನೀಡಬಾರದು. ಒಳ್ಳೆಯವರಿಗೆ ಸಚಿವ ಸ್ಥಾನ ನೀಡಲಿ. ನಾಗೇಂದ್ರ ಬದಲಿಗೆ ಅದೇ ಸಮಾಜದ ಬೇರೆಯವರಿಗೆ ಮಂತ್ರಿ ಸ್ಥಾನ ಕೊಡಲಿ. ಅದನ್ನು ಬಿಟ್ಟು ಭ್ರಷ್ಟಾಚಾರದ ಆರೋಪ ಇರುವವರಿಗೆ ಸಚಿವ ಸ್ಥಾನ ನೀಡುವುದು ಎಷ್ಟು ಸರಿ? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಹೊಡೆದು ಬೇರೆ ರಾಜ್ಯದ ಚುನಾವಣೆ ಮಾಡಿದ್ದಾರೆ. ಮಾತು ಎತ್ತಿದರೆ ಸಂವಿಧಾನದ ಪುಸ್ತಕ ತೋರಿಸುವವವರಿಗೆ ಇದು ಕಣ್ಣಿಗೆ ಕಾಣಿಸುವುದಿಲ್ಲವೆ ಎಂದು ಖಾರವಾಗಿ ಪ್ರಶ್ನಿಸಿದರು.
ನೀಟ್ ಪ್ರಶ್ನೆ ಪತ್ರಿಕ ಲೀಕ್ ವಿಚಾರದಲ್ಲಿ ತಕ್ಷಣವೇ ಕ್ರಮ ತೆಗೆದುಕೊಂಡು, ಮರು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದರೂ ಸಚಿವ ಧರ್ಮೆಂದ್ರ ಪ್ರದಾನ ರಾಜೀನಾಮೆ ನೀಡುವಂತೆ ಹೋರಾಟ ಮಾಡಿದರು. ಈಗ ತಮ್ಮ ಸರ್ಕಾರದಲ್ಲಿ ಕಳಂಕ ಹೊತ್ತಿರುವ ಇನ್ನೂ ಕ್ಲೀನ್ ಚೀಟ್ ಪಡೆದಿಲ್ಲ. ಅಂಥ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾಗೇಂದ್ರ ಅವರನ್ನು ಸಂಪುಟದಿAದ ಕೈಬಿಡುವವರೆಗೂ ಬಿಜೆಪಿ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಯ್ಯ ಮೂಗನೂರಮಠ, ಸಿ.ಟಿ.ಉಪಾಧ್ಯ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ವಿಜಯಲಕ್ಷಿ÷್ಮÃ ತುಂಗಳ, ಜಿ.ಎನ್.ಪಾಟೀಲ, ಅಶೋಕ ಲಿಂಬಾವಳಿ, ಬಸವರಾಜ ಯಂಕAಚಿ, ಬಸವರಾಜ ಹುನಗುಂದ, ಸುರೇಶ ಕೊಣ್ಣೂರ, ಶಿವಾನಂದ ಸುರಪುರ, ಭಾಗ್ಯ ಊದ್ಲುರ, ಉಮೇಶ ಹಂಚಿನಾಳ, ಶೇಖರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.