ಬ್ಯಾಂಕ್ ವ್ಯವಸ್ಥಾಪಕ ಗುರುರಾಜ್ ಅಮಾನತು !

ಗುರುರಾಜ್ ಎಸ್. (ಅಮಾನತುಗೊಂಡಿರುವ ಬ್ಯಾಂಕಿನ ವ್ಯವಸ್ಥಾಪಕ)
ಗುರುರಾಜ್ ಎಸ್. (ಅಮಾನತುಗೊಂಡಿರುವ ಬ್ಯಾಂಕಿನ ವ್ಯವಸ್ಥಾಪಕ)
Published on
ಅಶೋಕ ಶೆಟ್ಟರ, ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ)ನ ಲೋಕಾಪುರ ಶಾಖೆಯಲ್ಲಿ ವ್ಯವಸ್ಥಾಪಕರೇ ಬ್ಯಾಂಕಿನ ರೂ. ೬೫ ಲಕ್ಷ ಗಳನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡು ಮರೆಮಾಚಿದ್ದ ಘಟನೆ ಬೆಳಕಿಗೆ ಬಂದಿರುವ ಬೆನ್ನಲ್ಲೆ ಇದೀಗ ಅಽಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಬ್ಯಾಂಕಿನ ವ್ಯವಸ್ಥಾಪಕ ಗುರುರಾಜ ಎಸ್. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಮುಂದುವರೆದು ಅವರ ವಿರುದ್ಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಭಾನುವಾರ ಕ್ರಿಮಿನಲ್ ಕೇಸ್ ದಾಖಲಿಸುವ ಸಾಧ್ಯತೆ ಇದೆ. ಹಾಗೆಯೇ ದುರುಪಯೋಗ ಪಡಿಸಿಕೊಂಡಿರುವ ಹಣವನ್ನು ವಸೂಲಿ ಮಾಡಲು ಬ್ಯಾಂಕಿನ ಹಿರಿಯ ಅಽಕಾರಿಗಳು ಸಿದ್ಧತೆ ನಡೆಸಿರುವುದಾಗಿ ಬಿಡಿಸಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ನೀಲಪ್ಪನವರ `ವಿಜಯವಾಣಿ'ಗೆ ತಿಳಿಸಿದ್ದಾರೆ.
ಬ್ಯಾಂಕಿನ ಹಣವನ್ನು ತನ್ನ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡು ದುರ್ಬಳಿಕೆ ಮಾಡಿಕೊಂಡಿರುವ ಆರೋಪ ಹೊತ್ತಿರುವ ವ್ಯವಸ್ಥಾಪಕ ಗುರುರಾಜ್ ಎಸ್. ಏತನ್ಮಧ್ಯ ಕಳೆದ ನಾಲ್ಕೆÊದು ದಿನಗಳಿಂದ ತಮ್ಮ ಮೊಬೈಲ್ ಬಂದ್ ಮಾಡಿಕೊಂಡು ಬ್ಯಾಂಕಿನ ಅಽಕಾರಿಗಳು ಮತ್ತು ಸಿಬ್ಬಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಪೊಲೀಸರು ಅವರನ್ನು ಪತ್ತೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಹಣ ದುರುಪಯೋಗ ಪ್ರಕರಣದಲ್ಲಿ ಅನೇಕ ಅನುಮಾನಗಳು ಮೂಡಿಸುತ್ತಿದ್ದು, ಇದು ಅವರೊಬ್ಬರು ಮಾಡಿರುವುದಾ ಅಥವಾ ಇದರಲ್ಲಿ ಇನ್ನ್ಯಾರಾದರೂ ಕೈಜೋಡಿಸಿದ್ದಾರಾ? ಹಣ ದುರುಪಯೋಗ ಪಡಿಸಿಕೊಂಡು ಎರಡು ತಿಂಗಳಾದರೂ ಬ್ಯಾಂಕಿನ ಪ್ರದಾನ ಕಚೇರಿ ಅಽಕಾರಿಗಳ ಗಮನಕ್ಕೆ ಬಂದಿಲ್ಲ ಏಕೆ? ಎನ್ನುವ ಹಲವು ಪ್ರಶ್ನೆಗಳು ಮೂಡಿದ್ದು, ೬೪ ತನಿಖೆಯ ನಡೆಯಬೇಕಿದೆ ಎಂದು ಬ್ಯಾಂಕಿನ ಅಽಕಾರಿಗಳು ಅಭಿಪ್ರಾಯ ಪಡುತ್ತಾರೆ.
ಎಸ್‌ಬಿಐನಿಂದ ಐಡಿಎ-ï‌ಸಿಗೆ ವರ್ಗಾವಣೆ:
ಬಿಡಿಸಿಸಿ ಬ್ಯಾಂಕಿನಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಸಂಗ್ರಹವಾದರೆ ಅದನ್ನು ಎಸ್‌ಬಿಐ ಖಾತೆಗೆ ಜಮಾ ಮಾಡಲಾಗುತ್ತದೆ. ಇಲ್ಲಿ ಲೋಕಾಪುರ ಶಾಖೆಯಲ್ಲಿ ಸಹಿ ಅಽಕಾರವನ್ನು ಮ್ಯಾನೇಜರ್ ಒಬ್ಬರೆ ಹೊಂದಿದ್ದು, ಅಚ್ಚರಿ. ಹೀಗೆ ಲೋಕಾಪುರ ಶಾಖೆಯಿಂದ ಎಸ್‌ಬಿಐಗೆ ಜಮಾ ಮಾಡಿದ ಹಣದಲ್ಲಿ ಅಂದಾಜು ೬೫ ಲಕ್ಷ ರೂ.ಗಳನ್ನು ಗುರುರಾಜ್ ಎಸ್. ಅವರು ಮುಧೋಳದಲ್ಲಿ ಇರುವ ಐಡಿಎ-ï‌ಸಿ ಬ್ಯಾಂಕಿನ ತಮ್ಮ ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡು, ಬ್ಯಾಂಕಿನ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
=====
ತಿಂಗಳಿAದ ಬ್ಯಾಂಕಿಗೆ ಬಂದಿಲ್ಲ :
ಇನ್ನು ಲೋಕಾಪುರ ಶಾಖೆಯ ವ್ಯವಸ್ಥಾಪಕ ಗುರುರಾಜ್ ಎಸ್. ಅವರು ಒಂದು ತಿಂಗಳಿಗೂ ಹೆಚ್ಚು ದಿನಗಳಿಂದ ರಜೆಯಲ್ಲಿ ಇದ್ದಾರೆ. ಮೊದಲು ೧೫ ದಿನಗಳ ರಜೆ ಹಾಕಿದ್ದ ಅವರು ಬಳಿಕ ಬೈಕ್ ಅಪಾಘಾತದಲ್ಲಿ ಘಾಯಗೊಂಡಿದ್ದು, ರಜೆ ಮುಂದುವರೆಸುವAತೆ ಪತ್ರ ನೀಡಿ ಹೋಗಿದ್ದಾರೆ. ಈಗ ನಾಲ್ಕೆÊದು ದಿನಗಳಿಂದ ಮೊಬೈಲ್ ಸಂಪರ್ಕದಲ್ಲಿ ಸಿಗುತ್ತಿಲ್ಲ ಎನ್ನುವುದು ಡಿಸಿಸಿ ಬ್ಯಾಂಕ್ ಎಂ.ಡಿ. ಎಸ್.ಎನ್.ನೀಲಪ್ಪನವರ ಹೇಳುವಂತದ್ದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net