ಗ್ರಾ.ಪಂ ಚುನಾವಣಾ ಅಖಾಡಕ್ಕೆ ನಟಿ ರಂಜಿನಿ ರಾಘವನ್ ಎಂಟ್ರಿ: ಭರ್ಜರಿ ಪ್ರಚಾರಕ್ಕೆ ಸಿದ್ಧತೆ!

Ranjani Raghavan
Published on

ಬಾಗಲಕೋಟೆ: ಗ್ರಾಮ ಪಂಚಾಯಿತಿ ಚುನಾವಣೆ ಕಾವು ಜೋರಾಗುತ್ತಿದ್ದು, ಗೆಲುವಿಗಾಗಿ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಇದೀಗ ಚುನಾವಣಾ ಪ್ರಚಾರಕ್ಕೆ ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ರಂಜಿನಿ ರಾಘವನ್​ ಧುಮುಕಿದ್ದಾರೆ.

ಬಾಗಲಕೋಟೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮ ಪಂಚಾಯತಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವುದಾಗಿ ಸ್ವತಃ ರಂಜಿನಿ ಅವರೇ ಹೇಳಿಕೊಂಡಿದ್ದಾರೆ. ಸ್ನೇಹಿತರಾದ ವಿಜಯಲಕ್ಷ್ಮಿ ಹೂಗಾರ, ಯಂಕಪ್ಪ ನುಚ್ಚಿನ ಹಾಗೂ ಬಿ.ಎನ್. ಮೇತ್ರಿ ಪರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.

ರಂಜಿನಿ ನಾಳೆ ಗಿರಿಸಾಗರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಒಟ್ಟು 19 ಸ್ಥಾನಗಳಲ್ಲಿ 6 ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ಆಗಿದ್ದು, 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೂವರು ಅಭ್ಯರ್ಥಿಗಳ ಪರವಾಗಿ ಕಿರಿತೆರೆ ತಾರೆ ನಾಳೆ ಪ್ರಚಾರ ನಡೆಸಲಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net